Sunny Leone : ನಟಿ ಸನ್ನಿ ಲಿಯೋನ್, ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಬೆರಗುಗೊಳಿಸುವ ಸೌಂದರ್ಯ, ಅದ್ಭುತ ಫ್ಯಾಷನ್ ಸೆನ್ಸ್‌ ಹಾಗೂ ಮಾನವೀಯತೆ ಗುಣದಿಂದ ಇಂದು ಅನೇಕ ಮಹಿಳೆಯರಿಗೆ ಪರಿಪೂರ್ಣ ಮಾದರಿಯಾಗಿದ್ದಾರೆ. ಲಿಯೋನ್‌ಗೆ ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಅಪಾರ ಅಭಿಮಾನಿಗಳಿದ್ದಾರೆ.


COMMERCIAL BREAK
SCROLL TO CONTINUE READING

ಬಿಗ್ ಬಾಸ್‌ನ ಐದನೇ ಸೀಸನ್‌ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸುವ ಮೂಲಕ ಮೊದಲ ಬಾರಿಗೆ ಭಾರತೀಯ ಕಿರುತೆರೆ ಪ್ರವೇಶ ಮಾಡಿದರು. ನಂತರ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗಮನ ಸೆಳೆದರು. ಸನ್ನಿ ಲಿಯೋನ್ ಇಂದು ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ.


ಇದನ್ನೂ ಓದಿ: Heroines Remunerations: ಒಂದು ಕೋಟಿ ಸಂಭಾವನೆ ಪಡೆದ ಮೊದಲ ನಟಿ ಯಾರು ಗೊತ್ತಾ?


ಸನ್ನಿ ಡೇನಿಯಲ್ ವೆಬರ್ ಎಂಬುವರನ್ನು ವಿವಾಹವಾಗಿದ್ದಾರೆ. ಇವರಿಗೆ ನಿಶಾ ಮತ್ತು ಅವಳಿಗಳಾದ ಆಶರ್ ಹಾಗೂ ನೋಹ್ ಎಂಬ ಹೆಸರಿನ ಮೂರು ದತ್ತು ಮಕ್ಕಳಿದ್ದಾರೆ. ಸನ್ನಿ ಲಿಯೋನ್ ಸರ್ನಿಯಾದಲ್ಲಿ (ಒಂಟಾರಿಯೊ, ಕೆನಡಾ) ಸಿಖ್ ಕುಟುಂಬದಲ್ಲಿ ಜನಿಸಿದರು. ಈಕೆಯ ಮೊದಲ ಹೆಸರು ಕರೆಂಜಿತ್ ಕೌರ್ ವೋಹ್ರಾ. 


ವಯಸ್ಕರ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು, ನಟಿ ಜರ್ಮನ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಳು. ಆ ಸಮಯದಲ್ಲಿ ಆಕೆಗೆ 15 ವರ್ಷ. ನಂತರದ ದಿನಗಳಲ್ಲಿ ವಯಸ್ಕರ-ಮನರಂಜನಾ ಸಿನಿಮಾಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆಗ ಸನ್ನಿ ಲಿಯೋನ್‌ ಎಂಬ ಹೆಸರಿನಿಂದ ಗುರುತಿಸಿಕೊಂಡರು. ʼಜಿಸ್ಮ್ 2ʼ ಸಿನಿಮಾದ ಮೂಲಕ ಸನ್ನಿ ಬಾಲಿವುಡ್‌ ಸಿನಿರಂಗವನ್ನು ಪ್ರವೇಶ ಮಾಡಿದಳು. 


ಇದನ್ನೂ ಓದಿ: angana Ranaut: ರಣಬೀರ್ ಕಪೂರ್ ಗೆ ವುಮನೈಸಿಂಗ್, ಡ್ರಗ್ ಅಡಿಕ್ಟ್ ಟ್ಯಾಗ್ ಕೊಟ್ಟ ಕಂಗನಾ ರಣಾವತ್!


ಶಾಲಾ ಸಮಯದಲ್ಲಿ ಸನ್ನಿ ಲಿಯೋನ್‌ ತನ್ನ ಸ್ನೇಹಿತರಿಂದ ಹಿಂಸೆಗೆ ಒಳಗಾಗಿದ್ದರು. ಅವಳ ಕೂದಲುಳ್ಳ ಕಾಲುಗಳು ಮತ್ತು ದಡ್ಡತನ ಅವಳನ್ನು ಅಪಹಾಸ್ಯಕ್ಕೊಳಗಾಗುವಂತೆ ಮಾಡಿತ್ತು. ಆಕೆಯ ನೋಟದಿಂದಾಗಿ ಸಹಪಾಠಿಗಳು ಅವಳನ್ನು ಚುಡಾಯಿಸುತ್ತಿದ್ದರು. ಆದ್ರೆ, ಇಂದು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಸನ್ನಿ ಸೌಂದರ್ಯದ ಗಣಿಯಂತಿದ್ದಾಳೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.