Pavi Poovappa In BBK: ಬಿಗ್‌ಬಾಸ್ ಕನ್ನಡ ಸೀಸನ್ 10' ಶೋನಲ್ಲಿ 50 ದಿನಗಳು ಯಶಸ್ವಿಯಾಗಿ ಮುಗಿಯುತ್ತಿದ್ದಂತೆ, ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಪವಿ ಪೂವಪ್ಪ ಕಾಲಿಟ್ಟರು. ಬಿಗ್‌ಬಾಸ್‌ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿಗೆ ಹೊರಗಡೆಯ ಯಾವ ವಿಚಾರವನ್ನೂ ಬಿಗ್‌ಬಾಸ್‌ ಮನೆಯೊಳಗೆ  ಚರ್ಚೆ ಮಾಡುವಂತಿಲ್ಲ ಎಂದು ನಿಯಮ ಹೇರಿದ್ದರೂ, ಪವಿ ಬಾಯಿ ತಪ್ಪಿ ಟ್ರೋಲ್ ಪೇಜ್‌ಗಳಲ್ಲಿ ವಿನಯ್ ಗೌಡ 'ಬಳೆ' ವಿಚಾರ ಚರ್ಚೆ ಆಗಿದ್ದನ್ನು ವಿನಯ್ ಮುಂದೆ ಹೇಳಿದ್ದರು. ಇದು ಗೊತ್ತಾದ ಬಳಿಕ ವಿನಯ್ ಅವರು, "ನಾನು ಮಾಡಿದ ತಪ್ಪಿನಿಂದ ನನ್ನ ಹೆಂಡ್ತಿ, ಮಗ ಅನುಭವಿಸುವ ಹಾಗಾಯ್ತು" ಎಂದು ಬಾತ್‌ರೂಮ್‌ನಲ್ಲಿ ಕಣ್ಣೀರು ಹಾಕಿದ ಆನಂತರ ಏನೂ ಆಗಿಲ್ಲ ಎಂದು ಬಿಗ್‌ಬಾಸ್ ವಿನಯ್‌ರನ್ನು ಸಂತೈಸಿದರು.


COMMERCIAL BREAK
SCROLL TO CONTINUE READING

ನಿನ್ನೆ 'ವಾರದ ಕತೆ ಕಿಚ್ಚನ ಜೊತೆ' ಇದೇ ವಿಚಾರದ ಬಗ್ಗೆ ಕಿಚ್ಚ ಸುದೀಪ್  ಎಪಿಸೋಡ್‌ನಲ್ಲಿ ಮಾತನಾಡಿ, "ಹೊರಗಡೆಯ ವಿಚಾರವನ್ನು ಹೇಳುವಂತಿಲ್ಲ ಅಂತ ನಿಯಮ ಇತ್ತು. ಅದನ್ನು ಮೀರಿ ನೀವು ಬಾಯಿ ತಪ್ಪಿ ಬಳೆ ವಿಷಯವನ್ನು ಹೇಳಬಹುದು. ಈಗಾಗಲೇ ಬಿಗ್‌ಬಾಸ್ ಕನ್ನಡ 10 ಶೋ ಶುರುವಾಗಿ 50 ದಿನ ಆಗಿದೆ. ಎಲ್ಲರೂ ಬಳೆ ವಿಚಾರವನ್ನು ಮರೆತಿದ್ದಾರೆ. 50 ದಿನಗಳನ್ನು ಕಳೆದ ಸ್ಪರ್ಧಿಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು.." ಎಂದು ಕಿಚ್ಚ ಸುದೀಪ್ ಪವಿಗೆ ಕ್ಲಾಸ್ ತಗೊಂಡಿದ್ದಾರೆ. ಪವಿ ಪೂವಪ್ಪ ಬಿಗ್‌ಬಾಸ್ ಕನ್ನಡ 10 ಎಪಿಸೋಡ್‌ಗಳನ್ನು ನೋಡದೇ, ಬರೀ ಟ್ರೋಲ್ ಪೇಜ್‌ಗಳಲ್ಲಿ ಪೋಸ್ಟ್ ನೋಡಿಕೊಂಡು ಬಂದಿದ್ದಾರೆ.


ಇದನ್ನೂ ಓದಿ: BBK 10 : ನೀನು ಬಾತ್‌ ರೂಂ ತೊಳಿ.. ನೀನು.. ಟಾಯ್ಲೆಟ್ ತಿಕ್ಕು, ನಾನು..! ತುಕಾಲಿ ಮಾತು ಕೇಳಿದ್ರೆ ಪಕ್ಕಾ ನಗ್ತೀರಾ..


