BBK10:ʼಹುಳದ ಜೊತೆಗೆ ಮಾತನಾಡುತ್ತಿದ್ದೇನೆ’ ಎಂದ ವಿನಯ್: ರೊಚ್ಚಿಗೆದ್ದ ತನಿಷಾ!
Bigg Boss Kannada Season 10: ಬಿಗ್ಬಾಸ್ ಮನೆಯಲ್ಲಿ ಮತ್ತೆ ತನಿಷಾ ಹಾಗೂ ವಿನಯ್ ಮಧ್ಯೆ ಕಿತ್ತಾಟ ನಡೆದಿದ್ದು, ಸ್ನೇಹಿತ್ ಜೊತೆಗೆ ತನಿಷಾ ಮಾತನಾಡುವಾಗ ವಿನಯ್ ಮಧ್ಯ ಬಾಯಿ ಹಾಕಿದರು. ಇದಕ್ಕ ತನಿಷಾ ವಿನಯ್ಗೆ ಪ್ರಶ್ನಿಸಿದಾಗ, ಅದಕ್ಕೆ ವಿನಯ್ ‘ಹುಳದ ಜೊತೆಗೆ ಮಾತನಾಡುತ್ತಿದ್ದೇನೆ’ ಎಂದಿದ್ದರಿಂದ ತನಿಷಾ ಸಿಟ್ಟಾದರು.
Tanisha And Vinay: ಬಿಗ್ಬಾಸ್ ಮತ್ತೊಂದು ವಿಶೇಷ ಚಟುವಟಿಕೆ ನೀಡಿದ್ದು, ಅದರ ಅನುಸಾರ ಅತಿ ಹೆಚ್ಚು ಅಭಿಪ್ರಾಯ ಕೊಡುವ ಸ್ಪರ್ಧಿಯಿಂದ ಅತಿ ಕಡಿಮೆ ಅಭಿಪ್ರಾಯ ಕೊಡುವ ಸ್ಪರ್ಧಿಯನ್ನು ರಾಕಿಂಗ್ ಆಧಾರದಲ್ಲಿ ಸಾಲಾಗಿ ಕೂರಿಸಬೇಕಿತ್ತು. ಎಲ್ಲರ ಒಮ್ಮತದಲ್ಲಿ ಈ ಚಟುವಟಿಕೆ ಆಗಬೇಕಿತ್ತು. ಅತಿ ಹೆಚ್ಚು ಧೈರ್ಯವಾಗಿ ಅಭಿಪ್ರಾಯ ಕೊಡುವ ಸ್ಪರ್ಧಿ - ರಾಕಿಂಗ್ ಪ್ರಕಾರ - ಸಂಗೀತಾ, ವಿನಯ್, ತನಿಷಾ, ನಮ್ರತಾ, ಮೈಕಲ್, ಕಾರ್ತಿಕ್, ವರ್ತೂರು ಸಂತೋಷ್, ಸಿರಿ, ಸ್ನೇಹಿತ್, ನೀತು, ಭಾಗ್ಯಶ್ರೀ, ಇಶಾನಿ, ತುಕಾಲಿ ಸಂತು ಹಾಗೂ ಡ್ರೋನ್ ಪ್ರತಾಪ್.
