ಈ ದಾಖಲೆಯೊಂದಿಗೆ Biggboss Final ಪ್ರವೇಶಿಸಿರುವ ಸ್ಪರ್ಧಿ!ಕಾರ್ತಿಕ್, ಸಂಗೀತಾ ಕೂಡಾ ಮಾಡಿಲ್ಲ ಈ ಸಾಧನೆ
BBK 10 : ಇವರಿಷ್ಟು ಜನರ ಪೈಕಿ ಒಬ್ಬ ಸ್ಪರ್ಧಿ ಮಾತ್ರ ಒಂದು ವಿಷಯದಲ್ಲಿ ದಾಖಲೆ ಬರೆದು ಫಿನಾಲೆ ವಾರದವರೆಗೆ ಬಂದಿದ್ದಾರೆ.
ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 10 ರ ಫಿನಾಲೆಗೆ ಇನ್ನು ಇರುವುದು ಕೇವಲ ಎರಡು ದಿನ ಬಾಕಿ. ಈಗಾಗಲೇ ಯಾರು ವಿಜೇತ ಎನ್ನುವ ಒಂದು ಸಾಮಾನ್ಯ ಲೆಕ್ಕಾಚಾರ ವೀಕ್ಷಕರ ಮನದಲ್ಲಿದೆ. ಇಷ್ಟು ಬಾರಿಯ ಸೀಸನ್ ಗೆ ಹೋಲಿಸಿದರೆ ಈ ಸೀಸನ್ ಬಹಳ ಕುತೂಹಲ ಭರಿತವಾಗಿತ್ತು. ಮೊದಲ ದಿನದಿಂದಲೇ ಜೋರು ಮಾತು, ಜಗಳ, ಅಗ್ರೆಶನ್ ನಿಂದಲೇ ಸ್ಪರ್ಧಿಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಒಬ್ಬರು ಎಲಿಮಿನೆಟ್ :
ಬಿಗ್ ಬಾಸ್ ಕನ್ನಡ ಸೀಸನ್ 10ರ ಘಟನೆಗಳು, ಸ್ಪರ್ಧಿಗಳು, ಆಟ, ಟಾಸ್ಕ್ ಎಲ್ಲವೂ ಒಂದಕ್ಕಿಂತ ಒಂದು ಮೀರಿಸುವಂತದ್ದು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಬಾರಿಯ ಬಿಗ್ ಬಾಸ್ ಭಾರೀ ಸದ್ದು ಮಾಡಿತ್ತು. ಇನ್ನೇನು ಈ ಸೀಸನ್ ಎರಡು ದಿನಗಳಲ್ಲಿ ಮುಕ್ತಾಯವಾಗಲಿದೆ. ಸದ್ಯಕ್ಕೆ ಫಿನಾಲೆ ವಾರದಲ್ಲಿ ಆರು ಮಂದಿ ಸ್ಪರ್ಧಿಗಳು ಮನೆಯ ಒಳಗಿದ್ದಾರೆ. ಇವರಲ್ಲಿ ಒಬ್ಬರಿಗೆ ವಾರದ ಮಧ್ಯೆಯೇ ಮನೆಯ ಬಾಗಿಲು ತೆರೆದುಕೊಳ್ಳಲಿದೆ. ಅಂದರೆ ಒಬ್ಬ ಸ್ಪರ್ಧಿ ಎಲಿಮಿನೆಟ್ ಆಗಿ ಹೊರ ಬರುತ್ತಾರೆ.
ಇದನ್ನೂ ಓದಿ : Vishwa neta movie : ʼವಿಶ್ವ ನೇತಾʼ ಸಿನಿಮಾದ ಮೂಲಕ ಪ್ರಪಂಚ ಮುಂದೆ ʼಪಿಎಂ ನಮೋʼ ಜೀವನ ಕಥೆ..!
