ನವದೆಹಲಿ: ಖ್ಯಾತ ನಟಿ ಮತ್ತು ನಿರ್ಮಾಪಕಿ ದಿಯಾ ಮಿರ್ಜಾ ತಮ್ಮ ಬಾಲ್ಯದ ಜೀವನದಲ್ಲಿ ನಡೆದ ಕಹಿ ಘಟನೆಯ ಕುರಿತು ಮಾತನಾಡಿದ್ದು, ಸಾಮಾನ್ಯ ಯುವತಿಯರಂತೆ ತಾವೂ ಕೂಡ ಕಿರುಕುಳ ಎದುರಿಸಿರುವುದಾಗಿ ಹೇಳಿದ್ದಾರೆ.  ತಮ್ಮ ಜೀವನದಲ್ಲಿಯೂ ಕೂಡ ತಾವು ಓರ್ವ ಸ್ಟಾಕರ್ (ಬೆನ್ನಟ್ಟುವ ಅಥವಾ ಸದಾ ತಮ್ಮನ್ನು ಗಮನಿಸುವವ)ನನ್ನು ಧೈರ್ಯದಿಂದ ಎದುರಿಸಿರುವುದಾಗಿ ದಿಯಾ ಹೇಳಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಘಟನೆಯ ಕುರಿತು ಮಾತನಾಡಿರುವ ದಿಯಾ, "ನಾನು ಚಿಕ್ಕವಳಿದ್ದಾಗ ಮತ್ತು ನಮ್ಮ ಹೈದರಾಬಾದ್ ನ ಮನೆಯಲ್ಲಿರುವಾಗ ನಾನೂ ಕೂಡ ಓರ್ವ ಸ್ಟಾಕರ್ ನನ್ನು ಎದುರಿಸಿದ್ದೆ. ಅವರನ್ನು ಎದುರಿಸಿದ ನಾನು ಆತನ ಹೆಸರನ್ನು ಕೇಳಿದ್ದೆ. ಆ ವೇಳೆ ಆಯುವಕನ ಬಳಿ ಯಾವುದೇ ಉತ್ತರ ಇರಲಿಲ್ಲ. ಯಾರೇ ಆಗಲಿ ಇಂತಹ ವ್ಯಕ್ತಿಗಳಿಗೆ ಹೆದರಬಾರದು ಅಥವಾ ಅಂತಹ ವ್ಯಕ್ತಿಯ ಬಗ್ಗೆ ಹೇಳಲು ಹೆದರಬಾರದು. ಇದರಲ್ಲಿ ಯಾವುದೇ ನಾಚಿಕೆಪಟ್ಟುಕೊಳ್ಳುವ ಅಗತ್ಯವಿಲ್ಲ. ಇದು ನಮಗೆ ಆ ಸಮಸ್ಯೆಗೆ ಅಂತ್ಯ ಹಾಡಲು ಶಕ್ತಿ ನೀಡುತ್ತದೆ ಹಾಗೂ ಅದರಿಂದ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಇಂತಹ ಘಟನೆಗಳು ನಿಲ್ಲಬೇಕು" ಎಂದು ಹೇಳಿದ್ದಾರೆ. 



ದಿಯಾ ಹೇಳುವ ಹಾಗೆ "ರಕ್ಷಣೆ ಕೇವಲ ಕಾನೂನಿನ ವಿಷಯವಲ್ಲ . ಪಿತೃಪ್ರಧಾನ ಹಾಗೂ ಮನಸ್ಸಿನಲ್ಲಿ ಸಂಪ್ರದಾಯವಾದಿ ಚಿಂತನೆಯ ಜೊತೆಗೆ ಇದು ಸಂಬಂಧ ಹೊಂದಿದೆ.ಹಿಂಸೆಯ ಅಭಿವ್ಯಕ್ತಿ,  ದೈಹಿಕ ದುಷ್ಕೃತ್ಯಗಳ ಭಯಾನಕ ತಿರುವು ಪಡೆದುಕೊಳ್ಳಬಹುದು. ಹದಿಹರೆಯದ ಯುವಕರಲ್ಲಿ ಇಂತಹ ಹಿಂಸಾಚಾರ ಮತ್ತು ದ್ವೇಷದ ಅಪರಾಧಗಳನ್ನು ಎಸಗುವ ಪ್ರವೃತ್ತಿ ನೋಡಿ ನನಗೆ ಆಶ್ಚರ್ಯವಾಗುತ್ತದೆ. " ಎನ್ನುತ್ತಾರೆ.


ಸರ್ಕಾರೇತರ ಸಂಘಟನೆಯಾಗಿರುವ 'ಸೇವ್ ದಿ ಚಿಲ್ಡ್ರನ್' ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ದಿಯಾ ಈ ಮಾತುಗಳನ್ನು ಹೇಳಿದ್ದು, ಅವರು ಈ ಸಂಘಟನೆಯ ರಾಯಭಾರಿಯಾಗಿದ್ದಾರೆ.