ಮಾರುಕಟ್ಟೆಯಲ್ಲಿ ಸಲಾರ್‌ ಮರ್ಚಂಡೈಸ್:‌ ಪ್ರಭಾಸ್‌ ಫ್ಯಾನ್ಸ್ ಫುಲ್‌ ಖುಷ್!

Salaar: ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ಸಲಾರ್‌ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದ್ದು, ಇದೀಗ ಹೊಂಬಾಳೆ ಸಂಸ್ಥೆ ಸಲಾರ್‌ ಮರ್ಚಂಡೈಸ್‌ನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

Written by - Zee Kannada News Desk | Last Updated : Nov 26, 2023, 01:12 PM IST
  • ಹೊಂಬಾಳೆ ಸಂಸ್ಥೆ ನಿರ್ಮಾಣದ 'ಸಲಾರ್' ಸರಣಿಯ ಮೊದಲ ಭಾಗ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಪ್ರಭಾಸ್ ಅಬ್ಬರಿಸಿದ್ದಾರೆ.
  • ಡಿಸೆಂಬರ್ 1ಕ್ಕೆ 'ಸಲಾರ್' ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದ್ದು, ಅದ್ಧೂರಿ ಈವೆಂಟ್‌ನಲ್ಲಿ 'ಸಲಾರ್' ಆರ್ಭಟದ ಝಲಕ್ ತೋರಿಸುವ ಪ್ರಯತ್ನ ಶುರುವಾಗಿದೆ.
  • ಹೊಂಬಾಳೆ ಫಿಲ್ಮ್ಸ್ ನಿಧಾನವಾಗಿ ಚಿತ್ರದ ಪ್ರಚಾರಕ್ಕೆ ಕೈ ಹಾಕಿದ್ದು, ಇದೀಗ 'ಸಲಾರ್' ಮರ್ಚಂಡೈಸ್ ಮಾರುಕಟ್ಟೆಗೆ ತಂದಿದೆ.
ಮಾರುಕಟ್ಟೆಯಲ್ಲಿ ಸಲಾರ್‌ ಮರ್ಚಂಡೈಸ್:‌ ಪ್ರಭಾಸ್‌ ಫ್ಯಾನ್ಸ್ ಫುಲ್‌ ಖುಷ್! title=

Salaar Merchandise: ಹೊಂಬಾಳೆ ಸಂಸ್ಥೆ ನಿರ್ಮಾಣದ 'ಸಲಾರ್' ಸರಣಿಯ ಮೊದಲ ಭಾಗ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಪ್ರಭಾಸ್ ಅಬ್ಬರಿಸಿದ್ದಾರೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವುದು ನಿರೀಕ್ಷೆ ಹೆಚ್ಚುವಂತೆ ಮಾಡಿದ್ದು, ಇದೇ ಡಿಸೆಂಬರ್ 22ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸಿನಿಮಾ ರಿಲೀಸ್ ಆಗಲಿದೆ. 

ಡಿಸೆಂಬರ್ 1ಕ್ಕೆ 'ಸಲಾರ್' ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದ್ದು, ಅದ್ಧೂರಿ ಈವೆಂಟ್‌ನಲ್ಲಿ 'ಸಲಾರ್' ಆರ್ಭಟದ ಝಲಕ್ ತೋರಿಸುವ ಪ್ರಯತ್ನ ಶುರುವಾಗಿದೆ. ಡಾರ್ಲಿಂಗ್ ಅಭಿಮಾನಿಗಳಂತೂ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದ್ದು 5 ಭಾಷೆಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ಹಿಟ್ ಆಗಿ ಸಿನಿಮಾ ಮೇಲಿನ ಕುತೂಹಲ ಹೆಚ್ಚಿದೆ. 

ಇದನ್ನೂ ಓದಿ: ಅದಿತಿ ಪ್ರಭುದೇವ - ಪವನ್ ತೇಜ ಅಭಿನಯದ "ಅಲೆಕ್ಸಾ" ಟ್ರೇಲರ್‌ಗೆ ಫ್ಯಾನ್ಸ್‌ ಫಿದಾ

'KGF' ಸರಣಿ ಬಳಿಕ ಪ್ರಭಾಸ್ ಜೊತೆ ಹೊಂಬಾಳೆ ಸಂಸ್ಥೆ ಹಾಗೂ ಪ್ರಶಾಂತ್ ನೀಲ್ ಕೈ ಜೋಡಿಸಿರುವುದು ನಿರೀಕ್ಷೆ ಹೆಚ್ಚುವಂತೆ ಮಾಡಿದ್ದು, ನೀಲ್ ನಿರ್ದೇಶನದಲ್ಲಿ ಯಂಗ್ ರೆಬಲ್ ಸ್ಟಾರ್ ಹೈವೋಲ್ಟೇಜ್ ಪರ್ಫಾರ್ಮನ್ಸ್ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿಧಾನವಾಗಿ ಚಿತ್ರದ ಪ್ರಚಾರಕ್ಕೆ ಕೈ ಹಾಕಿದ್ದು, ಇದೀಗ 'ಸಲಾರ್' ಮರ್ಚಂಡೈಸ್ ಮಾರುಕಟ್ಟೆಗೆ ತಂದಿದೆ. ಆನ್‌ಲೈನ್‌ನಲ್ಲಿ ಅಭಿಮಾನಿಗಳು 'ಸಲಾರ್' ಟೀಶರ್ಟ್, ಹುಡೀ, ಹಾರ್ಮ್ ಸ್ಲೀವ್‌ಗಳನ್ನು ಪರಿಚಯಿಸಿದ್ದು, ಹೊಂಬಾಳೆ ವರ್ಸ್ ವೆಬ್‌ಸೈಟ್‌ಗೆ ಹೋಗಿ ಫ್ಯಾನ್ಸ್ ಈ ಮರ್ಚಂಡೈಸ್ ಖರೀದಿಸಬಹುದಾಗಿದೆ. 

'ಸಲಾರ್' ಮರ್ಚಂಡೈಸ್ ಬೆಲೆ ಎಷ್ಟು ಎನ್ನುವುದನ್ನು ನೋಡುವುದಾದರೆ ಟೀಶರ್ಟ್ ಬೆಲೆ 699 ರೂ. ಇದ್ದು ಹುಡೀ 1499 ರೂ. ಹಾಗೂ ಹಾರ್ಮ್ ಸ್ಲೀವ್‌ ಬೆಲೆ 499 ರೂ. ಇದೆ. ಅಭಿಮಾನಿಗಳು 'ಸಲಾರ್' ಮರ್ಚಂಡೈಸ್ ಖುಷಿಯಾಗಿದ್ದರೇ, ಇತ್ತ ಕೆಲವರು ಬೆಲೆ ಹೆಚ್ಚಾಯಿತು, ಇಷ್ಟು ಇದ್ದರೆ ಖರೀದಿಸುವುದು ಹೇಗೆ? ಎನ್ನುತ್ತಿದ್ದಾರೆ. ಸಿನಿಮಾ ಹಾಗೂ ಸ್ಟಾರ್ ನಟರ ಕ್ರೇಜ್ ನೋಡಿ ಈ ಹಿಂದೆ ಇಂತಹ ಟೀಶರ್ಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ಇದೀಗ ಚಿತ್ರತಂಡಗಳೇ ಇಂತಹ ಪ್ರಯತ್ನ ಮಾಡುತ್ತಿವೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News