ಆ ಘಟನೆಯೇ ಸಿರಿ ಮದುವೆ ರಿಜೆಕ್ಟ್ ಮಾಡಲು ಕಾರಣ.. ಸತ್ಯ ಬಿಚ್ಚಿಟ್ಟ ಸಹೋದರಿ!
Siri marriage : ನಟಿ ತಾರಾ ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ ನಾನು ಮದುವೆ ಮಾಡಿಕೊಳ್ಳಲು ಸಿದ್ಧ, ಆದರೆ ಸೂಕ್ತ ವ್ಯಕ್ತಿ ಸಿಕ್ಕಿಲ್ಲ ಎಂದಿದ್ದರು. ಇದೀಗ ಸಿರಿ ಅವರ ಅಕ್ಕ ಈ ವಿಚಾರವಾಗಿ ಮಾತನಾಡಿದ್ದಾರೆ.
Bigg Boss Siri Marriage : ಕನ್ನಡ ಕಿರುತೆರೆಯಲ್ಲಿ ರಂಗೋಲಿ ಸೀರಿಯಲ್‌ನಿಂದ ಖ್ಯಾತಿ ಪಡೆದ ನಟಿ ಸಿರಿ ಈಗ ಬಿಗ್ ಬಾಸ್ ಸೀಸನ್ 10 ರ ಮನೆಯಲ್ಲಿದ್ದಾರೆ. ರಂಗೋಲಿ ಧಾರವಾಹಿ ಮೂಲಕ ಜನರ ಮನಕ್ಕೆ ಹತ್ತಿರವಾದವರು ಸಿರಿ. ಅವರ ಸಿಂಪ್ಲಿಸಿಟಿಯೇ ಎಲ್ಲರ ಮನ ಗೆಲ್ಲುವ ಅಸ್ತ್ರ.
ಕಿರಿತೆರೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ಸಿರಿ ಇನ್ನೂ ಮದುವೆ ಆಗಿಲ್ಲ. ಬಿಗ್ ಬಾಸ್ ಬಳಿಕ ಸಿರಿ ಅವರಿಗೆ ಮದುವೆ ಆಫರ್ ಬರುವ ಸಾಧ್ಯತೆಗಳಿವೆ. ನಟಿ ತಾರಾ ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ ನಾನು ಮದುವೆ ಮಾಡಿಕೊಳ್ಳಲು ಸಿದ್ಧ, ಆದರೆ ಸೂಕ್ತ ವ್ಯಕ್ತಿ ಸಿಕ್ಕಿಲ್ಲ ಎಂದಿದ್ದರು. ಇದೀಗ ಸಿರಿ ಅವರ ಅಕ್ಕ ಈ ವಿಚಾರವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ವಾಸುಕಿ ವೈಭವ್‌ದ್ದು ಲವ್ ಮ್ಯಾರೇಜ್! ಅರೇಂಜ್ಡ್ ಮ್ಯಾರೇಜಾ?
ಬೇರೆಯವರು ನಮ್ಮನ್ನು ಪ್ರಶ್ನೆ ಮಾಡಿದಾಗಲೇ ಮದುವೆ ಮುಖ್ಯ ಅಂತ ಅನಿಸೋಕೆ ಶುರುವಾಗುವುದು. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾಗ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಆಗಲ್ಲ. ಇದೇ ಸಮಯಕ್ಕೆ ಮದುವೆ ಆಗಬೇಕು ಈ ವರ್ಷನೇ ಮದುವೆ ಆಗಬೇಕು ಎಂದು ಹೇಳಲು ಸಾಧ್ಯವಿಲ್ಲ ಎಂದು ಸಿರಿ ಅವರ ಅಕ್ಕ ಹೇಳಿದ್ದಾರೆ.
ವೈಯಕ್ತಿಕ ಜೀವನದಲ್ಲಿ ನಾವಿಬ್ಬರು ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಇಬ್ಬರೂ ವೈಯಕ್ತಿಕ ಜೀವನದಲ್ಲಿ ನಷ್ಟಗಳನ್ನು ಅನುಭವಿಸಿದ್ದೇವೆ. ಇದೆಲ್ಲ ಸಿರಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಸಿರಿ ಒಪ್ಪಿಕೊಳ್ಳುವಂತ ವ್ಯಕ್ತಿ ಇನ್ನೂ ಸಿಕ್ಕಿಲ್ಲ. ಸಿರಿ ಅಕ್ಕ ಆಗಿ ನಾನು ಬೇಗ ಮದುವೆ ಮಾಡಿಕೊಂಡೆ. ಸಿರಿ ನನ್ನ ಜೀವನದಿಂದ ಏನೋ ಕಲಿತಿರಬಹುದು. ಇದೇ ಕಾರಣಕ್ಕೆ ಆಕೆಯ ಮದುವೆಗೆ ತಡ ಮಾಡುತ್ತಿದ್ದಾಳೆ ಎಂದರು.
ಸಿರಿ ಕೆಲವರ ಮದುವೆ ಮುರಿದಿರುವುದನ್ನು ನೋಡಿದ್ದಾಳೆ. ನನ್ನ ಜೀವನವೂ ಹೀಗೆಆದರೆ ಏನು ಮಾಡೋದು ಎಂದು ಯೋಚನೆ ಮಾಡಿ ಇನ್ನು ಮದುವೆ ನಿರ್ಧಾರಕ್ಕೆ ಬಂದಿಲ್ಲ ಎಂದರು.
ಇದನ್ನೂ ಓದಿ: ಕಿಚ್ಚ ಸುದೀಪ್ ಮನೆ ಮುಂದೆ ರೈತನ ಧರಣಿ.. ಬಿಗ್ ಬಾಸ್‌ಗೆ ಕಳಿಸುವಂತೆ ಪಟ್ಟು!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.