ನವದೆಹಲಿ: ಬಾಲಿವುಡ್ ತಾರೆ ಕಂಗನಾ ರನೌತ್ ಅವರು ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ತಮ್ಮ ಮುಂಬರುವ ಚಿತ್ರ `ತೇಜಸ್`ಗಾಗಿ ಆಶೀರ್ವಾದ ಕೋರಿದ್ದಾರೆ.


COMMERCIAL BREAK
SCROLL TO CONTINUE READING

ತೇಜಸ್ ಚಿತ್ರ ತಂಡವು ರಕ್ಷಣಾ ಸಚಿವರನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಕೋರಿದ್ದಲ್ಲದೆ ಭಾರತೀಯ ವಾಯುಪಡೆಯೊಂದಿಗೆ ಚಿತ್ರಕಥೆಯನ್ನು ಹಂಚಿಕೊಂಡಿದ್ದಲ್ಲದೆ ಹಲವು ಅನುಮತಿಯನ್ನು ಪಡೆದುಕೊಳ್ಳಲಾಯಿತು ಎಂದು ನಟಿ ಕಂಗನಾ ರನೌತ್ ಟ್ವೀಟ್ ಮಾಡಿದ್ದಾರೆ.ಅವರು ಟ್ವೀಟ್ನೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಸಹೋದರಿ ರಂಗೋಲಿ ಚಾಂಡೆಲ್ ಸೇರಿದಂತೆ ತಂಡದ ಸದಸ್ಯರೊಂದಿಗೆ ರಕ್ಷಣಾ ಸಚಿವರಿಗೆ ಹೂವು ಗುಚ್ಛವನ್ನು ನೀಡುತ್ತಿರುವುದನ್ನು ಕಾಣಬಹುದಾಗಿದೆ.


ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾದ ನಟಿ ಕಂಗನಾ ರನೌತ್



ರನೌತ್ ತನ್ನ ಮುಂದಿನ ಪ್ರಾಜೆಕ್ಟ್ ತೇಜಸ್`ನಲ್ಲಿ ಐಎಎಫ್ ಪೈಲಟ್ ಪಾತ್ರವನ್ನು ಚಿತ್ರಿಸಲಿದ್ದಾರೆ. 2016 ರಲ್ಲಿ ಮಹಿಳೆಯರನ್ನು ಯುದ್ಧ ಪಾತ್ರಗಳಲ್ಲಿ ಸೇರಿಸಿಕೊಂಡ ದೇಶದ ಸಶಸ್ತ್ರ ಪಡೆಗಳಲ್ಲಿ ಐಎಎಫ್ ಮೊದಲನೆಯದು. ಈ ಘಟನೆಯಿಂದ ಈ ಚಿತ್ರ ಸ್ಫೂರ್ತಿ ಪಡೆದಿದೆ.ಸರ್ವೇಶ್ ಮೇವಾರಾ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದರೆ, ರೋನಿ ಸ್ಕ್ರೂವಾಲಾ ಅವರು ಚಿತ್ರದ ನಿರ್ಮಾಪಕರಾಗಿದ್ದಾರೆ. ಈ ಚಿತ್ರವು ಏಪ್ರಿಲ್ 2021 ರಲ್ಲಿ ಬಿಡುಗಡೆಯಾಗಲಿದೆ.