Bigg Boss Kannada Season 10  : ಖ್ಯಾತ ಹಾಸ್ಯನಟ ದಿವಂಗತ  ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ಬುಲೆಟ್‌ ಈ ಬಾರಿ ಬಿಗ್‌ ಬಾಸ್‌ ಸ್ಪರ್ಧಯಾಗಿದ್ದಾರೆ. ರಕ್ಷಕ್‌ ಬುಲೆಟ್ ತಮ್ಮ ನೇರ ಮಾತಿನಿಂದಲೇ ಹೆಚ್ಚಾಗಿ ಟ್ರೋಲ್‌ ಆಗುತ್ತಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲೂ ಅದೇ ರೀತಿ ನೇರವಾಗಿ ಮಾತನಾಡುತ್ತಿದ್ದಾರೆ. ಟ್ರೋಲ್‌ಗಳಿಗೆಲ್ಲ ತಲೆ ಕೆಡಿಸಿಕೊಳ್ಳದ ರಕ್ಷಕ್‌ ಬಿಗ್‌ ಬಾಸ್‌ ಮನೆ ಸೇರಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದೊಡ್ಮನೆಯಲ್ಲಿ ಬಿಗ್‌ ಫೈಟ್‌.. ಮೂರನೇ ದಿನವೇ ಶುರುವಾದ ಜಗಳ, ನೂರು ದಿನ ಸಾಗೋದು ಹೇಗೆ? 


ಈ ಬಾರಿ ಬಗ್‌ ಬಾಸ್‌ನಲ್ಲಿದ್ದ ಅರ್ಹರು, ಅನರ್ಹರು ಪಟ್ಟಿಯಲ್ಲಿ ರಕ್ಷಕ್‌ ಅನರ್ಹರಾಗಿ ವೇಟಿಂಗ್‌ ರೂಮ್‌ನಲ್ಲಿದ್ದರು. ಆ ಬಳಿಕ  ಬಿಗ್‌ ಬಾಸ್‌ ಮನೆ ಸೇರಿಕೊಂಡಿದ್ದಾರೆ. ಈ ವಾರ ಅನರ್ಹರಿಗೆ ಕೆಲ ಟಾಸ್ಕ್‌‌ಗಳನ್ನು ನೀಡಿದೆ. ಆ ಮೂಲಕ ಅವರು ಬಿಗ್‌ ಬಾಸ್‌ ನಲ್ಲಿ ಅರ್ಹರಾಗಬಹುದು.


ಇದೀಗ ಬಿಗ್‌ ಬಾಸ್‌ ಮನೆ ಸೇರಿರುವವರ ಸಂಭಾವನೆ ಎಷ್ಟಿರಬಹುದು ಅನ್ನೋ ವಿಚಾರ ಚರ್ಚೆಯಾಗುತ್ತಿದೆ. ರಕ್ಷಕ್‌ ಬುಲೆಟ್ ಅವರ ಸಂಭಾವನೆ ಎಷ್ಟು ಎಂಬ ವಿಚಾರ ಜನರ ತಲೆಗೆ ಹುಳ ಬಿಟ್ಟಿದೆ. ಒಂದು ಎಪಿಸೋಡ್‌ಗೆ ರಕ್ಷಕ್‌ ಚಾೃರ್ಜ್‌ ಎಷ್ಟು ಎಂಬುದು ಎಲ್ಲರ ಕುತೂಹಲವಾಗಿದೆ.


ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಒಂದೇ ದಿನಕ್ಕೆ ಹೊರಬಂದ ಪ್ರದೀಪ್‌ ಈಶ್ವರ್‌..! 


ವರದಿಗಳ ಪ್ರಕಾರ, ರಕ್ಷಕ್‌ ಬುಲೆಟ್‌ ಬಿಗ್‌ ಬಾಸ್‌ ಮನೆಯಲ್ಲಿ ಒಂದು ದಿನಕ್ಕೆ 15 ರಿಂದ 20 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ ವಾರಕ್ಕೆ ಸುಮಾರು ಒಂದು ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.