ಮದುವೆಯ ಹೆಸರಲ್ಲಿ ಧೋಕಾ, ಮಗು ಹುಟ್ಟಿದ ಬಳಿಕ Kangana ಪತಿ ಮಾಡಿದ ಈ ಕೆಲಸ!
Bollywood Actress Kangana Sharma Story: ಬಾಲಿವುಡ್ ಆಗಿರಲಿ ಅಥವಾ ಟಿವಿ ಉದ್ಯಮವೇ ಆಗಿರಲಿ, ಈ ಗ್ಲಾಮರ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಾಕಷ್ಟು ಕಷ್ಟಪಡಬೇಕು. ಈ ಹೋರಾಟದಿಂದ ತೊಂದರೆಗೊಳಗಾದ ಅನೇಕ ಜನರು ಸ್ಟಾರ್ ಆಗುವ ಭರವಸೆಯನ್ನೇ ಬಿಟ್ಟುಬಿಟ್ಟಿದ್ದಾರೆ,
Bollywood Actress Kangana Sharma Story: ಬಾಲಿವುಡ್ ಆಗಿರಲಿ ಅಥವಾ ಟಿವಿ ಉದ್ಯಮವೇ ಆಗಿರಲಿ, ಈ ಗ್ಲಾಮರ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಾಕಷ್ಟು ಕಷ್ಟಪಡಬೇಕು. ಈ ಹೋರಾಟದಿಂದ ತೊಂದರೆಗೊಳಗಾದ ಅನೇಕ ಜನರು ಸ್ಟಾರ್ ಆಗುವ ಭರವಸೆಯನ್ನೇ ಬಿಟ್ಟುಬಿಟ್ಟಿದ್ದಾರೆ, ಆದರೆ ಅನೇಕ ಜನರು ತನ್ನ ಹೋರಾಟವನ್ನು ಮುಂದುವರೆಸುತ್ತಾರೆ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಅನೇಕ ಜನರ, ಈ ಹೋರಾಟದ ಕಥೆ ತುಂಬಾ ನೋವಿನಿಂದ ಕೂಡಿರುತ್ತದೆ. ನಟಿ ಕಂಗನಾ ವಿಷಯದಲ್ಲೂ ಅದೇ ಸಂಭವಿಸಿದೆ.
ಕಂಗನಾ ಜೀವನವನ್ನೇ ಹಾಳು ಮಾಡಿದ ಪತಿ
ನಟಿ ಕಂಗನಾ ಶರ್ಮಾ 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಳು. ಇದಲ್ಲದೆ, ಆಕೆ 'ಕಪಿಲ್ ಶರ್ಮಾ ಶೋ' ಮತ್ತು 'ತು ಸೂರಜ್ ಮೈ ಸಾಂಜ್ ಪಿಯಾ ರೇ' ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದಳು. ಕಂಗನಾ ಚಿತ್ರರಂಗದಲ್ಲಿ ತನ್ನ ಸ್ಥಾನವನ್ನು ಪಡೆಯಲು ಕಷ್ಟಪಡುತ್ತಿದ್ದ ದಿನಗಳಲ್ಲಿ, ತನ್ನ ಜೀವನವನ್ನೇ ಹಾಳು ಮಾಡಿದ ವ್ಯಕ್ತಿಯನ್ನು ಅವಳು ಭೇಟಿಯಾಗಿರುವುದಾಗಿ ಹೇಳುತ್ತಾಳೆ.
ಇದನ್ನೂ ಓದಿ-Abhishek Bachchan ಅಲ್ಲ, Aishwarya Rai ಗೆ ಮದುವೆಗೂ ಮುನ್ನ ಇಂಥಾ ಹುಡುಗರೆಂದರೆ ಹೆಚ್ಚು ಇಷ್ಟವಾಗುತ್ತಿದ್ದರಂತೆ!
