Sangeetha Sringeri: ಬಾಯ್ತುಂಬ ʻದೀದೀʼ ಎನ್ನುವ ಪ್ರತಾಪ್ ಬಗ್ಗೆ ಸಂಗೀತಾ ಈ ರೀತಿ ಮಾತಾಡೋದಾ?
Sangeetha Sringeri: ಬಾಯ್ತುಂಬ ದೀದೀ ಎನ್ನುತ್ತಿದ್ದ ಪ್ರತಾಪ್ ಬಗ್ಗೆ ಸಂಗೀತಾ ಆಡಿದ ಮಾತುಗಳು ಅವರ ನಡುವೆ ಮನಸ್ತಾಪಕ್ಕೆ ಕಾರಣವಾಗಿದೆ.
Sangeetha Sringeri: ಬಿಗ್ ಬಾಸ್ ಮನೆಯೊಳಗೆ ಯಾವಾಗ ಏನೂ ಬೇಕಾದರೂ ನಡೆಯಬಹುದು. ಯಾರು ಇಂದು ಕ್ಲೋಸ್ ಆಗಿರುತ್ತಾರೋ ಅವರೇ ನಾಳೆ ಶತ್ರುಗಳಾಹಬಹುದು. ಇದಕ್ಕೆ ಉದಾಹರಣೆ ಎಂಬಂತೆ ಈ ರೀತಿಯ ಅನೇಕ ಘಟನೆಗಳು ನಡೆದಿವೆ. ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಂತೂ ಈ ರೀತಿಯ ಅನೇಕ ಪ್ರಸಂಗಗಳನ್ನು ನೋಡಿದ್ದೇವೆ.
ಬಿಗ್ ಬಾಸ್‌ನಲ್ಲಿ ಆತ್ಮೀಯರಾಗಿದ್ದ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಧ್ಯೆ ಮೂಡಿದ ಬಿರುಕು ಇಂದು ಬೆಟ್ಟವಾಗಿದೆ. ಒಬ್ಬರನ್ನು ಕಂಡರೆ ಇನ್ನೊಬ್ಬರು ಉರಿದು ಬೀಳುವಂತೆ ಮಾಡಿದೆ. ಈಗ ಇದೇ ರೀತಿ ಸಂಗೀತಾ ಜೊತೆ ಪ್ರತಾಪ್‌ಗೂ ವೈಮನಸ್ಸು ಮೂಡಿದೆ. ಬಾಯ್ತುಂಬ ದೀದೀ ಎನ್ನುತ್ತಿದ್ದ ಪ್ರತಾಪ್ ಬಗ್ಗೆ ಸಂಗೀತಾ ಆಡಿದ ಮಾತುಗಳು ಅವರ ನಡುವೆ ಮನಸ್ತಾಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ : BBK10: ವರ್ತೂರ್ ತೊಡೆ ಮೇಲಿರುವ ಸ್ವಾಮೀಜಿ ಹೇಳಿದ ಆ ಟ್ಯಾಟೂ ಇದೆ ನೋಡಿ.. ಯಾವಾಗ, ಯಾಕೆ ಹಾಕಿಸಿದ್ದು ಗೊತ್ತೇ!
ಬಿಗ್ ಬಾಸ್ ಮನೆಯಲ್ಲಿ ಯಾರೂ ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವಂತಿಲ್ಲ. ಯಾರಾದರೂ ಹಗಲು ಹೊತ್ತಲ್ಲಿ ಮಲಗಿದರೆ ಶಿಕ್ಷೆ ನೀಡಲಾಗುತ್ತದೆ. ಇದೇ ವಿಚಾರಕ್ಕೆ ಸಂಗೀತಾ ಮತ್ತು ಪ್ರತಾಪ್ ಮಧ್ಯೆ ಮನಸ್ತಾಪ ಉಂಟಾಗಿದೆ.
ಡ್ರೋನ್ ಪ್ರತಾಪ್ ಬಾತ್ ರೂಮ್‌ನಲ್ಲಿ ಮಲಗಿರಬಹುದು ಎಂದು ಕೆಲವು ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಪ್ರತಾಪ್ ಆವಾಗಿನಿಂದ ಮಲಗಿದ್ದಾನೆ ಎಂದು ಸಂಗೀತಾ ಶೃಂಗೇರಿ ಹೇಳುತ್ತಾರೆ. ಅದಕ್ಕೆ ವಿನಯ್, ಬಾತ್ ರೂಮ್ ಅಲ್ಲಿ ಮಲಿಗಿದ್ದಾ ಎಂದು ಕೇಳುತ್ತಾರೆ. ನೀರು ಹಾಕಿಕೊಳ್ಳೋದು ಕೇಳುತ್ತಿಲ್ಲ.. ಬಟ್ಟೆ ಒಗೆಯುವ ಶಬ್ದವೂ ಕೇಳುತ್ತಿಲ್ಲ ಅಂತ ಸಂಗೀತಾ ಹೇಳ್ತಾರೆ. ಆ ಮಾತು ಕೇಳಿ ಡ್ರೋನ್ ಪ್ರತಾಪ್ ಅವರ ಕೋಪ ನೆತ್ತಿಗೇರುತ್ತದೆ.
ನಾನು ಸ್ನಾನ ಮಾಡೋಕೆ ಹೋದರೆ ಸ್ನಾನನೇ ಮಾಡ್ತೀನಿ ಎಂದು ಹೇಳುತ್ತಾರೆ. ತಾವು ತಮಾಷೆ ಮಾಡಿದ್ದು ಎಂದು ಸಂಗೀತಾ ಶೃಂಗೇರಿ ಹೇಳುತ್ತಾರೆ. ಆದರೆ ಪ್ರತಾಪ್ ಆ ಮಾತನ್ನು ತಮಾಷೆಯಾಗಿ ಸ್ವೀಕರಿಸುವುದಿಲ್ಲ. ಇದೇ ವಿಚಾರ ಇವರಿಬ್ಬರ ಜಗಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಸಿದ್ಧಾರ್ಥ್ ಜೊತೆ ಅದಿತಿ ರಾವ್ ರಿಲೇಷನ್‌ಶಿಪ್ ಪಕ್ಕಾ.! ಮದುವೆ ಯಾವಾಗ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.