ಹಾಗೆಯೇ ಕಡಿಮೆ ಅಭಿಪ್ರಾಯ ಹೊರಹಾಕುವ ಸ್ಪರ್ಧಿಗಳು ಎಂದು ಒಮ್ಮತದ ಆಯ್ಕೆಯ ಪ್ರಕಾರ - ಸಿರಿ, ಸ್ನೇಹಿತ್, ನೀತು, ಭಾಗ್ಯಶ್ರೀ, ಇಶಾನಿ, ತುಕಾಲಿ ಸಂತು ಮತ್ತು ಡ್ರೋನ್ ಪ್ರತಾಪ್ ಎಂದೆನಿಸಿಕೊಂಡರು. ಹೀಗಾಗಿ, ಇವರುಗಳೆಲ್ಲಾ ತಮ್ಮ ತಮ್ಮ ಅಭಿಪ್ರಾಯಗಳನ್ನ ಹೊರಹಾಕಲು ‘ಬಿಗ್ ಬಾಸ್’ ವಿಶೇಷ ಚಟುವಟಿಕೆ ಕೊಟ್ಟದ್ದು, ವಿಶೇಷ ಚಟುವಟಿಕೆಯ ಅನುಸಾರ, ಒಬ್ಬೊಬ್ಬರು ಮುಂದೆ ಬಂದು ತಮಗೆ ಮೀಸಲಾಗಿರುವ ಲಕೋಟೆಯಲ್ಲಿರುವ ವಿಷಯಕ್ಕೆ ಅನುಗುಣವಾಗಿ ಇತರರನ್ನು ರಾಕಿಂಗ್ ಮಾದರಿಯಲ್ಲಿ ನಿಲ್ಲಿಸಬೇಕಿತ್ತು.
ಇದನ್ನು ಓದಿ: ʼವಿನಯ್ ಎಲಿಮಿನೇಟ್ ಆಗಬೇಕಿತ್ತು ಎಂದು ಕಾದ್ದಿದೆʼ: ಸಂಗೀತಾಗೆ ಯಾಕಿಷ್ಟು ಕೋಪ?
ಸಿರಿಗೆ ಸಿಕ್ಕಿದ್ದು ‘ನೌಟಂಕಿ’ವಿಷಯವಾದರಿಂದ, ಸಿರಿಯ ಪ್ರಕಾರ, ಅತಿ ಹೆಚ್ಚು ನೌಟಂಕಿ - ನೀತು, ಅತಿ ಕಡಿಮೆ ನೌಟಂಕಿ - ಡ್ರೋನ್ ಪ್ರತಾಪ್. ಹಾಗೆಯೆ ಸ್ನೇಹಿತ್ ಸಿಕ್ಕ ವಿಷಯ ‘ಅತ್ಯಂತ ಪ್ರೀತಿ ಪಾತ್ರ’ ಆದರಿಂದ ಸ್ನೇಹಿತ್ ಪ್ರಕಾರ ಅತಿ ಹೆಚ್ಚು ನಮ್ರತಾ, ವಿನಯ್ ಮತ್ತು ಅತಿ ಕಡಿಮೆ ಸಂಗೀತಾ, ತನಿಷಾ. ಮುಂದೆ ನೀತುಗೆ ಸಿಕ್ಕಿದ್ದು ‘ಗೆಲ್ಲುವ ಕುದುರೆ’ ಆದರಿಂದ ನೀತು ಪ್ರಕಾರ ಅತಿ ಹೆಚ್ಚು ವಿನಯ್ ಹಾಗೂ ಅತಿ ಕಡಿಮೆ ಇಶಾನಿ. ಹಾಗೆ ಇಶಾನಿಗೆ ಸಿಕ್ಕಿದ್ದು ‘ಪ್ರಾಮಾಣಿಕ’, ಹೀಗಿರುವಾಗ ಇಶಾನಿ ಪ್ರಕಾರ ಅತಿ ಹೆಚ್ಚು - ನಮ್ರತಾ, ಅತಿ ಕಡಿಮೆ - ವರ್ತೂರು ಸಂತೋಷ್. ಮತ್ತೆ ತುಕಾಲಿ ಸಂತುಗೆ ಸಿಕ್ಕಿದ್ದರಿಂದ ಸಂತುಗೆ‘ಊಸರವಳ್ಳಿ’. ಅತಿ ಹೆಚ್ಚು - ನೀತು, ಅತಿ ಕಡಿಮೆ - ನಮ್ರತಾ. ಕೊನೆಯದಾಗಿ ಡ್ರೋನ್ ಪ್ರತಾಪ್ಗೆ ‘ಬುದ್ಧಿವಂತ’ ಸಿಕ್ಕಿದ್ದರಿಂದ ಅತಿ ಹೆಚ್ಚು - ವಿನಯ್ ಹಾಗೆಯೇ ಅತಿ ಕಡಿಮೆ - ವರ್ತೂರು ಸಂತೋಷ್
