Karthik Back To Game: ಬಿಗ್‌ಬಾಸ್‌ ಕನ್ನಡ  ಸೀಸನ್‌ 10 ರ ಕಾರ್ಯಕ್ರಮದ ಡ್ರೋನ್ ಪ್ರತಾಪ್ ತಂಡವನ್ನು ಕಾರ್ತಿಕ್ ಸೇರಿದರೇ, ಇತ್ತ ದುರ್ಬಲ ಸದಸ್ಯರೊಬ್ಬರನ್ನ ತಂಡದಿಂದ ಹೊರಗೆ ತಳ್ಳಬೇಕಾದ ಪರಿಸ್ಥಿತಿ ಬಂದಾಗ ಕಾರ್ತಿಕ್‌ನ ಡ್ರೋನ್ ಪ್ರತಾಪ್ ಹೊರಗಿಟ್ಟರು. ಆ ಮೂಲಕ ಕ್ಯಾಪ್ಟೆನ್ಸಿ ಓಟದಿಂದ ಕಾರ್ತಿಕ್‌ ಹೊರಬಿದಿದ್ದರು. ಈ ವಾರದ ಎಲ್ಲಾ ಟಾಸ್ಕ್‌ಗಳಲ್ಲಿ ಡ್ರೋನ್ ಪ್ರತಾಪ್ ನೇತೃತ್ವದ ತಂಡ ಸೋಲು ಅನುಭವಿಸಿದ್ದರಿಂದ, ಈತನ ನೇತೃತ್ವದ ಸಂಪೂರ್ಣ ತಂಡ ಕ್ಯಾಪ್ಟೆನ್ಸಿ ರೇಸ್‌ನಿಂದ ಹೊರಬಿದ್ದಿದೆ. ಇದೀಗ ನೋಡಿದ್ರೆ, ಡ್ರೋನ್ ಪ್ರತಾಪ್ ಅವರ ಮೈಂಡ್‌ ಗೇಮ್‌ನ ‘ಬಿಗ್ ಬಾಸ್‌’ ಕಂಪ್ಲೀಟ್‌ ಆಗಿ ಉಲ್ಟಾ ಪಲ್ಟಾ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಒಂದು ರೀತಿ ನೋಡುವುದಾರದರೇ, ನಿಯತ್ತಿನಿಂದ ಹಾಗೂ ಕೃತಜ್ಞತಾ ಭಾವದಿಂದ ಡ್ರೋನ್ ಪ್ರತಾಪ್‌ ತಂಡಕ್ಕೆ ಬಂದ ಕಾರ್ತಿಕ್‌ನನ್ನು, ಒಬ್ಬ ದುರ್ಬಲ ಸದಸ್ಯನನ್ನ ತಂಡದಿಂದ ಹೊರಗಿಡಬೇಕಾದ ಪರಿಸ್ಥಿತಿಯಲ್ಲಿ ಡ್ರೋನ್‌ ಪ್ರತಾಪ್‌ "ಟಾಸ್ಕ್ ಅಂತ ಬಂದಾಗ ದುರ್ಬಲ ಅಂತಲ್ಲ. ಮಾತು ಅಂತ ಬಂದಾಗ ಸಂಯಮವನ್ನ ಕಳೆದುಕೊಳ್ಳುತ್ತಾರೆ. ಅದಕ್ಕಾಗಿ ಕಾರ್ತಿಕ್ ಅವರನ್ನ ಹೊರಗಡೆ ಇಡುತ್ತಿದ್ದೇನೆ" ಎಂದಿದ್ದರು. ಆ ವೇಳೆ ವೀಕ್ಷಕರಿಗೆ ತಕ್ಷಣ ನೆನಪಾಗಿದ್ದು, ಕಳೆದ ವಾರದ ಟಾಸ್ಕ್‌ನಲ್ಲಿ ಡ್ರೋನ್ ಪ್ರತಾಪ್ ಉಸ್ತುವಾರಿ ಮಾಡುತ್ತಿದ್ದಾಗ ಕಾರ್ತಿಕ್ ಕಿರುಚಾಡಿದ್ದು. ಡ್ರೋನ್ ಪ್ರತಾಪ್ ಕಟ್ಟುನಿಟ್ಟಾಗಿ ರೂಲ್ಸ್ ಹೇಳುತ್ತಿದ್ದಾಗ, ಕಾರ್ತಿಕ್‌ ಕೋಪದಿಂದ ಕೂಗಾಡಿದ್ದರು. "ಹೋಗೋಲೇ" ಎಂದಿದ್ದರು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಡ್ರೋನ್ ಪ್ರತಾಪ್ ಜಿದ್ದು ಸಾಧಿಸುತ್ತಿದ್ದಾರೆ ಎಂದು ವೀಕ್ಷಕರು ಭಾವಿಸಿದರು.


ಇದನ್ನೂ ಓದಿ: ಚಂದನ್‌, ರೂಪೇಶ್, ಶೈನ್ ಶೆಟ್ಟಿಯಂತೆ ಈ ಬಾರಿಯೂ ʼಅವಿನಾಶ್‌ ಶೆಟ್ಟಿʼ ಬಿಗ್‌ ಬಾಸ್‌ ವಿನ್ನರ್‌..!