ದಾಖಲೆ ಬರೆದ ಸ್ಪರ್ಧಿ :
ಈಗ ಫಿನಾಲೆ ವಾರದಲ್ಲಿ ಸಂಗೀತಾ, ವಿನಯ್, ಕಾರ್ತಿಕ್ , ತುಕಲಿ ಸಂತೋಷ್, ವರ್ತೂರು ಸಂತೋಷ್ ಮತ್ತು ಪ್ರತಾಪ್ ಇದ್ದಾರೆ. ಎಲ್ಲರೂ ಉತ್ತಮ ಸ್ಪರ್ಧೆಗಳನ್ನು ನೀಡುತ್ತಾ ಬಂದವರೇ. ಇವರ ಇಲ್ಲಿಯವರೆಗಿನ ಜರ್ನಿ ಬಹಳ ಸೊಗಸಾಗಿತ್ತು.ಆದರೆ, ಇವರಿಷ್ಟು ಜನರ ಪೈಕಿ ಒಬ್ಬ ಸ್ಪರ್ಧಿ ಮಾತ್ರ ಒಂದು ವಿಷಯದಲ್ಲಿ ದಾಖಲೆ ಬರೆದು ಫಿನಾಲೆ ವಾರದವರೆಗೆ ಬಂದಿದ್ದಾರೆ. ಅದು ಬೇರೆ ಯಾರೂ ಅಲ್ಲ ಬಿಗ್ ಬಾಸ್ ಮನೆಯ ಆನೆ ಎಂದೇ ಹೆಸರಾಗಿರುವ ವಿನಯ್ ಗೌಡ.
ಒಮ್ಮೆಯೂ ಪಡೆದಿಲ್ಲ ಕಳಪೆ ಪಟ್ಟ :
ಹೌದು, ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಒಬ್ಬರು ಕ್ಯಾಪ್ಟನ್ ಆಗುತ್ತಾರೆ. ಸ್ಪರ್ಧಿಯ ಆಟ ನಡತೆ ಆಧಾರದಲ್ಲಿ ಕಿಚ್ಚನ ಚಪ್ಪಾಳೆ ಸಿಗುತ್ತದೆ.ಒಬ್ಬರಿಗೆ ಉತ್ತಮ ಸಿಗುತ್ತದೆ. ಇನ್ನೊಬ್ಬರಿಗೆ ಕಳಪೆ ಸಿಗುತ್ತದೆ. ಇಲ್ಲಿಯವರೆಗೆ ಈ ಒಂದು ವಾರವೂ ಕಳಪೆ ಪಟ್ಟವನ್ನು ಪಡೆಯದೆ ಇರುವ ಸ್ಪರ್ಧಿ ವಿನಯ್. ಇಲ್ಲಿಯವರೆಗೆ ಕಳಪೆ ಪಟ್ಟ ತೆಗೆದುಕೊಂಡು ಜೈಲಿಗೆ ಹೋಗದೆ ಫಿನಾಲೆ ವಾರದವರೆಗೆ ತಲುಪಿದ್ದಾರೆ. ಈ ಮೂಲಕ ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ ಯಾರೂ ಮಾಡದ ದಾಖಲೆಯನ್ನು ವಿನಯ್ ಗೌಡ ಬರೆದಿದ್ದಾರೆ.
ಇದನ್ನೂ ಓದಿ : BBK10: ಆತ್ಮಸಾಕ್ಷಿಯ ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡ ಬಿಗ್‌ಬಾಸ್ ಸ್ಪರ್ಧಿಗಳು!
ನಮೃತಾ ಕೂಡಾ ಕಳಪೆ ಪಟ್ಟ ಪಡೆದಿರಲಿಲ್ಲ. ಆದರೆ ಅವರು ಫಿನಾಲೆ ವಾರಕ್ಕೂ ಮುನ್ನವೇ ಎಲಿಮಿನೆಟ್ ಆಗಿದ್ದಾರೆ ಎನ್ನುವುದು ಕೂಡಾ ಇಲ್ಲಿ ಗಮನಿಸಬೇಕಾದ ಅಂಶ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.