Vanitha Vijaykumar : ದಕ್ಷಿಣ ಭಾರತದ ಹಿರಿಯ ನಟರಾದ ವಿಜಯ್ ಕುಮಾರ್ ಮತ್ತು ಮಂಜುಳಾ ಅವರ ಪುತ್ರಿ ನಟಿ ವನಿತಾ ವಿಜಯ್ ಕುಮಾರ್ ಅವರ ಮೇಲೆ ಅಪರಿಚಿತರಿಂದ ಹಲ್ಲೆ ನಡೆದಿದೆ. ಈ ಕುರಿತು ಸ್ವತಃ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನಟಿ ವನಿತಾ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತೆಲುಗು ಮತ್ತು ತಮಿಳು ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ ವನಿತಾ. ಪ್ರಸ್ತುತ, ಅವರ ಮಗಳು ಜೋವಿಕಾ ತಮಿಳಿನ ಬಿಗ್ ಬಾಸ್-7 ನಲ್ಲಿ ಸ್ಪರ್ಧಿಯಾಗಿದ್ದಾರೆ. ಅಲ್ಲದೆ, ಜೋವಿಕಾ ಮೇಲೆ ಟ್ರೋಲ್ ಆಗುತ್ತಿದ್ದು, ಮಗಳ ಕುರಿತು ವನಿತಾ ವಿರೋಧಿಗಳಿಗೆ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೆ ಅವರ ಹಲ್ಲೆ ನಡೆದಿದೆ.


ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಸಲಾರ್‌ ಮರ್ಚಂಡೈಸ್:‌ ಪ್ರಭಾಸ್‌ ಫ್ಯಾನ್ಸ್ ಫುಲ್‌ ಖುಷ್!


ಈ ಕುರಿತ ಫೋಟೋಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ ರಾತ್ರಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಬಿಗ್ ಬಾಸ್ ತಾರೆಯ ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ, ಆಕೆಯ ಮುಖ ಗಾಯಗೊಂಡಿರುವುದಾಗಿ ವನಿತಾ ವಿಜಯಕುಮಾರ್ ಫೋಟೋ ಸಮೇತ ಬಹಿರಂಗಪಡಿಸಿದ್ದಾರೆ.


ಅದಿತಿ ಪ್ರಭುದೇವ - ಪವನ್ ತೇಜ ಅಭಿನಯದ "ಅಲೆಕ್ಸಾ" ಟ್ರೇಲರ್‌ಗೆ ಫ್ಯಾನ್ಸ್‌ ಫಿದಾ


ಅಲ್ಲದೆ, ಬಿಗ್ ಬಾಸ್ ಎಪಿಸೋಡ್ ಮುಗಿದ ನಂತರ ರಾತ್ರಿ ನಾನು ವಿಮರ್ಶೆಯನ್ನು ನೀಡಿದ ನಂತರ ಊಟಕ್ಕಾಗಿ ಹೋಗಿದ್ದೆ. ನಂತರ ನನ್ನ ತಂಗಿ ಸೌಮ್ಯಾಳ ಮನೆಯಲ್ಲಿ ನಿಲ್ಲಿಸಿದ್ದ ಕಾರನ್ನು ತೆಗೆದುಕೊಳ್ಳಲು ಬರುವಾಗ ನನ್ನ ಮೇಲೆ ದಾಳಿ ನಡೆದಿದೆ. ದಾಳಿಕೋರ ನನಗೆ ರೆಡ್ ಕಾರ್ಡ್ ನೆನಪಿದೆಯೇ..? ಅಂತ ಕೇಳಿ ಹೊಡೆದ ಎಂದು ವನಿತಾ ಘಟನೆ ಬಗ್ಗೆ ವಿವರಿಸಿದ್ದಾರೆ.


ಅಲ್ಲದೆ, ನನ್ನ ಮುಖದಿಂದ ರಕ್ತ ಬಂದಾಗ, ನಾನು ಕಿರುಚಿಕೊಂಡು ಅಳುತ್ತಿದ್ದೆ. ಮಧ್ಯರಾತ್ರಿಯಾಗಿತ್ತು ಹಾಗಾಗಿ ಯಾರೂ ಇರಲಿಲ್ಲ. ತಕ್ಷಣ ನಾನು ನನ್ನ ತಂಗಿಗೆ ಕರೆ ಮಾಡಿದೆ. ಅವಳು ಪೊಲೀಸ್‌ಗೆ ಕಂಪ್ಲೇಂಟ್ ಕೊಡಲು ಹೇಳಿದಳು. ಆದರೆ ನಾನು ಇನ್ನೂ ದೂರು ನೀಡಿಲ್ಲ ಎಂದಿದ್ದಾರೆ.


ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದೆ. ನನ್ನ ಮೇಲೆ ದಾಳಿ ಮಾಡಿದವರು ಯಾರು ಎಂಬುದನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಹುಚ್ಚನಂತೆ ನಗುತ್ತಿದ್ದ ಅವನ ನಗು ಇನ್ನೂ ನನ್ನ ಕಿವಿಯಲ್ಲಿ ಗುಂಯ್ಗುಡುತ್ತಿದೆ. ಸದ್ಯ ಆ ಗಾಯದಿಂದ ಬಳಲುತ್ತಿದ್ದೇನೆ.. ಈಗ ವಿಶ್ರಾಂತಿ ಪಡೆಯುತ್ತಿದ್ದೇನೆ.. ಈ ಸ್ಥಿತಿಯಲ್ಲಿ ತೆರೆ ಮುಂದೆ ಬರಲು ಸಾಧ್ಯವೇ ಇಲ್ಲ ಎಂದು ವನಿತಾ ಹೇಳಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.