Heroines Remunerations: ಒಂದು ಕೋಟಿ ಸಂಭಾವನೆ ಪಡೆದ ಮೊದಲ ನಟಿ ಯಾರು ಗೊತ್ತಾ?

Heroines Remunerations: ಭಾರತದಲ್ಲಿ ಮೊಟ್ಟಮೊದಲ ಬಾರಿಗೆ 1 ಕೋಟಿ ರೂಪಾಯಿ ಸಂಭಾವನೆ ಪಡೆದ ಹೀರೋ ಅಮಿತಾಬ್ ಬಚ್ಚನ್ ಅಲ್ಲ..ಶಾರುಖ್ ಖಾನ್ ಅಲ್ಲ..ಸಲ್ಮಾನ್ ಖಾನ್ ಅಲ್ಲ..ರಜನಿಕಾಂತ್ ಅಲ್ಲ.. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಎಂದು ಇತ್ತೀಚೆಗೆ ಹೇಳಿದ್ದು ಗೊತ್ತೇ ಇದೆ. ಅದೇ ರೀತಿ ನಟಿಯರಲ್ಲಿ ಮೊಟ್ಟ ಮೊದಲು 1 ಕೋಟಿ ಸಂಭಾವನೆ ಪಡೆದವರು ಯಾರು ಗೊತ್ತಾ? 

Written by - Chetana Devarmani | Last Updated : Jun 11, 2023, 09:32 AM IST
  • ಮೊದಲ ಬಾರಿಗೆ 1 ಕೋಟಿ ರೂಪಾಯಿ ಸಂಭಾವನೆ ಪಡೆದ ಹೀರೋ ಚಿರಂಜೀವಿ
  • ನಟಿಯರಲ್ಲಿ ಮೊದಲ ಬಾರಿಗೆ 1 ಕೋಟಿ ಸಂಭಾವನೆ ಪಡೆದವರು ಯಾರು ಗೊತ್ತಾ?
  • 1 ಕೋಟಿ ಸಂಭಾವನೆ ಪಡೆದ ಮೊದಲ ನಟಿಯ ಬಗ್ಗೆ ಕುತೂಹಲದ ಚರ್ಚೆ ನಡೆಯುತ್ತಿದೆ
Heroines Remunerations: ಒಂದು ಕೋಟಿ ಸಂಭಾವನೆ ಪಡೆದ ಮೊದಲ ನಟಿ ಯಾರು ಗೊತ್ತಾ?  title=

Heroines Remunerations: ಭಾರತದಲ್ಲಿ ಮೊಟ್ಟಮೊದಲ ಬಾರಿಗೆ 1 ಕೋಟಿ ರೂಪಾಯಿ ಸಂಭಾವನೆ ಪಡೆದ ಹೀರೋ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಆ ನಮ್ಮ ಭಾರತದಲ್ಲಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ನಾಯಕಿ ಯಾರು ಎಂಬ ಕುತೂಹಲದ ಚರ್ಚೆ ಈಗ ನಡೆಯುತ್ತಿದೆ. ರೇಖಾ, ಮಾಧುರಿ ದೀಕ್ಷಿತ್, ಕರೀನಾ ಕಪೂರ್ ಖಾನ್, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಆಲಿಯಾ ಭಟ್ ಅತ್ಯಂತ ಜನಪ್ರಿಯ ನಾಯಕಿಯರು. ಆದರೆ ಮೊದಲ ಸಲ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಖ್ಯಾತಿ ಇವರದ್ದಲ್ಲ.

ಈ ಎಲ್ಲಾ ನಾಯಕಿಯರೂ ಒಂದು ಹಂತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದವರೇ. ಆದರೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಮೊಟ್ಟ ಮೊದಲ ನಟಿ ಎಂಬ ಬಿರುದು ಮುಡಿಗೇರಿಸಿಕೊಂಡವರು ನಟಿ ಶ್ರೀದೇವಿ. ಬಾಲಿವುಡ್ ಜೊತೆಗೆ ತೆಲುಗು, ತಮಿಳು, ಮಲಯಾಳಂ, ಕನ್ನಡ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ ಬೆಡಗಿ ಶ್ರೀದೇವಿ ಕೋಟಿಗಟ್ಟಲೆ ಬೇಡಿಕೆ ಇಟ್ಟ ಮೊದಲ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೀರೋಗಳಿಗೆ ಸರಿಸಮಾನವಾಗಿ ಸಂಭಾವನೆ ಕೇಳಿದರೂ ನಿರ್ಮಾಪಕರು ಆಕೆಯ ಕ್ರೇಜ್‌ಗೆ ಫಿದಾ ಆಗಿ ಆ ಸಂಭಾವನೆ ನೀಡಿದ್ದಾರೆ.

