Bigg Boss 10: ದೊಡ್ಮನೆಯಲ್ಲಿ ಬಿಗ್‌ ಫೈಟ್‌.. ಮೂರನೇ ದಿನವೇ ಶುರುವಾದ ಜಗಳ, ನೂರು ದಿನ ಸಾಗೋದು ಹೇಗೆ?

Fight between Sangeetha And Vinay : ತಮ್ಮ ಹೆಸರನ್ನು ತೆಗೆದುಕೊಂಡಿರುವುದನ್ನು ಇಷ್ಟಪಡದ ಕೆಲವು ಸ್ಪರ್ಧಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಮೊದಲೆರಡು ದಿನ ಕ್ಲೋಸ್‌ ಆಗಿದ್ದವರೇ ನಾಮಿನೇಷನ್‌ ವೇಳೆ ಕಿತ್ತಾಡಿಕೊಂಡಿದ್ದಾರೆ.  

Written by - Chetana Devarmani | Last Updated : Oct 10, 2023, 12:01 PM IST
  • ಕಿರುತೆರೆಯ ಜನ ಮೆಚ್ಚಿದ ಶೋ ಬಿಗ್‌ ಬಾಸ್‌ ಕನ್ನಡ
  • ಶುರುವಾದ ಮೂರೇ ದಿನಕ್ಕೆ ಮನೆಯಲ್ಲಿ ಜಗಳ
  • ಈ ಸೀಸನ್‌ನಲ್ಲಿ ಮೂರನೇ ದಿನವೇ ಬಾಂಬ್‌ ಬಿದ್ದಿದೆ
Bigg Boss 10: ದೊಡ್ಮನೆಯಲ್ಲಿ ಬಿಗ್‌ ಫೈಟ್‌.. ಮೂರನೇ ದಿನವೇ ಶುರುವಾದ ಜಗಳ, ನೂರು ದಿನ ಸಾಗೋದು ಹೇಗೆ?  title=
bigg boss

Bigg Boss Kananda 10 : ಕಿರುತೆರೆಯ ಜನ ಮೆಚ್ಚಿದ ಶೋ ಬಿಗ್‌ ಬಾಸ್‌ ಕನ್ನಡ ಶುರುವಾಗಿದೆ. ಕನ್ನಡ ಬಿಗ್‌ ಬಾಸ್‌ ಶುರುವಾದ ಮೂರೇ ದಿನಕ್ಕೆ ಮನೆಯಲ್ಲಿ ಜಗಳ ನಡೆಯುತ್ತಿದೆ. ಹಿಂದಿನ ಕೆಲವು ಸೀಸನ್‌ಗಳಲ್ಲಿ ಮೊದಲ ಕೆಲ ದಿನಗಳು ಶಾಂತವಾಗಿ ಸಾಗುತ್ತಿದ್ದವು. ನಂತರದಲ್ಲಿ ಒಂದೊಂದೆ ಪಟಾಕಿ ಸಿಡಿಯುತ್ತಿದ್ದವು. ಆದರೆ ಈ ಸೀಸನ್‌ನಲ್ಲಿ ಮೂರನೇ ದಿನವೇ ಬಾಂಬ್‌ ಬಿದ್ದಿದೆ. 

ಕನ್ನಡ ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ನಾಮಿನೇಷನ್‌ ಪ್ರಕ್ರಿಯೆ ನಡೆಯಿತು. ಈ ವೇಳೆ ತಮ್ಮ ಹೆಸರನ್ನು ತೆಗೆದುಕೊಂಡಿರುವುದನ್ನು ಇಷ್ಟಪಡದ ಕೆಲವು ಸ್ಪರ್ಧಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಮೊದಲೆರಡು ದಿನ ಕ್ಲೋಸ್‌ ಆಗಿದ್ದವರೇ ನಾಮಿನೇಷನ್‌ ವೇಳೆ ಕಿತ್ತಾಡಿಕೊಂಡಿದ್ದಾರೆ. 

ಇದನ್ನೂ ಓದಿ: BiggBoss Kannada 10: ಈ ಬಾರಿ ದೊಡ್ಮನೆಗೆ ಮೈಕಲ್ ಎನ್ನುವವರ ಎಂಟ್ರಿ...! ಯಾರಿವರು? 

ಸಂಗೀತಾ ಶೃಂಗೇರಿ ಹಾಗೂ ವಿನಯ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅನರ್ಹರನ್ನು ನಾಮಿನೇಟ್ ಮಾಡಲು ಅರ್ಹರಿಗೆ ಅವಕಾಶ ಈ ವಾರ ಅವಕಾಶ ನೀಡಲಾಗಿತ್ತು. ಈ ಪೈಕಿ ವಿನಯ್ ಅವರು ಸಂಗೀತಾ ಶೃಂಗೇರಿ ಹೆಸರನ್ನು ತೆಗೆದುಕೊಂಡರು. ಅನರ್ಹರಿಗೆ ಸೋಫಾ, ಬೆಡ್​ರೂಂ ಬಳಕೆ ಮಾಡಬಾರದು ಎಂದು ಬಿಗ್‌ ಬಾಸ್‌ ಆದೇಶಿಸಿದ್ದರು. ಆದರೆ ಸಂಗೀತಾ ಅವರು ಸೋಫಾ ಮೇಲೆ ಕೂತಿದ್ದರು. ಇದೇ ಕಾರಣ ನೀಡಿ ವಿನಯ್ ಅವರು ಸಂಗೀತಾ ಅವರನ್ನು ನಾಮಿನೇಟ್ ಮಾಡಿದ್ದಾರೆ.

 

 

ವಿನಯ್‌ ತಮ್ಮನ್ನು ನಾಮಿನೇಟ್‌ ಮಾಡಿದ್ದಕ್ಕೆ ಸಂಗೀತಾ ಅಸಮಾಧಾನಗೊಂಡಿದ್ದಾರೆ. ನಾನು ತಪ್ಪು ಮಾಡಿದ್ದರೆ ಬಿಗ್ ಬಾಸ್ ಶಿಕ್ಷೆ ಕೊಡುತ್ತಿದ್ದರು. ನೀವೇ ಬಿಗ್ ಬಾಸ್ ಆಗ್ಬಿಟ್ರಲ್ಲ ಎನ್ನುತ್ತ ಸಂಗೀತ ಕಿರುಚಾಡಿದ್ದಾರೆ. ನನ್ನತ್ರ ಯಾರೂ ಮಾತಾಡೋದನ್ನು ಇಟ್ಕೋಬೇಡಿ ಅಂತ ವಿನಯ್ ಕೂಡ ಕಿರುಚಿದ್ದಾರೆ. ಇಬ್ಬರ ನಡುವೆ ನಡೆದ ಈ ಜಗಳ ಬಿಗ್‌ ಬಾಸ್‌ ಮನೆಯನ್ನು ಅಶಾಂತಗೊಳಿಸಿದೆ. 

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಅನಾರೋಗ್ಯದ ಕಾರಣ ಹೊರ ನಡೆದ ಸ್ಪರ್ಧಿ.!! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News