Yash Villain: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಎರಡು ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಗಿದೆ. ಗಲ್ಲಾಪೆಟ್ಟಿಗೆಯನ್ನು ಉಡೀಸ್ ಮಾಡಿದೆ. ಯಶ್ ಮಾತ್ರವಲ್ಲದೆ ಈ ಸಿನಿಮಾದಲ್ಲಿ ಸಹನಟರು ಕೂಡ ಕಮಾಲ್ ಮಾಡಿದ್ದಾರೆ. ಅಂತವರಲ್ಲಿ ಒಬ್ಬರು ಖಳನಾಯಕ ಗರುಡನ ಪಾತ್ರ ಮಾಡಿದ್ದ ರಾಮಚಂದ್ರರಾಜು. ಈ ರಾಮಚಂದ್ರರಾಜು ಮತ್ತು ಯಶ್  ನಡುವಿನ ಕಥೆಯೇ ಬೇರೆ…


COMMERCIAL BREAK
SCROLL TO CONTINUE READING

ರಾಮಚಂದ್ರರಾಜು ಕೆಜಿಎಫ್ ಸಿನಿಮಾದಲ್ಲಿ ಮಾತ್ರ ಖಳನಾಯಕ. ಯಶ್ ಪಾಲಿಗೆ ವಿಲನ್. ಯಶ್ ಮುಗಿಸಲು ಸ್ಕೆಜ್ ಹಾಕುವ ಖತರ್ನಾಕ್ ಕ್ರಿಮಿನಲ್. ಆದರೆ ನಿಜಜೀವನದಲ್ಲಿ ಇದೇ ರಾಮಚಂದ್ರರಾಜು, ಯಶ್ ಅವರನ್ನು ಸದಾ ಕಾಯುವ ಅಂಗರಕ್ಷಕ. ಅಷ್ಟೇಯಲ್ಲ, ಯಶ್ ಎಲ್ಲಿಗೆ ಹೋಗಬೇಕಾದರೂ ಅವರ ಕಾರನ್ನು ಡ್ರೈವ್ ಮಾಡುವವರು ಇದೇ ರಾಮಚಂದ್ರರಾಜು.


ಇದನ್ನೂ ಓದಿ- ಬಿಗ್ ಬಾಸ್‌ನಿಂದ ಹೊರಬರಲು ಇದೇ ಮುಖ್ಯ ಕಾರಣ: ಜೀ ಕನ್ನಡ  ನ್ಯೂಸ್‌ಗೆ ಗೋಲ್ಡ್ ಸುರೇಶ್ ಸ್ಪಷ್ಟನೆ 


ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಒಳ್ಳೆಯ ಸಂಬಳ ಪಡೆಯುತ್ತಿದ್ದ ರಾಮಚಂದ್ರರಾಜು 12 ವರ್ಷಗಳ ಹಿಂದೆ ಯಶ್ ಜೊತೆ ಇರಲು ತಮ್ಮ ಕೆಲಸ ಬಿಟ್ಟು ಬಂದರು. ಈಗ ಯಶ್ ಗೆ ಅಂಗರಕ್ಷರು ಅವರೇ, ಕಾರು ಚಾಲಕರು ಅವರೇ. ನಿರ್ದೇಶಕ ಪ್ರಶಾಂತ್ ನೀಲ್ ಒಮ್ಮೆ ಯಶ್ ಗೆ ಸ್ಕ್ರಿಪ್ಟ್ ಹೇಳುತ್ತಿದ್ದಾಗ ರಾಮಚಂದ್ರರಾಜು ಅವರನ್ನು ನೋಡಿ ಬಣ್ಣ ಹಚ್ಚಲು ಸಲಹೆ ನೀಡಿದ್ದಾರೆ.


ಇದನ್ನೂ ಓದಿ- ಸಲ್ಮಾನ್ ಖಾನ್ ಲೈಫ್ ಹಾಳಾಗೋಕೆ ಈ ಸ್ಟಾರ್‌ ನಟಿ ಕಾರಣ...! ಯಾರಿಗೂ ತಿಳಿಯದ ಆ ಸತ್ಯ ಬಯಲು ಮಾಡಿದ್ರಾ ಸೊಹೈಲ್ ಖಾನ್?


ಪ್ರಶಾಂತ್ ನೀಲ್ ಸಲಹೆಯ ಮೇರೆಗೆ ನಟನೆ ಮಾಡಲು ಶುರುಮಾಡಿದ ರಾಮಚಂದ್ರರಾಜು ಅವರಿಗೆ ಆರಂಭದಲ್ಲಿ ತುಂಬಾ ಕಷ್ಟವಾಗಿದೆ. ಸುಮಾರು ಒಂದು ವರ್ಷ ನಟನೆಯನ್ನು ಕಲಿತು ಆಮೇಲೆ ಮತ್ತೆ ಬಣ್ಣ ಹಚ್ಚಿದ್ದಾರೆ ಜೊತೆಗೆ ಸಕ್ಸಸ್ ಕೂಡ ಆಗಿದ್ದಾರೆ. ಅಲ್ಲದೆ ಗರುಡನಂತಹ ಪಾತ್ರ ಮಾಡಲು ನಿರ್ದಿಷ್ಟವಾದ ಆಕಾರ ರೂಢಿಸಿಕೊಳ್ಳಲು ಕೂಡ ಬೆವರು ಹರಿಸಿದ್ದಾರಂತೆ. ಕೆಜಿಎಫ್ 2 ಅಲ್ಲದೆ ರಾಮಚಂದ್ರರಾಜು ಅವರು ಸುಲ್ತಾನ್, ಸಲಾರ್ 1, ಕದನ ವಿರಾಮ, ಆರಾಟ್ಟು, ಹಿಟ್ ಲಿಸ್ಟ್, ಬಘೀರಾ ಮತ್ತಿತರ ಸಿನಿಮಾಗಳಲ್ಲೂ ಗಮನ ಸೆಳೆದಿದ್ದಾರೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.