ತನ್ನ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿರುವ ಕಂಗನಾ, ಯಾವುದೂ ಸರಿ ಇರಲಿಲ್ಲ ಎನ್ನುತ್ತಾಳೆ. 2019 ರಲ್ಲಿ ನಾನು ನನ್ನ ಜೀವನವನ್ನೇ ಹಾಳು ಮಾಡಿದ ಯೋಗೇಶ್ ವ್ಯಕ್ತಿಗೆ ಭೇಟಿಯಾದೆ ಮತ್ತು ನಂತರ ಮದುವೆ ಕೂಡ ಮಾಡಿಕೊಂಡೇ ಎನ್ನುತ್ತಾಳೆ. ವಿವಾಹದ ಎರಡೂವರೇ ತಿಂಗಳುಗಳ ಬಳಿಕ ನನಗೆ ಇಷ್ಟ ಇಲ್ಲದೆ ಇದ್ದರೂ ಕೂಡ ಕೇವಲ ಯೋಗೇಶ್ ಆಸೆಗಾಗಿ ನಾನು ಗರ್ಭಿಣಿಯಾದೆ ಮತ್ತು ಮಗುವಿಗೆ ಜನ್ಮ ನೀಡಿದೆ ಎಂದು ಕಂಗನಾ ಹೇಳುತ್ತಾಳೆ. ನನ್ನ ಮಗ ಹುಟ್ಟಿದ ಮೇಲೆ ಯೋಗೇಶ್ ತನ್ನ ತಾಯಿಯೊಂದಿಗೆ ನನ್ನನ್ನು ಭೇಟಿಯಾಗಲು ಬಂದಿದ್ದ. ಆದರೆ ಆ ನಂತರ ಕ್ರಮೇಣ ಯೋಗೇಶ್ ನನ್ನನ್ನು ಭೇಟಿಯಾಗುವುದನ್ನು ನಿಲ್ಲಿಸಿದ. ಸ್ವಲ್ಪ ಸಮಯದ ನಂತರ ಯೋಗೇಶ್ ಗೆ ಈಗಾಗಲೇ ಮದುವೆಯಾಗಿದೆ ಮತ್ತು ವಿಚ್ಛೇದನೇ ಪಡೆದಿದ್ದಾನೆ ಎಂಬ ಸಂಗತಿ ನನಗೆ ತಿಳಿಯಿತು. ಅಷ್ಟೇ ಅಲ್ಲ ಮದುವೆಯ ನಂತರವೂ ಯೋಗೇಶ್ ಹಲವು ಅಫೈರ್ ಹೊಂದಿದ್ದ ಎಂದು ಕಂಗನಾ ಹೇಳುತ್ತಾಳೆ,
ಇದನ್ನೆಲ್ಲ ಕೇಳಿ ನಾನು ಸಂಪೂರ್ಣ ಕುಸಿದು ಹೋದೆ. ನನಗೆ ಏನನ್ನೂ ನಂಬಲಾಗಲಿಲ್ಲ. ಆ ಸಮಯದಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದೆ. ಪ್ರಸ್ತುತ ನಮ್ಮ ವಿಚ್ಛೇದನ ಪ್ರಕರಣ ನಡೆಯುತ್ತಿದೆ, ಆದರೆ ಯೋಗೇಶ್ ನನಗೆ ವಿಚ್ಛೇದನ ನೀಡುತ್ತಿಲ್ಲ ಎಂದು ಹೇಳುತ್ತಾಳೆ. ಈ ಮದುವೆ ನನ್ನಿಂದ ಎಲ್ಲವನ್ನೂ ಕಿತ್ತುಕೊಂಡಿದೆ. ಮದುವೆಯ ಕಾರಣ, 2020 ರಿಂದ 2022 ರವರೆಗೆ ನನಗೆ ಕೆಲಸ ಇರಲಿಲ್ಲ. 2023 ರಲ್ಲಿ ನಾನು ಕಪಿಲ್ ಶರ್ಮಾ ಜೊತೆ ಪುನರಾಗಮನ ಮಾಡಿದೆ. ಈಗ ಭವಿಷ್ಯದಲ್ಲಿಯೂ ನಾನು ನನ್ನ ಮಗುವಿಗೆ ಉತ್ತಮವಾದದ್ದನ್ನು ಮಾಡಬೇಕಾಗಿದೆ ಎನ್ನುತ್ತಾಳೆ ಕಂಗನಾ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.