BBK 10: ಸ್ನೇಕ್‌ ಶ್ಯಾಮ್‌ ಸಮರ್ಥರಾದ್ರೂ ಎಲಿಮಿನೇಟ್‌ ಆಗಲು ಕಾರಣ ಇದೇನಾ?

Bigg Boss Kannada 10 Elimination : ಸಮರ್ಥರಾಗಿ ಮನೆಯೊಳಗೆ ಹೋಗಿದ್ದ ಸ್ನೇಕ್‌ ಶ್ಯಾಮ್‌ ಇದೀಗ ದೊಡ್ಮನೆಯಿಂದ ಹೊರಬಂದಿದ್ದಾರೆ. ಕೆಲವು ವಿಚಾರಗಳು ಸ್ನೇಕ್‌ ಶ್ಯಾಮ್‌ ಅವರಿಗೆ ಮೈನಸ್‌ ಪಾಯಿಂಟ್‌ ಆದವು.  

Written by - Chetana Devarmani | Last Updated : Oct 16, 2023, 08:21 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್ 10
  • ಬಿಗ್‌ ಬಾಸ್‌ ಮೊದಲ ಎಲಿಮಿನೇಷನ್‌
  • ಮೊದಲ ವಾರ ಸ್ನೇಕ್ ಶ್ಯಾಮ್ ಎಲಿಮಿನೇಟ್
BBK 10: ಸ್ನೇಕ್‌ ಶ್ಯಾಮ್‌ ಸಮರ್ಥರಾದ್ರೂ ಎಲಿಮಿನೇಟ್‌ ಆಗಲು ಕಾರಣ ಇದೇನಾ? title=
Snake Shyam

Snake Shyam Eliminated from Bigg Boss 10: ಬಿಗ್‌ ಬಾಸ್‌ ಕನ್ನಡ ಸೀಸನ್ 10 ರ ಮೊದಲ ಎಲಿಮಿನೇಷನ್‌ ನಿನ್ನೆ ನಡೆಯಿತು. ಸಮರ್ಥರಾಗಿ ಮನೆಯೊಳಗೆ ಹೋಗಿದ್ದ ಸ್ನೇಕ್‌ ಶ್ಯಾಮ್‌ ಇದೀಗ ದೊಡ್ಮನೆಯಿಂದ ಹೊರಬಂದಿದ್ದಾರೆ. ಪ್ರಾಣಿ ಪ್ರೇಮಿ, ಉರಗ ರಕ್ಷಕ ಸ್ನೇಕ್ ಶ್ಯಾಮ್ ಅವರು ಮೊದಲ ವಾರದಲ್ಲೇ ವೀಕ್ಷಕರ ಮನ ಗೆಲ್ಲಲು ಕೊಂಚ ಎಡವಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. 

ಸ್ನೇಕ್ ಶ್ಯಾಮ್ ಮೊದಲ ವಾರವೇ ಎಲಿಮಿನೇಟ್ ಆಗಿದ್ದರ ಹಿಂದೆ ಕೆಲವು ಕಾರಣಗಳಿವೆ. ಕೆಲವು ವಿಚಾರಗಳು ಸ್ನೇಕ್‌ ಶ್ಯಾಮ್‌ ಅವರಿಗೆ ಮೈನಸ್‌ ಪಾಯಿಂಟ್‌ ಆದವು. ಉರಗಗಳ ಮನಗೆದ್ದ ಈ ಪ್ರಾಣಿ ಪ್ರೇಮಿ ನೋಡುಗರ ಹೃದಯ ಗೆಲ್ಲಲು ವಿಫಲರಾದರೇ ಎಂಬ ಪ್ರಶ್ನೆ ಕಾಡ್ತಿದೆ. 

ಸುಮಾರು 58 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರುವ ಸ್ನೇಕ್ ಶ್ಯಾಮ್ ತಮಗಿರುವ ಪರಿಸರದ ಜ್ಞಾನ, ಉರಗ ರಕ್ಷಣೆ ಸಮಯದಲ್ಲಿ ಎದುರಿಸಿದ ಹಲವು ರೋಮಾಂಚಕಾರಿ ಕತೆಗಳನ್ನು ಬಿಗ್‌ ಬಾಸ್‌ನಲ್ಲಿ ಹೇಳುತ್ತಾರೆ ಎಂದು ಎಲ್ಲರೂ ಕಾದಿದ್ದರು. ಆದರೆ ಮೊದಲ ವಾರವೇ ಸ್ನೇಕ್‌ ಶ್ಯಾಮ್‌ ಮನೆಯಿಂದ ಆಚೆ ಬಂದರು. 

