ಚಂದನ್‌, ರೂಪೇಶ್, ಶೈನ್ ಶೆಟ್ಟಿಯಂತೆ ಈ ಬಾರಿಯೂ ʼಅವಿನಾಶ್‌ ಶೆಟ್ಟಿʼ ಬಿಗ್‌ ಬಾಸ್‌ ವಿನ್ನರ್‌..!

Bigg Boss Kannada 10 : ಕನ್ನಡದ ಬಿಗ್ ಬಾಸ್ 10 ವಿನ್ನರ್‌ ಅನೌನ್ಸ್‌ಗೆ ಇನ್ನೂ ಕೇವಲ 50 ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳೇ ಗೆಲ್ತಾರೆ ಅಂತ ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ವೈಲ್ಡ್‌ ಕಾರ್ಡ್‌ ಮೂಲಕ ನಿನ್ನೆ ಎಂಟ್ರಿ ಕೊಟ್ಟ ಅವಿನಾಶ್‌ ಶೆಟ್ಟಿ ಗೆಲ್ತಾರೆ ಅಂತ ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ.

Written by - Krishna N K | Last Updated : Nov 29, 2023, 12:41 PM IST
  • ಕನ್ನಡದ ಬಿಗ್ ಬಾಸ್ 10 ಅವಿನಾಶ್‌ ಶೆಟ್ಟಿ ಗೆಲ್ತಾರೆ
  • ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆ
  • ಈ ಚರ್ಚೆ ಹುಟ್ಟಲು ಕಾರಣವೂ ಇದೆಯಂತೆ
ಚಂದನ್‌, ರೂಪೇಶ್, ಶೈನ್ ಶೆಟ್ಟಿಯಂತೆ ಈ ಬಾರಿಯೂ ʼಅವಿನಾಶ್‌ ಶೆಟ್ಟಿʼ ಬಿಗ್‌ ಬಾಸ್‌ ವಿನ್ನರ್‌..! title=

Avinash Shetty : ಕನ್ನಡದ ಬಿಗ್ ಬಾಸ್ 10 ಪ್ರಾರಂಭವಾಗಿ 50 ದಿನಗಳು ಕಳೆದಿವೆ. ಇನ್ನು ಕೇವಲ 50 ದಿನಗಳಲ್ಲಿ ಬಿಗ್‌ ಬಾಸ್‌ ವಿನ್ನರ್‌ ಅನೌನ್ಸ್‌ ಆಗಲಿದೆ. ಈ ನಿಟ್ಟಿನಲ್ಲಿ ನೆಟ್ಟಿಗರು ಯಾರು ಗೆಲ್ತಾರೆ..? ಯಾರು ಸೋಲ್ತಾರೆ..? ಅಂತ ಭರ್ಜರಿ ಚರ್ಚೆ ಶುರು ಮಾಡಿದ್ದಾರೆ. ಇದೀಗ ವೈಲ್ಡ್‌ ಕಾರ್ಡ್‌ ಮೂಲಕ ದೊಡ್ಮನೆ ಸೇರಿರುವ ಅವಿನಾಶ್‌ ಶೆಟ್ಟಿ ವಿನ್ನರ್‌ ಅಂತ ನೆಟ್ಟಿಗರು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣವೂ ಸಹ ಇದೆ.

ಹೌದು.. ನಿನ್ನೆ ಮಾಡೆಲ್‌ ಪವಿ ಪೂವಪ್ಪ ಮತ್ತು ಕರಾವಳಿ ಹುಡುಗ ಅವಿನಾಶ್ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಟನೆ, ಕ್ರೀಡೆ, ಮಾಡೆಲಿಂಗ್ ಹೀಗೆ ಹಲವು ಕ್ಷೇತ್ರಗಳಲ್ಲಿ ಅವಿನಾಶ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಅವಿನಾಶ್‌ ಶೆಟ್ಟಿ ದೊಡ್ಮನೆ ಪ್ರವೇಶ ಬೆನ್ನಲ್ಲೆ, ಇಂಟರ್‌ನೆಟ್‌ನಲ್ಲಿ ಹೊಸ ವಿಚಾರವೊಂದು ಸದ್ದು ಮಾಡುತ್ತಿದೆ. 

ಇದನ್ನೂ ಓದಿ: "ಡಂಕಿ ಜೊತೆ ಪೈಪೋಟಿ ಮಾಡುತ್ತಿರುವ ನಮಗೆ ಭಯವಿಲ್ಲ": ಪ್ರಶಾಂತ್‌ ನೀಲ್!

ಬಿಗ್‌ಬಾಸ್‌ ವಿನ್ನರ್‌ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಇದೀಗ ಅವಿನಾಶ್‌ ಎಂಟ್ರಿ ಮೂಲಕ ನೆಟ್ಟಿಗರು ಮತ್ತೊಂದು ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ. ಕಳೆದ ಮೂರು ಸೀಸನ್‌ನಲ್ಲಿ ಗೆದ್ದವರ ಹೆಸರಿಟ್ಟುಕೊಂಡು ಈ ಸೀಸನ್‌ನಲ್ಲಿ ಗೆಲ್ಲುವ ವ್ಯಕ್ತಿಯ ಹೆಸರನ್ನು ನಿರ್ಧಾರ ಮಾಡಿದ್ದಾರೆ.

