Bikramjeet Kanwarpal : ಖ್ಯಾತ ಬಾಲಿವುಡ್ ನಟ ಬಿಕ್ರಮ್‌ಜೀತ್ ಕನ್ವರ್ಪಾಲ್ ಕೊರೋನಾಗೆ ಬಲಿ!
ಬಿಕ್ರಮ್‌ಜೀತ್ ಅವರ ಸುದೀರ್ಘ ಸಿನಿ ಪಯಣದಲ್ಲಿ ಅನೇಕ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ನವದೆಹಲಿ: ಬಾಲಿವುಡ್ ಮತ್ತು ಟಿವಿ ನಟ ಬಿಕ್ರಮ್‌ಜೀತ್ ಕನ್ವರ್‌ಪಾಲ್ ಅವರು ಕೊವಿಡ್ -19 ನಿಂದ ಕೊನೆಯುಸಿರೆಳೆದಿದ್ದರೆ.
ನಟ ಬಿಕ್ರಮ್‌ಜೀತ್(Bikramjeet Kanwarpal)ಗೆ 52 ನೇ ವಯಸ್ಸಿನಲ್ಲಿ ಅಕಾಲಿಕ ನಿಧನದಿಂದ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಆಘಾತಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ : Allu Arjun : ತೆಲಗು ನಟ ಅಲ್ಲು ಅರ್ಜುನ್ ಗೆ ಕೊರೋನಾ ಪಾಸಿಟಿವ್..!
ಬಿಕ್ರಮ್‌ಜೀತ್ ಕನ್ವರ್‌ಪಾಲ್ ಅವರ ಸುದೀರ್ಘ ಸಿನಿ ಪಯಣದಲ್ಲಿ ಅನೇಕ ಟಿವಿ ಧಾರಾವಾಹಿ(TV serials)ಗಳು ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಬಿಕ್ರಮ್‌ಜೀತ್ ನಟನಾ ಕ್ಶೆತ್ರಕ್ಕೆ ಬರುವ ಮೊದಲು ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರು ಬಾಲಿವುಡ್ ನಲ್ಲಿ ಹಲವಾರು ಸಿನಿಮಾ ಮತ್ತು ಟಿವಿ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ : Radhe Release Date: ಮನೆಯಲ್ಲಿಯೇ ಕುಳಿತು ವಿಕ್ಷೀಸಿ ಸಲ್ಮಾನ್ ಅಭಿನಯದ Radhe ಚಿತ್ರದ First Day First Show
ಬಿಕ್ರಮ್‌ಜೀತ್ ಸಾವಿಗೆ ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್(Ashoke Pandit) ಅವರು ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದು, “# ಕೋವಿಡ್ ಕಾರಣದಿಂದಾಗಿ ನಟ ಮೇಜರ್ ಬಿಕ್ರಮ್‌ಜೀತ್ ಕನ್ವರ್‌ಪಾಲ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ನಿವೃತ್ತ ಸೇನಾಧಿಕಾರಿ ಕನ್ವರ್ಪಾಲ್ ಅನೇಕ ಸಿನಿಮಾ ಮತ್ತು ಟಿವಿ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಲ್ಲಿ ನಟಿಸಿದ್ದಾರೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಬರೆದು ಕೊಂಡಿದ್ದಾರೆ.
ಸತ್ತರೆ ಹಿಂದೆ ಬರೋದು ಪಾಪಪುಣ್ಯ ಮಾತ್ರ, ದುಡ್ಡಲ್ಲ..! ಜಗ್ಗೇಶ್ ಹೀಗೆ ಹೇಳಿದ್ದೇಕೆ..?
ಬಿಕ್ರಮ್‌ಜೀತ್ 2003 ರಲ್ಲಿ ಶೋಬಿಜ್ ಜಗತ್ತಿಗೆ ಪ್ರವೇಶಿಸಿದರು. ಮಾಧುರ್ ಭಂಡಾರ್ಕರ್ ಅವರ 2005 ರ ಹಿಟ್ ಚಿತ್ರ 'ಪೇಜ್ 3' ನಲ್ಲಿ ಅವರು ಕಾಣಿಸಿಕೊಂಡರು. ನಂತರ ಅವರು ಪಾಪ್, ಕರಮ್, ಕಾರ್ಪೊರೇಟ್, ಥ್ಯಾಂಕ್ಸ್ ಮಾ, ಅಥಿತಿ ತುಮ್ ಕಬ್ ಜಾವೊಗೆ, ಆರಾಕ್ಷನ್, ಜಬ್ ತಕ್ ಹೈ ಜಾನ್(Jab Tak Hai Jaan), ಜೋಕರ್, ಭಯಾನಕ ಕಥೆ, ಪ್ರೇಮ್ ರತನ್ ಧನ್ ಪಯೋ ಮುಂತಾದ ಚಿತ್ರಗಳಲ್ಲಿ ಬಿಕ್ರಮ್‌ಜೀತ್ ನಟಿಸಿದ್ದಾರೆ. ಅಲ್ಲದೆ 2020 ರಲ್ಲಿ ತೆಲುಗು 'ಮಾಧ' ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ.
ಇದನ್ನೂ ಓದಿ : ಮಾಲ್ಡೀವ್ಸ್ ನಲ್ಲಿ ಮಸ್ತಿ ಮಾಡುವ ನಟ ನಟಿಯರಿಗೆ ನವಾಜುದ್ದೀನ್ ಸಿದ್ದಿಕಿ ಹೇಳಿದ್ದೇನು ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.