Urvashi Rautela: ಸಿನಿಮಾಗಳಲ್ಲಿ ಐಟಂ ಸಾಂಗ್ ಗಳಿಗೆ ವಿಶೇಷ ಕ್ರೇಜ್ ಇರುತ್ತದೆ.. ಒಂದೇ ಹಾಡಿನಲ್ಲಿ ಬ್ಯೂಟಿ ಕ್ವೀನ್ ಗಳಿಗೆ ಕೋಟಿ ಕೋಟಿ ಖರ್ಚು ಮಾಡುತ್ತಾರೆ. ಜನಪ್ರಿಯ ಸಿನಿಮಾಗಳಲ್ಲಿ ಟಾಪ್ ಹೀರೋಯಿನ್ ಗಳು ಕೂಡ ಐಟಂ ಸಾಂಗ್ ಆಡಿರುವ ಉದಾಹರಣೆಗಳಿವೆ. ಈಗ ಐಟಂ ಸಾಂಗ್ ಎಂದಾಕ್ಷಣ ಎಲ್ಲರಿಗೂ ನೆನಪಾಗುವ ಹೆಸರು ಊರ್ವಶಿ ರೌಟೇಲಾ. ಈ ಬಾಲಿವುಡ್ ಗ್ಲಾಮರಸ್ ನಟಿ ಮೂರು ನಿಮಿಷದ ಹಾಡಿಗೆ 3 ಕೋಟಿ ಚಾರ್ಜ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ...


COMMERCIAL BREAK
SCROLL TO CONTINUE READING

ಈ ಹಿಂದೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಮತ್ತು ಏಜೆಂಟ್ ಚಿತ್ರದಲ್ಲಿ ಐಟಂ ಸಾಂಗ್‌ಗಳನ್ನು ಮಾಡಿ ಉತ್ತಮ ಮನ್ನಣೆ ಗಳಿಸಿದ್ದರು. ಇತ್ತೀಚಿಗೆ ರಾಮ್ ಪೋತಿನೇನಿ ಸಿನಿಮಾ ಸ್ಕಂಧದಲ್ಲಿ ಕಲ್ಟ್ ಮಾಮಾ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಐಟಂ ಸಾಂಗ್‌ಗಾಗಿ ಊರ್ವಶಿ ರೌಟೇಲಾ ರು.3 ಕೋಟಿ ಕೇಳಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತವೆ. ಅಂದರೆ ನಿಮಿಷಕ್ಕೆ ರೂ.1 ಕೋಟಿ ಈ ನಟಿಯ ಸಂಭಾವನೆ.. ಇಷ್ಟೆ ಅಲ್ಲ.. ಒಂದು ನಿಮಿಷದ ಅಭಿನಯಕ್ಕಾಗಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೊಸ ದಾಖಲೆಯನ್ನು ಈಕೆ ಸೃಷ್ಟಿಸಿದ್ದಾಳೆ.. 


ಇದನ್ನೂ ಓದಿ-BBK10 Finalist: ಫಿನಾಲೆಗೆ ವರ್ತೂರು ಸಂತೋಷ್ ಗ್ರ್ಯಾಂಡ್‌ ಎಂಟ್ರಿ.. ಹಾಗಾದ್ರೆ ಹೊರ ಹೋದವರು ಯಾರು?


ಹಿಂದೆಂದೂ ಇಷ್ಟೊಂದು ಬೇಡಿಕೆ ಬಂದಿರಲಿಲ್ಲ, ಬೇರೆ ಯಾವ ನಟಿಯೂ ತೆರೆಯ ಮೇಲೆ ನಿಮಿಷಕ್ಕೆ ಒಂದು ಕೋಟಿ ರೂಪಾಯಿ ತೆಗೆದುಕೊಂಡಿಲ್ಲ.. ಈ ಹಿಂದೆ ವಾಲ್ತೇರು ವೀರಯ್ಯ ಚಿತ್ರದ ಐಟಂ ಸಾಂಗ್‌ಗಾಗಿ ಊರ್ವಶಿ ರೌಟೇಲಾ ರು.2 ಕೋಟಿ ಕಲೆಕ್ಷನ್ ಮಾಡಿದ್ದಾರೆ ಎಂಬ ವರದಿಗಳು ಬಂದಿದ್ದವು.


ಊರ್ವಶಿ ರೌಟೇಲಾ ಅವರು 2013 ರಲ್ಲಿ 'ಸಿಂಗ್ ಸಾಬ್ ದಿ ಗ್ರೇಟ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್ ಎದುರು ನಟಿಸಿದ್ದರು. ಆಗ ಆಕೆಗೆ 19 ವರ್ಷ. ಬರೋಬ್ಬರಿ 42 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಮೂಲ ಗಳಿಕೆಯ್ನೂ ಸಹ ಮಾಡಲಿಲ್ಲ...


ಇದನ್ನೂ ಓದಿ-BBK 10: ಕಾರ್ತಿಕ್, ಸಂಗೀತ, ವಿನಯ್.. ಇವರೆಲ್ಲರಿಗಿಂತ ಸಖತ್ ಮನರಂಜನೆ ಕೊಟ್ಟ ಈ ಸ್ಪರ್ಧಿ ಬಿಗ್ ಬಾಸ್ ವಿನ್ನರ್!! ಫಿನಾಲೆಗೂ ಮುನ್ನ ಕಿಚ್ಚನೇ ಕೊಟ್ರು ಸುಳಿವು


ಇದಾದ ನಂತರ ಊರ್ವಶಿ ರೌಟೇಲಾ ಅವರ ವೃತ್ತಿಜೀವನವು ಅವರ ಕೈ ಹಿಡಿಯಲಿಲ್ಲ.. ಅವರು ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಆದರೆ ಒಂದೇ ಒಂದು ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲ. ಮೂರು ವರ್ಷಗಳ ನಂತರ 2016ರಲ್ಲಿ ‘ಸನಮ್ ರೇ’ ಸಿನಿಮಾದಲ್ಲಿ ನಟಿಸಿದ್ದರು. ಇದು ಸಹ ಫ್ಲಾಪ್ ಸಿನಿಮಾ.. 


ಇನ್ನು ಊರ್ವಶಿ ಅವರ ವೈಯಕ್ತಿಕ ಜೀವನವೂ ಚರ್ಚೆಯ ವಿಷಯವಾಗಿದೆ, ವಿಶೇಷವಾಗಿ ಕ್ರಿಕೆಟಿಗ ರಿಷಬ್ ಪಂತ್ ಅವರೊಂದಿಗಿನ ಸಂಬಂಧದ ವದಂತಿಗಳಿದ್ದವು.. ಅಲ್ಲದೇ ಆಕೆಯೇ ಪಂತ್ ತನ್ನ ಬಗ್ಗೆ ಆಸಕ್ತಿ ಹೊಂದಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು... ಇದಕ್ಕೆ ರಿಷಬ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.