ಆದರೆ ಇದೀಗ ಎಲ್ಲಾ ಚಟುವಟಿಕೆಗಳಲ್ಲೂ ಕಾರ್ತಿಕ್‌ಗೆ  ಉಸ್ತುವಾರಿ  ಕೆಲಸವನ್ನ ಉತ್ತಮವಾಗಿ ನಿಭಾಯಿಸಿದರು ಎಂದು ಇತರೆ ಸ್ಪರ್ಧಿಗಳಿಂದ ಮೆಜಾರಿಟಿ ವೋಟ್‌ ಬಿದ್ದಿದರಿಂದ ಬಿಗ್‌ಬಾಸ್‌ ಕಾರ್ತಿಕ್‌ಗೆ ಕ್ಯಾಪ್ಟೆನ್ಸಿ ಓಟಕ್ಕೆ ವಾಪಸ್ ಬರಲು ಅವಕಾಶ ನೀಡಿದರು. ಯಾವ ಕೈಯಲ್ಲಿ ಕಾರ್ತಿಕ್‌ ಫೋಟೋಗೆ ಡ್ರೋನ್ ಪ್ರತಾಪ್ X ಚಿಹ್ನೆ ಹಾಕಿದ್ರೋ, ಅದೇ ಕೈಯಲ್ಲಿ ಕಾರ್ತಿಕ್‌ ಫೋಟೋದಿಂದ X ಚಿಹ್ನೆಯನ್ನ ಬಿಗ್‌ಬಾಸ್‌ ತೆಗೆಸಿದ್ದಾರೆ. ಬಿಗ್‌ಬಾಸ್‌ "ಬಹುಮತದ ಅನುಸಾರ.. ಈ ವಾರದ ಟಾಸ್ಕ್‌ಗಳಲ್ಲಿ ಕಾರ್ತಿಕ್ ಉಸ್ತುವಾರಿ ರೀತಿ ಉತ್ತಮವಾಗಿತ್ತು. ಹೀಗಾಗಿ, ಈ ವಾರದ ಕ್ಯಾಪ್ಟನ್ಸಿ ಓಟದಲ್ಲಿ ಭಾಗವಹಿಸಲು ನೀವು ಅರ್ಹರಾಗಿದ್ದೀರಿ. ಪ್ರತಾಪ್.. ಹೊರಗಡೆ ಹೋಗಿ.. ಕಾರ್ತಿಕ್ ಭಾವಚಿತ್ರದಿಂದ ಕ್ರಾಸ್‌ ಗುರುತನ್ನು ತೆಗೆಯಿರಿ" ಎಂದು ಘೋಷಿಸಿದರು. 


ಅದೇ ವೇಳೆ ಸಂಗೀತಾ "ಕರ್ಮ ಅಂತಾರಾ ಇದಕ್ಕೆ?" ಎಂದು ವ್ಯಂಗ್ಯವಾಗಿ ಹೇಳಿದರೇ, ಇತ್ತ ವಿನಯ್‌ "ಈಗ ಮಜಾ ಇರುತ್ತೆ ಕ್ಯಾಪ್ಟನ್ಸಿ ಆಡೋಕೆ" ಎಂದರು.ಕ್ಯಾಪ್ಟನ್ ಆಗುವವರಿಗೆ ದುಪ್ಪಟ್ಟು ಅಧಿಕಾರ ಸಿಗುವುದರಿಂದ ಕಾರ್ತಿಕ್‌ ಅವರನ್ನ ಹೊರಗಿಟ್ಟು, ಡ್ರೋನ್ ಪ್ರತಾಪ್ ರಿವೆಂಜ್ ಗೇಮ್ ಆಡಿದ್ರಾ? ಎಂಬ ಡೌಟ್‌ ವೀಕ್ಷಕರಿಗೆ ಕೊರೆಯಿತು. ಡ್ರೋನ್ ಪ್ರತಾಪ್ ಮೈಂಡ್‌ ಗೇಮ್‌ ಏನೇ ಇದ್ದರೂ, ಬಿಗ್‌ಬಾಸ್‌ ಕೊಟ್ಟ ಮಾಸ್ಟರ್‌ ಸ್ಟ್ರೋಕ್‌ಗೆ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ.ತಂಡದ ಬಗ್ಗೆ ಯೋಚಿಸದೆ, ತಂಡದವರ ಮಾತಿಗೆ ಬೆಲೆ ಕೊಡದೆ, ತಮ್ಮ ಮೂಗಿನ ನೇರಕ್ಕೆ ನಿರ್ಧಾರಗಳನ್ನ ತಗೊಂಡು ತಾವು ಸೋಲುವುದರ ಜೊತೆಗೆ ಇಡೀ ತಂಡವನ್ನ ಹೀನಾಯವಾಗಿ ಸೋಲಿಸಿದ್ದಾರೆ ಡ್ರೋನ್ ಪ್ರತಾಪ್. ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬಂತೆ ಇತರರನ್ನ ಟಾರ್ಗೆಟ್ ಮಾಡಿದ ಡ್ರೋನ್ ಪ್ರತಾಪ್ ಇದೀಗ ತಾವೇ ಕ್ಯಾಪ್ಟೆನ್ಸಿ ರೇಸ್‌ನಿಂದ ಹೊರಗೆ ಬಿದ್ದಿದ್ದಾರೆ.



 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.