ಈ ಸೀಸನ್ ಕುರಿತಂತೆ ಕಿಚ್ಚ ಸುದೀಪ್ ಕೇಳಿದ ಪ್ರಶ್ನೆಗೆ ಪವಿ  ಸರಿಯಾದ ಉತ್ತರವನ್ನೇ ಕೊಟ್ಟಿರಲಿಲ್ಲ."ವಿನಯ್ ಗೌಡ ಹೆಂಡ್ತಿ, ಮಗ ಹೇಗಿದ್ದಾರೆ? ಅವರು ಎಲ್ಲಿದ್ದಾರೆ? ಅವರ ಮನೆಗೆ ಹೋಗಿ ಬಂದಿದ್ದೀರಿ? ಏನೂ ನಿಮಗೆ ಗೊತ್ತಿಲ್ಲ. ಏನೂ ವಿಷಯ ಗೊತ್ತಿಲ್ಲದೆ ನೀವು ವಿನಯ್ ಬಳಿ ಹೋಗಿ ಟ್ರೋಲ್ ಪೇಜ್‌ಗಳಲ್ಲಿ ಬಳೆ ಬಗ್ಗೆ ಏನೋ ಬಂತು ಎಂದು ಹೇಳಿದ್ದೀರಿ. ಯಾವ ಎಪಿಸೋಡ್ ನೋಡದೆ ಒಂದು ವಿಷಯದ ಬಗ್ಗೆ ಹೇಗೆ ಕಾಮೆಂಟ್ ಪಾಸ್ ಮಾಡ್ತೀರಿ? ಒಂದು ಪಾಸಿಂಗ್ ಕಾಮೆಂಟ್‌ನಿಂದ ಒಬ್ಬ ವ್ಯಕ್ತಿಯ ಮನಸ್ಥಿತಿ ಬದಲಾಗತ್ತೆ. 100 ಕಿಮೀ ವೇಗದಲ್ಲಿ ಹೋಗುವ ಸ್ಪರ್ಧಿಗೆ ಅರ್ಧ ದಾರಿಗೆ ಎಂಡ್ ಬೋರ್ಡ್ ಹಾಕಿದರೆ ಏನಾಗುವುದು?" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.


"ನನಗೋಸ್ಕರ ಟ್ರೋಲ್ ಪೇಜ್ ಆರಂಭ ಮಾಡಿಸಿ ನಾನು ಬೆಳಗ್ಗೆ ಗುಡ್ ಮಾರ್ನಿಂಗ್ ಅಂತ ಹೇಳಿದರೂ ಕೂಡ, ಸುದೀಪ್ ಗುಡ್ ಮಾರ್ನಿಂಗ್ ಅಂತ ಹೇಳ್ತಾನೆ ಅಂತ ಬೈತಾರೆ. ನನ್ನಿಂದ ಅವರು ಊಟ ಮಾಡುತ್ತಿದ್ದಾರೆ. ಅವರ ಟ್ರೋಲ್ ಪೇಜ್‌ಗಳನ್ನು ನೋಡಿ ನಾನು ಎಂಜಾಯ್ ಮಾಡ್ತೀನಿ. ನಾನು ಯಾವುದೋ ಕಿತ್ತೋದ ಕೆಲಸ ಮಾಡಿಲ್ಲ" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ತುಕಾಲಿ, ಪ್ರತಾಪ್ ಅವರನ್ನೇ ತಗೊಳ್ಳಿ. ತಪ್ಪು ಮಾಡಿದವರು ಸರಿ ಮಾಡಿಕೊಂಡಿದ್ದಾರೆ. ನೀವು ಕೊನೆಯದಾಗಿ ಇಲ್ಲಿಗೆ ಬಂದು ಟ್ರೋಫಿ ಪಡೆಯುವ ಬಗ್ಗೆ ಯೋಚನೆ ಮಾಡಿ, ಅದನ್ನು ಬಿಟ್ಟು ಬೇರೆ ಏನೂ ತಲೆಕೆಡಿಸಿಕೊಳ್ಳಬೇಡಿ. ನೀವು ಯಾವ ಘಟನೆ ನಡೆಯಿತು ಅಂತ ಅಂದುಕೊಂಡಿದ್ದೀರೋ ಅದೆಲ್ಲ ಮುಗಿದು ಜನರು ಮರೆತಿದ್ದಾರೆ" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಪವಿ ಅವರಿಗೆ ಆರಂಭದಲ್ಲಿಯೇ ಕ್ಲಾಸ್ ತಗೊಂಡಿದ್ದಕ್ಕೆ ಕಿಚ್ಚ ಸುದೀಪ್ "ಕಳೆದ 10 ಸೀಸನ್‌ಗಳಲ್ಲಿ ಯಾವ ವೈಲ್ಡ್ ಕಾರ್ಡ್ ಎಂಟ್ರಿಗೂ ನಾನು ಈ ರೀತಿಯ ಸ್ವಾಗತ ನೀಡಿರಲಿಲ್ಲ" ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.