BBK 10 : ವಾರಾಂತ್ಯ ಸಮೀಪಿಸುತ್ತಿದ್ದಂತೆಯೇ ಎಲಿಮಿನೇಷನ್‌ ತೂಗುಗತ್ತಿಯಡಿಯಲ್ಲಿದ್ದಾರೆ ಸ್ಪರ್ಧಿಗಳು. ಇದೀಗ ಪ್ರತಿಯೊಬ್ಬರೂ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಆಟವಾಡುತ್ತಿದ್ದಾರೆ. ಯಾವಾಗ ಏನು ಮಾಡಿದರೆ ಎಲ್ಲಿ ಉಲ್ಟಾ ಹೊಡೆ ಯುವುದೋ ಎನ್ನುವ ಭಯದಲ್ಲಿಯೇ ಅಳೆದು ತೂಗಿ ತಂತ್ರ ನಡೆಸಲಾಗುತ್ತಿದೆ.ಒಂದೆರಡು ವಾರಗಳಿಂದ ಜೋಶ್ ಕಳೆದುಕೊಂಡು ಸೇಫ್ ಆಗಿ ಆಡುತ್ತಿದ್ದ ಸ್ಪರ್ಧಿಗಳು ಮತ್ತೆ ತಮ್ಮ ಹಳೇ ಫಾರ್ಮ್ ಗೆ ಮರಳಿದ್ದಾರೆ. ಒಬ್ಬರನ್ನೊಬ್ಬರು ಮಣಿಸಲು, ಹಣಿಯಲು ಹೊಸ ಹೊಸ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇದು ಪರಪಸ್ಪರ ದೂಷಣೆಗೂ, ಜಗಳಕ್ಕೂ ಎಡೆ ಮಾಡಿಕೊಡುತ್ತಿದೆ. 


COMMERCIAL BREAK
SCROLL TO CONTINUE READING

ಮನೆ ಕಳೆದುಕೊಂಡಿದ್ದ ಮೊತ್ತವನ್ನು ಮತ್ತೆ ಗಳಿಸಲು ಬಿಗ್ ಬಾಸ್ ಅವಕಾಶ ನೀಡಿದ್ದು, ಸ್ಪರ್ಧಿಗಳು ಬಿಗ್ ಬಾಸ್ ನೀಡುವ ಆಟದ ಸವಾಲನ್ನು ಗೆಲ್ಲಬೇಕಾಗಿದೆ. ಇದೀಗ ಈ ಆಟದ ಸವಾಲಿನ ಕೊನೆಯ ಗೇಮ್ ಉಳಿದುಕೊಂಡಿದೆ. ಇಲ್ಲಿಯವರೆಗೆ ಈ ಸವಾಲಿನ ಆಟವನ್ನು ಯಾರು ಆಡಬೇಕು ಎನ್ನುವುದನ್ನು ಸ್ಪರ್ಧಿಗಳ ಮಧ್ಯೆ ವೋಟ್ ಮಾಡುವ ಮೂಲಕ ನಿರ್ಧಾರ ಮಾಡಲಾಗುತ್ತಿತ್ತು. ಆದರೆ, ಕೊನೆಯ ಆಟಕ್ಕೆ ಆಟಗಾರನ ಆಯ್ಕೆ ಹೇಗೆ ಎನ್ನುವುದರಲ್ಲಿ ಮನೆ ಕ್ಯಾಪ್ಟನ್‌, ಸಂಗೀತಾ ಸ್ವಲ್ಪ ಬದಲಾವಣೆ ಮಾಡಿದ್ದಾರೆ. 


ಇದನ್ನೂ ಓದಿ : ಒಂದೇ ಒಂದು ಹಿಟ್‌ ಸಿನಿಮಾದಿಂದ ಪ್ರಭಾಸ್, ಶಾರುಖ್‌ಗಿಂತ ದೊಡ್ಡ ಸ್ಟಾರ್‌ಡಮ್ ಪಡೆದ ನಟಿ ಈಕೆ!


