BBK 10: ಕಪ್ಪು ಕನ್ನಡಕ ಧರಿಸಿ ಡ್ರೋನ್ ಹಾಗೂ ಸಂಗೀತಾ ಬಿಗ್ಬಾಸ್ ಮನೆಗೆ ರೀ ಎಂಟ್ರೀ!
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ವೊಂದರಲ್ಲಿ ಮುಖಕ್ಕೆ ಕೆಮಿಕಲ್ ನೀರು ಹಾಕಿದ ಕಾರಣದಿಂದಾಗಿ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾದವರೂ, ಇದೀಗ ಮತ್ತೆ ದೊಡ್ಮೆನೆ ವಾಪಸ್ ಬಂದಿದ್ದಾರೆ.
Sangeetha And Drone Prathap Back To BBK: ಬಿಗ್ಬಾಸ್ ಮನೆಯೊಳಗೆ ಬಿಗ್ಬಾಸ್ ಲೋಕ ಆಟದಲ್ಲಿ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿದೆ. ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆಯುತ್ತಿದ್ದು, ಹಲವರು ಟಾರ್ಗೆಟ್ ಮಾಡಿಕೊಂಡು ಆಡುತ್ತಿದ್ದಾರೆ. ಅದರಲ್ಲೂ ಸಂಗೀತಾ ಮತ್ತು ವಿನಯ್ ಮಧ್ಯ, ಕಾರ್ತಿಕ್ ಮತ್ತು ವಿನಯ್ ಮಧ್ಯ, ಸಂಗೀತಾ ಮತ್ತು ನಮ್ರತಾ ಮಧ್ಯ ಹೀಗೆ ವೈಯಕ್ತಿಕವಾಗಿ ಆಟಗಳನ್ನು ಆಡುತ್ತಿದ್ದಾರೆ.
ಈ ಟಾಸ್ಕ್ನಲ್ಲಿ ಒಬ್ಬರಿಗೊಬ್ಬರನ್ನು ಕೆಣಕುತ್ತಿದ್ದು, ಇದೀಗ ದೊಡ್ಮನೆಯಲ್ಲಿ ಎಲ್ಲೋ ಒಂದು ಕಡೆ ಅನಾಹುತ ಮಾಡಲಿದೆ ಎಂದೇ ಅಂದಾಜಿಸಲಾಗಿತ್ತು. ಬಹುಶಃ ಅದೇ ಆಗಿರಬಹುದು. ಟಾಸ್ಕ್ ವೊಂದರಲ್ಲಿ ಅವರ ಮುಖಕ್ಕೆ ಕೆಮಿಕಲ್ ನೀರು ಹಾಕಿದ ಕಾರಣದಿಂದಾಗಿ ಅಸ್ವಸ್ಥಗೊಂಡಿದ್ದರಿಂದ, ಇಬ್ಬರ ಕಣ್ಣಿಗೆ ಮತ್ತು ಮೂಗು, ಬಾಯಿಗೆ ನೀರು ಬಿದ್ದ ಪರಿಣಾಮದಿಂದ ಇಬ್ಬರೂ ಒದ್ದಾಡಿದ ಕಾರಣ, ನಿನ್ನೆ ದಿಢೀರ್ ನೆ ದೊಡ್ಮನೆಯಿಂದ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಹೊರ ಬಂದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನೂ ಓದಿ: BBK 10: ಧಿಡೀರನೇ ಬಿಗ್ಬಾಸ್ ಮನೆಯಿಂದ ಹೊರಬಂದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್:ದೊಡ್ಮನೆಯಲ್ಲಿ ನಡೆದೇ ಹೋಯ್ತು ಅನಾಹುತ!
ಇಂದು ವಾರದ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚಾ ಸುದೀಪ್ ಕೂಡ ಮಾತನಾಡಿದ್ದು, ಈ ವೇಳೆ ಟಾಸ್ಕ್ ಮಧ್ಯದಲ್ಲಿ ಮನೆಯಿಂದ ಹೊರ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತಾ ಶೃಂಗೇರಿ ಹಾಗೂ ಪ್ರತಾಪ್ ಈಗ ಮನೆಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.ಮನೆಯವರೆಲ್ಲರೂ ಕಿಚ್ಚನ ಪಂಚಾಯ್ತಿಗೆ ರೆಡಿ ಆಗಿ ಕುಳಿತಿದ್ದಾಗ ಅವರಿಬ್ಬರೂ ಸಹ ಮುಖ್ಯದ್ವಾರದಿಂದ ಮನೆಯೊಳಗೆ ಆಗಮಿಸುತ್ತಿರುವ ದೃಷ್ಯ ಪ್ರೋಮೋದಲ್ಲಿ ಕಾಣುತ್ತದೆ.ಕಪ್ಪು ಕನ್ನಡಕ ಧರಿಸಿರುವುದರಿಂದ ಅವರಿಬ್ಬರ ಕಣ್ಣು ಕಾಣುವಿದೇ ಇಲ್ಲವೇನೋ ಎಂದು ಕೆಲವರು ಅಂದುಕೊಂಡಿದ್ದಾರೆ.
ಮನೆ ಡೋರ್ ಓಪನ್ ಆಗುತ್ತಿದ್ದಂತೆ ಎಲ್ಲರೂ ಆ ಕಡೆಗೆ ನೋಡಿದಾಗ, ಸಂಗೀತಾ ಹಾಗೂ ಕಾರ್ತಿಕ್ ಅಸ್ಪಷ್ಟವಾಗಿ ಕಾಣುವವರಂತೆ ನಿಧಾನವಾಗಿ ನಡೆದುಕೊಂಡು ಮನೆಯೊಳಗೆ ಬಂದಿದ್ದಾರೆ. ಮನೆಯವರಲ್ಲಿ ಕೆಲವರು ಓಡಿ ಹೋಗಿ ಅವರನ್ನು ಬರ ಮಾಡಿಕೊಂಡರೂ, ಆದರೆ ಅವರಿಬ್ಬರೂ ಅಸಮಾಧಾನವಾಗಿದ್ದಾರೆ ಎಂದು ತೋರುತ್ತದೆ. ಎದುರಾಳಿ ತಂಡದವರು ಅವರನ್ನು ಸುಮ್ಮನೆ ನೋಡುತ್ತಿದ್ದರೇ, ಇತ್ತ ಕಾರ್ತಿಕ್ ಹಾಗೂ ತನಿಷಾ ಇವರಿಬ್ಬರ ಈ ಸ್ಥಿತಿಯನ್ನು ನೋಡಿ ತುಂಬಾ ಬೇಸರ ಮಾಡಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