Snake Shyam Interview : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಮೊದಲ ವಾರವೇ ಎಲಿಮಿನೇಟ್‌ ಆದ ಸ್ನೇಕ್‌ ಶ್ಯಾಮ್‌ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಬರುವಾಗ್ಲೇ ಟಿಕೆಟ್ ತಂದಿರ್ತೀವಿ, ವೇಟಿಂಗ್ ಲೀಸ್ಟಲ್ಲಿರ್ತೀವಿ.. ಕನ್ಫರ್ಮ್ ಆಗಿದ್ದೇ ಹೊರಡ್ತೀವಿ ಎಂದು ತಮ್ಮದೇ ಸ್ಟೈಲ್ ನಲ್ಲಿ ಬಿಗ್ ಬಾಸ್ ಅನುಭವವನ್ನು ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಬಿಗ್‌ ಬಾಸ್‌ ಮನೆಗೆ ಬರ್ತಿನಿ ಅಂತ ಅನ್ಕೊಂಡಿರಲಿಲ್ಲ. ಬಂದೆ ಒಂದು ವಾರ ಇದ್ದೆ. ಒಂದೊಳ್ಳೆ ಅನುಭವ ಸಿಕ್ತು. ಹತ್ತಾರು ಮನಸ್ಸುಗಳನ್ನು ನೋಡಿದೆ. ಒಬ್ಬೊಬ್ಬರು ಒಂದೊಂದು ಥರ. ಇಲ್ಲೆನು ನಾವು ಶಾಶ್ವತವಲ್ಲ ಅಲ್ಲ. ಬರುವಾಗ್ಲೇ ಟಿಕೆಟ್ ತಂದಿರ್ತೀವಿ, ತತ್ಕಾಲಲ್ಲಿ ಇರ್ತಿವಿ.. ಟಿಕೆಟ್‌ ಸಿಕ್ಕಿದಾಗ ಹೋಗ್ತವಿ ಎಂದಿದ್ದಾರೆ.


ಇದನ್ನೂ ಓದಿ: BBK 10: ಸ್ನೇಕ್‌ ಶ್ಯಾಮ್‌ ಸಮರ್ಥರಾದ್ರೂ ಎಲಿಮಿನೇಟ್‌ ಆಗಲು ಕಾರಣ ಇದೇನಾ? 


ನನ್ನ ಒಳ್ಳೆಯತನವೇ ಮುಳುವಾಯ್ತು. ಸ್ವಲ್ಪ ಖಡಕ್‌ ಆಗಿ ಇದ್ದಿದ್ರೆ ಅರಿ ಇರೋದು. ಇನ್ನೊಬ್ರ ಮನಸ್ಸು ನೋಯಿಸಬಾರದು ಅಂತ ಇದ್ದಿದ್ದೇ ದೊಡ್ಡ ತಪ್ಪಾಗಿದ್ದು ಎಂದು ಸ್ನೇಕ್ ಶ್ಯಾಮ್ ಹೇಳಿದ್ದಾರೆ.


ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್  ನಲ್ಲಿ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್ ಅವರಿಗೆ ಬೇರೆಯವರನ್ನು ನೋಯಿಸಬಾರದು ಎಂಬ ತಮ್ಮ ಒಳ್ಳೆಯತನವೇ ಮುಳುವಾಯಿತು ಅನಿಸಿದೆ. ಹಾಗೆಯೇ ಬಿಗ್ ಬಾಸ್ ಮನೆಯೊಳಗೆ ಒಂದು ವಾರದಲ್ಲಿ ಸಿಕ್ಕ ಅನುಭವದ ಕುರಿತು ಖುಷಿಯೂ ಇದೆ. ಮನೆಯಿಂದ ಹೊರಬಂದ ತಕ್ಷಣ ಅವರು JioCinemaಗೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.


ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannadaದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.


ಇದನ್ನೂ ಓದಿ: ಸಲ್ಮಾನ್ ಖಾನ್ ಬಿಗ್ ಬಾಸ್ 17 ಹೋಸ್ಟ್ ಮಾಡಲು ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.