ಇದನ್ನೂ ಓದಿ : ರಕ್ಷಕ್‌ ಬುಲೆಟ್ ಬಿಗ್‌ ಬಾಸ್‌ ಮನೆಗೆ ಬಂದಿದ್ದು ಯಾಕೆ ಗೊತ್ತಾ? ‌ಪ್ರಥಮ್‌ ಎದುರು ಹೇಳೇ ಬಿಟ್ರು ಆ ಗುಟ್ಟು!! 

ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲರಿಗಿಂತ ಹಿರಿಯ ವಯಸ್ಸಿನವರು ಸ್ನೇಕ್‌ ಶ್ಯಾಮ್‌. ವಯಸ್ಸಿನ ಕಾರಣ ಟಾಸ್ಕ್‌ಗಳಲ್ಲಿಯೂ ಸರಿಯಾಗಿ ಭಾಗಿಯಾಗುತ್ತಿರಲಿಲ್ಲ. ಹೋಗಲಿ ಮಾತಿನಿಂದಲಾದರೂ ಅಟೆನ್ಷನ್‌ ತೆಗೆದುಕೊಳ್ಳಬಹುದು ಎಂದರೆ ಮಾತು ಸಹ ಮೃದು. ಹೆಚ್ಚು ಅಗ್ರೆಸ್ಸಿವ್ ಅಲ್ಲದ ಸ್ನೇಕ್‌ ಶ್ಯಾಮ್‌ ಅವರನ್ನು ಮನೆಯವರೇ ನಾಮಿನೇಟ್‌ ಮಾಡಿದರು. 

 

 

ಕಳಪೆ ನೀಡಲು ತಮ್ಮದೇ ಕಾರಣಗಳನ್ನು ನೀಡಿದರು. ಬಿಗ್‌ ಬಾಸ್‌ ಮನೆಯ ಮೊದಲ ಕ್ಯಾಪ್ಟನ್‌ ಆದ ಕಾರ್ತಿಕ್‌ ಕೂಡ ಸ್ನೇಕ್‌ ಶ್ಯಾಮ್‌ ಅವರನ್ನೇ ಅಸಮರ್ಥ ಎಂದು ಘೋಷಿಸಿದರು. ಸಮರ್ಥರಾಗಿ ಮನೆಯೊಳಗೆ ಬಂದಿದ್ದ ಸ್ನೇಕ್‌ ಶ್ಯಾಮ್‌ ಬಳಿಕ ಅಸಮರ್ಥರಾದರು. ಹೀಗೆಯೇ ಅವರ ಸೈಲೆನ್ಸ್‌ ಅನ್ನೇ ಬಿಗ್‌ ಬಾಸ್‌ ಮನೆಯವರು ಈಸಿ ಟಾರ್ಗೆಟ್ ಮಾಡಿಕೊಂಡರು.

ಇದನ್ನೂ ಓದಿ : ಬಿಗ್‌ ಬಾಸ್‌ ಮನೆಯಲ್ಲಿ ಜಡೆ ಜಗಳ.. ನಮ್ರತಾ ಜೊತೆ ವಾದಕ್ಕಿಳಿದು ಕಣ್ಣೀರಿಟ್ಟ ತನಿಷಾ! 

ಸ್ನೇಕ್ ಶ್ಯಾಮ್ ಮನೆಯ ಕೆಲವು ಸದಸ್ಯರ ಬಳಿ ತಾವು ಪ್ರಾಣಿಗಳನ್ನು ಬಿಟ್ಟು ಬಂದಿರುವುದಕ್ಕೆ ಬೇಸರವಾಗುತ್ತಿದೆ ಎಂದಿದ್ದರು. ಅಲ್ಲದೇ ಅವುಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದು, ಹೋಗಿ ಬಿಡೋಣ ಅನ್ನಿಸುತ್ತಿದೆ ಎಂದಿದ್ದರು. ಇದೂ ಸ್ನೇಕ್‌ ಶ್ಯಾಮ್‌ ಅವರು ಮನೆಯಿಂದ ಹೊರಹೋಗಲು ಕಾರಣ ಆಗಿರಬಹುದು. ಮನೆಯಲ್ಲಿದ್ದ ಒಂದು ವಾರ ಯಾರ ಜೊತೆಯೂ ಜಗಳವಾಡದೇ, ಮನಸ್ತಾಪ ಮಾಡಿಕೊಳ್ಳದೇ ಇದ್ದ ಸ್ನೇಕ್‌ ಶ್ಯಾಮ್‌ ಇದೀಗ ಮನೆಯಿಂದ ಹೊರಗೆ ಬಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News