ಯಸ್‌.. 2013ರಲ್ಲಿ ಕನ್ನಡ ಬಿಗ್ ಬಾಸ್ ಆರಂಭಗೊಂಡಿತ್ತು. ಪ್ರತಿ ಸೀಸನ್ ನಲ್ಲೂ ಕಿಚ್ಚ ಸುದೀಪ್ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಈ ಬಾರಿಯ‌ ಕಿಚ್ಚ ಬಾಸ್‌ ನಿರೂಪಣೆಯ ಜಾವಾಬ್ದಾರಿ ಹೊತ್ತುಕೊಂಡಿದ್ದಾರೆ. ಕಳೆದ ಸೀಸನ್‌ಗಳಲ್ಲಿ ಚಂದನ್‌ ಶೆಟ್ಟಿ, ಶೈನ್‌ ಶೆಟ್ಟಿ, ರೂಪೆಶ್‌ ಶೆಟ್ಟಿ ಗೆದ್ದಂತೆ ಈ ಬಾರಿ ಅವಿನಾಶ್‌ ಶೆಟ್ಟಿ ಗೆಲ್ಲಲಿದ್ದಾರೆ ಅಂತ ಶೆಟ್ಟಿ ಎಂಬ ಹೆಸರಿಟ್ಟುಕೊಂಡ ನೆಟ್ಟಿಗರು ಅರ್ಥವಿಲ್ಲದ ಹೊಸ ಚರ್ಚೆ ಶುರು ಮಾಡಿದ್ದಾರೆ. 

ಇದನ್ನೂ ಓದಿ: ಬೇರೆಯವರ ಹಾಗೆ ಹಿಟ್‌ ಸಿನಿಮಾ ಮಾಡಿದೆ ಅಂತ ಕನ್ನಡ ಬಿಟ್ಟು ಹೋಗಲ್ಲ..! ರಿಷಬ್‌ ಹೀಗೆ ಹೇಳಿದ್ಯಾರಿಗೆ..?

2017-18ರಲ್ಲಿ ನಡೆದಿದ್ದ ಬಿಗ್ ಬಾಸ್‌‌ ಸೀಸನ್ 5ರಲ್ಲಿ ಚಂದನ್ ಶೆಟ್ಟಿ ವಿಜೇತರಾಗಿದ್ದರು. 2019-20ರಲ್ಲಿ ನಡೆದಿದ್ದ ಬಿಗ್ ಬಾಸ್‌‌ ಸೀಸನ್ 7ರಲ್ಲಿ ಶೈನ್ ಶೆಟ್ಟಿ ಗೆಲುವು ತಮ್ಮದಾಗಿಸಿಕೊಂಡಿದ್ದರು. 2021-22 ರಲ್ಲೆ ನಡೆದ ಬಿಗ್‌ ಬಾಸ್‌ ಸೀಸನ್‌ 9 ರಲ್ಲಿ ರೂಪೇಶ್‌ ಶೆಟ್ಟಿ ವಿಜೇತರಾಗಿದ್ದಾರೆ. ಈ ಮೂವರು ಶೆಟ್ಟಿಗಳಂತೆ ಇದೀಗ ಅವಿನಾಶ್‌ ಶೆಟ್ಟಿ  ಗೆಲ್ತಾರೆ ಅಂತ ನೆಟ್ಟಿಗರು ವಿಚಿತ್ರ ವಿಚಾರ ಸೃಷ್ಟಿಸಿದ್ದಾರೆ.

ಈ ನೆಟ್ಟಿಗರ ಹುಚ್ಚು ಚರ್ಚೆಗೆ ಹೆಚ್ಚು ಮಹತ್ವವಿಲ್ಲ ಬಿಡಿ. ಆದ್ರೆ ಸೋಲು ಗೆಲುವನ್ನು ನಿರ್ಧಾರ ಮಾಡುವುದು ಮಾತ್ರ ಬಿಗ್‌ ಬಾಸ್‌. ಇಂದು ಗೆಲ್ತಾರೆ ಅಂತ ಹೇಳುವ ವ್ಯಕ್ತಿ ನೆಕ್ಸ್ಟ್‌ ಎಲಿಮಿನೆಟ್‌ ಆದ್ರೂ ಅಗ್ಬಹುದು. ಸೋಲ್ತಾರೆ ಅಂತ ಹೇಳುವ ಸ್ಪರ್ಧಿಗಳು ಕಿಚ್ಚನ ಕೈಯಿಂದ ಪ್ರಶಸ್ತಿ ತೆಗೆದುಕೊಂಡರೂ ಅಶ್ಚರ್ಯವಿಲ್ಲ. ಒಟ್ಟಾರೆಯಾಗಿ.. ಕಿಚ್ಚ ವಿನ್ನರ್‌ ಕೈ ಹಿಡಿದು ಅನೌನ್ಸ್‌ ಮಾಡಿದಾಗ್ಲೆ ಗೆದ್ದವರು ಯಾರು ಅಂತ ಗೊತ್ತಾಗೋದು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News