ಸ್ನೇಹಿತ್ಗೆ ‘ಅತ್ಯಂತ ಪ್ರೀತಿ ಪಾತ್ರ’ ಲಭಿಸಿತ್ತು. ಅತಿ ಹೆಚ್ಚು - ನಮ್ರತಾ, ವಿನಯ್ಗೆ ನೀಡಿದರು. ಅತಿ ಕಡಿಮೆ - ಸಂಗೀತಾ ಮತ್ತು ತನಿಷಾಗೆ ಕೊಟ್ಟರು. ಸ್ನೇಹಿತ್ ಮತ್ತು ಸಂಗೀತಾ, ತನಿಷಾ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು. ಮೈಕಲ್, ವಿನಯ್ ರೂಲ್ಸ್ ಬ್ರೇಕ್ ಮಾಡಿದ ವಿಷಯ ಬಂತು. ಈ ವೇಳೆ ವಿನಯ್ ಮಧ್ಯೆ ಬಾಯಿ ಹಾಕಿದರು. "ಎಲ್ಲಾ ವಿಷಯಕ್ಕೂ ಮಾತನಾಡೋದು ಚೆನ್ನಾಗಿರಲ್ಲ" ಎಂದರು ವಿನಯ್. ಅದಕ್ಕೆ, "ಯಾವ ವಿಷಯಕ್ಕೆ? ನನಗೆ ಯಾವುದಕ್ಕೆ ಮಾತನಾಡಬೇಕು ಅನ್ಸುತ್ತೋ, ನಾನು ಮಾತಾಡ್ತೀನಿ. ಒಬ್ಬರು ಮಾತನಾಡಬೇಕಾದರೆ, ಮಧ್ಯದಲ್ಲಿ ಮಾತಾಡಬೇಡಿ ಅಂತ ನೀವೇ ಹೇಳ್ತೀರಾ. ನೀವೇ ಅದನ್ನ ಫಾಲೋ ಮಾಡಲಿಲ್ಲ ಅಂದ್ರೆ ಹೇಗೆ? ನಿಮಗೆ ಯಾರಾದರೂ ಜೋರಾಗಿ ಮಾತಾಡ್ತಾರೆ ಅಂದ್ರೆ, ಅದನ್ನ ತಡ್ಕೊಳ್ಳೋಕೆ ಆಗಲ್ಲ. ಉರಿಯುತ್ತೆ. ತಾಕತ್ತಿದ್ದರೆ ಮಾತಾಡಬೇಕು. ಇನ್ನೊಬ್ಬರಿಗೆ ಹೇಳ್ತಾರೆ ಸೀರಿಯಲ್ ಡ್ರಾಮಾ ಅಂತ. ನಿಮ್ಮದು ಟಿಪಿಕಲ್ ಡ್ರಾಮಾ. ಇದನ್ನೇ ಹೇಳೋದು ಫೀಡ್ ಮಾಡೋದು, ಇನ್ಫ್ಲುಯೆನ್ಸ್ ಅಂತ. ಕ್ಲಿಯರ್ ಆಗಿ ಕಾಣಿಸುತ್ತಿದೆ" ಎಂದು ತನಿಷಾ ಕೂಗಾಡಿದರು . "ಎಲ್ಲದಕ್ಕೂ ಮಾತನಾಡೋದು ಪಾಯಿಂಟ್ ಲೆಸ್" ಅಂತ ವಿನಯ್ ಪದೇ ಪದೇ ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.