ನನಗೆ 3 ಮದುವೆ ಆಗಿದೆ.. ನನ್ನ ಮಗಳಿಗೆ 3 ಬಾಯ್ ಫ್ರೆಂಡ್ಸ್ ಇದ್ದಾರೆ..! ಖ್ಯಾತ ನಟಿ ಶಾಕಿಂಗ್ ಹೇಳಿಕೆ..
Shweta Tiwari on Palak : ಇತ್ತೀಚಿಗೆ ಬಾಲಿವುಡ್ ನಟಿ ಪಾಲಕ್ ತಿವಾರಿ ಅವರ ಹೆಸರು ಹೆಚ್ಚಾಗಿ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಹೆಚ್ಚಾಗಿ ಕೇಳಿ ಬರುತ್ತಿದೆ. ಪಾಲಕ್ ತಾಯಿ ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಸಧ್ಯ ಈ ಚರ್ಚೆಗಳ ಬಗ್ಗೆ ಮೌನ ಮುರಿದಿದ್ದಾರೆ. ಅಲ್ಲದೆ, ಪುತ್ರಿಯ ಮೇಲಾಗುತ್ತಿರುವ ಟ್ರೋಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Palak tiwari Ibrahim : ನಟಿ ಶ್ವೇತಾ ತಿವಾರಿ ಕಿರುತೆರೆಯ ಜನಪ್ರಿಯ ನಟರಲ್ಲಿ ಒಬ್ಬರು. ಶ್ವೇತಾ ಅವರ ಹಾದಿಯಲ್ಲೇ ಅವರ ಮಗಳು ಪಾಲಕ್ ತಿವಾರಿ ಕೂಡ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ಪಾಲಕ್ ಆಗಾಗ ಡೇಟಿಂಗ್ ವಿಚಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ..
ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಶ್ವೇತಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪಾಲಕ್ ಮತ್ತು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಇದೆ. ಇವರಿಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಧ್ಯ ಶ್ವೇತಾ ಈ ಲಿಂಕ್-ಅಪ್ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ..
ಇದನ್ನೂ ಓದಿ:ಆ ನಟಿ ನನ್ನನ್ನು ಕೊಲಿನಿಂದ ಹೊಡೆದು ಹಿಂಸೆಕೊಟ್ಟಳು, ನಾನು ಏನೂ ಮಾಡಿಲ್ಲ..! ನೋವು ತೋಡಿಕೊಂಡ ನಟ..
ಇನ್ನು ಮುಂದೆ ನನಗೆ ವದಂತಿಗಳು ಮುಖ್ಯವಲ್ಲ. ಏಕೆಂದರೆ ಈ ವರ್ಷಗಳಲ್ಲಿ ನಾನು ಕಲಿತ ಒಂದು ವಿಷಯವೆಂದರೆ.. ಈ ರೀತಿಯ ವಿಷಯಗಳು ಕೇವಲ ನಾಲ್ಕು ಗಂಟೆಗಳ ಕಾಲ ಮಾತ್ರ ಜನರ ತಲೆಯಲ್ಲಿ ಇರುತ್ತವೆ. ಆನಂತರ ಇಂತಹ ಸುದ್ದಿಗಳನ್ನು ಅವರು ಮರೆತುಬಿಡುತ್ತಾರೆ. ಈಗಿರುವಾಗ ನಾವು ಏಕೆ ತಲೆಕೆಡಿಸಿಕೊಳ್ಳಬೇಕು? ಅಂತ ಟ್ರೋಲ್‌ಗಳ ಬಗ್ಗೆ ನೋ ವರಿ ಅಂತ ಹೇಳಿದರು..
ಅಲ್ಲದೆ, ಇಂತಹ ವದಂತಿಗಳ ಪ್ರಕಾರ, ನನ್ನ ಮಗಳು ಈಗಾಗಲೇ 3 ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ.. ನಾನು ಪ್ರತಿ ವರ್ಷ ಮದುವೆಯಾಗುತ್ತಿದ್ದೇನೆ. ಕೆಲವು ಮಾಧ್ಯಮಗಳ ಪ್ರಕಾರ.. ನಾನು ಈಗಾಗಲೇ 3 ಬಾರಿ ಮದುವೆಯಾಗಿದ್ದೇನೆ... ಹಾಗಾಗಿ ಇಂತಹ ಸುದ್ದಿಗಳು ನನಗೆ ಮುಖ್ಯವಲ್ಲ ಎಂದರು..
ಇದನ್ನೂ ಓದಿ:ಶರಣ್-ಚಿಕ್ಕಣ್ಣ "ಛೂ ಮಂತರ್" ಟ್ರೇಲರ್ ರಿಲೀಸ್..! ತುಂಬಾ ಭಯಾನಕವಾಗಿದೆ ಗುರು..
ಅಲ್ಲದೆ, ಕೆಲವೊಮ್ಮೆ ನಾನು ಭಯಪಡುತ್ತೇನೆ. ನನ್ನ ಮಗಳು ಎಂದಿಗೂ ಹೆಚ್ಚಾಗಿ ಸಾರ್ವಜನಿಕವಾಗಿ ಮಾತನಾಡಲು ಇಷ್ಟ ಪಡುವುದಿಲ್ಲ. ಟ್ರೋಲಿಂಗ್ ಯುಗ ತುಂಬಾ ಕೆಟ್ಟದಾಗಿದೆ. ಅವಳು ಬಲಶಾಲಿಯಾಗಿದ್ದರೂ, ಕೆಲವೊಮ್ಮೆ ಅವಳ ಮೇಲೆ ಏನು ಪರಿಣಾಮ ಬೀರಬಹುದು, ಅವಳ ಆತ್ಮವಿಶ್ವಾಸಕ್ಕೆ ಏನಾಗುತ್ತದೆ ಎಂದು ನಾನು ಹೆದರುತ್ತೇನೆ ಎಂದರು ನಟಿ ಶ್ವೇತಾ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.