ಇದನ್ನೂ ಓದಿ:  ಲೈಕಾ ಪ್ರೊಡಕ್ಷನ್ ನಡಿ ರಜನಿಕಾಂತ್ 170ನೇ ಸಿನಿಮಾ.. 32 ವರ್ಷ ಬಳಿಕ ಮತ್ತೆ ಒಂದಾದ ತಲೈವಾ-ಬಿಗ್ ಬಿ

1963ರ ಆಗಸ್ಟ್ 13 ರಂದು ತಮಿಳುನಾಡಿನ ಮೀನಂಪಟ್ಟಿ ಗ್ರಾಮದಲ್ಲಿ ಶ್ರೀದೇವಿ ಜನಿಸಿದರು. 4 ವರ್ಷ ವಯಸ್ಸಿನಲ್ಲೇ ಬಾಲನಟಿಯಾಗಿ ವೃತ್ತಿ ಜೀವನ ಆರಂಭಿಸಿದರು. ಬಾಲನಟಿಯಾಗಿ ಮಿಂಚಿದ ಈ ಬೆಡಗಿ ಬಳಿಕ ನಾಯಕಿಯಾಗಿಯೂ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಎಲ್ಲಾ ಭಾಷೆಗಳಲ್ಲಿ ಬಹುತೇಕ ಎಲ್ಲಾ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ. ಅಗ್ರ ನಾಯಕಿಯಾಗಿ ಭಾರತೀಯ ಚಿತ್ರರಂಗವನ್ನು ಆಳಿದ ನಟಿಯರ ಸಾಲಿಗೆ ಸೇರುವರು ಶ್ರೀದೇವಿ.

ಶ್ರೀದೇವಿ 1976 ರ ತಮಿಳು ಚಲನಚಿತ್ರ ಮೂಂಡ್ರು ಮುಡಿಚುನ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಅದರ ನಂತರ ಅವರು ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದರು. ಶ್ರೀದೇವಿ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು ಮತ್ತು ವರದಿಗಳ ಪ್ರಕಾರ, ಶ್ರೀದೇವಿ ತಮ್ಮ ಚಿತ್ರಕ್ಕಾಗಿ ಒಂದು ಕೋಟಿ ರೂಪಾಯಿಗಳನ್ನು ಗಳಿಸಿದ ಮೊದಲ ಬಾಲಿವುಡ್ ನಟಿ.

1983 ರಲ್ಲಿ ತೆರೆಕಂಡ ಶ್ರೀದೇವಿ ಅಭಿನಯದ ಹಿಮ್ಮತ್‌ವಾಲಾ ಚಿತ್ರವು ಬಾಲಿವುಡ್ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯಿತು. ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾ ಮಾಡಿದರೂ ಶ್ರೀದೇವಿಗೆ ಹೇಳಿಕೊಳ್ಳುವ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಹಿಮ್ಮತ್‌ವಾಲಾ ಚಿತ್ರದ ಯಶಸ್ಸಿನ ನಂತರ ಶ್ರೀದೇವಿ ಹಿಂತಿರುಗಿ ನೋಡಲೇ ಇಲ್ಲ.

ಇದನ್ನೂ ಓದಿ: ನಿರ್ಮಾಪಕ ನೀಡ್ತಿದ್ದ ಚಿತ್ರಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಈ ನಟಿ!!

ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ಅವರು ಶ್ರೀದೇವಿ ಜೊತೆ ನಟಿಸಿದರೆ ಯಾರೂ ಗುರುತಿಸುವುದಿಲ್ಲ ಎಂದು ಶ್ರೀದೇವಿ ಬಗ್ಗೆ ಹೇಳಿದ್ದರು. ಹಾಗಾಗಿಯೇ ಆಕೆಯ ಜೊತೆ ಸಿನಿಮಾ ಮಾಡಲು ಭಯವಾಗುತ್ತಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದು ಅಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಹೀರೋಗಳಿಗೂ ಅಭದ್ರತೆಯ ಭಾವನೆ ಮೂಡಿಸುವ ದೊಡ್ಡ ಇಮೇಜ್ ಅನ್ನು ಶ್ರೀದೇವಿಯವರು ಹೊಂದಿದ್ದರು. 

iframe allow="accelerometer; autoplay; encrypted-media; gyroscope; picture-in-picture" allowfullscreen="" frameborder="0" height="350" src= https://zeenews.india.com/kannada/live-tv/embed?autoplay=1&mute=0 width="100%">

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News