‘ಈ ಟಾಸ್ಕ್‌ ಯಾರು ಆಡುತ್ತಿಲ್ಲವೋ ಅವರು ನೆಕ್ಸ್ಟ್ ಟಾಸ್ಕ್ ಆಡಿ’ ಎಂದು ಸಂಗೀತಾ ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ವೋಟಿಂಗ್ ಅಂತ ಆಟ ಶುರುವಾಗಿತ್ತು. ಆದರೆ ಈಗ ಯಾರಿಗೆ ಅವಕಾಶ ಸಿಗಲ್ವೋ ಅವರು ಆಡಬೇಕು  ಎಂದು ಹೇಳುತ್ತಿದ್ದೀರಾ. ವೋಟಿಂಗ್‌ನಿಂದಾನೇ ಈಗಲೂ ನಿರ್ಧಾರ ಆಗಲಿ ಎಂದು ಜೋರು ಧ್ವನಿಯಲ್ಲಿ ಹೇಳಿದ್ದಾರೆ. ತುಕಾಲಿ ಮಾತಿಗೆ ವಿನಯ್  ಸಿಟ್ಟಾಗಿದ್ದು, ಇಬ್ಬರ ನಡುವೆ ಜಗಳ ನಡೆದಿದೆ. 


‘ಏನ್ ಮಾಡ್ತೀಯಾ ನೀನು? ಜೋರಾಗಿ ಮಾತಾಡಿದ ತಕ್ಷಣ ಏನೂ ಕಿತ್ಕೊಳಕ್ಕಾಗಲ್ಲ ಇಲ್ಲಿ. ನೀನು ಫಸ್ಟ್ ಡೇನಿಂದ ಏನು ಮಾಡಿಕೊಂಡು ಬಂದಿದೀಯಾ ಅಂತ ಎಲ್ಲರಿಗೂ ಗೊತ್ತು’ ಎಂದು ವಿನಯ್ ಕಿರುಚಾಡಿದ್ದಾರೆ. ತುಕಾಲಿ ಕೂಡ ಜಗ್ಗದೇ ಅವರಷ್ಟೇ ಎತ್ತರದ ಧ್ವನಿಯಲ್ಲಿ ಉತ್ತರ ಕೊಟ್ಟಿದ್ದಾರೆ.


ಇದನ್ನೂ ಓದಿ : Bigg Boss: ಬಿಗ್‌ಬಾಸ್‌ನಿಂದ ದೊಡ್ಡ ಮೊತ್ತದ ಹಣದೊಂದಿಗೆ ಹೊರನಡೆದ ಟಾಪ್ 5 ಸ್ಪರ್ಧಿಗಳಿವರು!


ಇದೆಲ್ಲದರ ಮಧ್ಯೆ ಬಂದ ವರ್ತೂರುಸಂತೋಷ್ ‘ಅಂಥ ಪದಗಳನ್ನೆಲ್ಲ ಬಳಸಬೇಡಿ ಇಲ್ಲಿ. ಅವರವರ ಗತ್ತು ಅವರವರಿಗೆ ಗೊತ್ತು’ ಎಂದು ತಮ್ಮದೇ ಸ್ಟೈಲ್‌ನಲ್ಲಿ ಅಬ್ಬರಿಸಿದ್ದಾರೆ. ಒಟ್ಟಾರೆ ಬಿಗ್‌ಬಾಸ್ ಮನೆಯೊಳಗೆ ಡು ಆರ್ ಡೈ ಹೋರಾಟ ಶುರುವಾಗಿರುವುದಂತೂ  ನಿಜ. ಇದರಲ್ಲಿ ಯಾರು ಗೆಲ್ತಾರೆ.ಯಾರು ಸೋತು ಗೇಟ್‌ಪಾಸ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ವಾರಾಂತ್ಯದ ಎಪಿಸೋಡ್‌ನಲ್ಲಿ ಕಾದುನೋಡೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.