ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಮತ್ತು ತಮ್ಮ ಮುಂಬೈ ಕಚೇರಿ ಉರುಳಿಸುವಿಕೆಯ ವಿಚಾರವಾಗಿ ಕಂಗನಾ ರನೌತ್ ಇಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿಯಾಗಿದ್ದಾರೆ.ಇದೇ ವೇಳೆ ಅವರ ಸಹೋದರಿ ರಂಗೋಲಿ ಕೂಡ ಉಪಸ್ಥಿತರಿದ್ದರು.
'ನನಗಾದ ಅನ್ಯಾಯದ ಬಗ್ಗೆ ನಾನು ಅವರಿಗೆಗೆ ಹೇಳಿದ್ದೇನೆ. ವ್ಯವಸ್ಥೆಯಲ್ಲಿ ಯುವತಿಯರು ಸೇರಿದಂತೆ ಎಲ್ಲಾ ನಾಗರಿಕರ ನಂಬಿಕೆಯನ್ನು ಪುನಃಸ್ಥಾಪಿಸಲು ನನಗೆ ನ್ಯಾಯ ದೊರಕುತ್ತದೆ ಎಂದು ನಾನು ಭಾವಿಸುತ್ತೇನೆ.ರಾಜ್ಯಪಾಲರು ತಮ್ಮ ಸ್ವಂತ ಮಗಳ ಮಾತುಗಳು ಕೇಳುವ ರೀತಿಯಲ್ಲಿ ಕೇಳುತ್ತಿದ್ದರು' ಎಂದು ಕಂಗನಾ ಸಭೆಯ ನಂತರ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದರು.
A short while ago I met His Excellency the Governor of Maharashtra Shri Bhagat Singh Koshyari Ji. I explained my point of view to him and also requested that justice be given to me it will restore faith of common citizen and particularly daughters in the system. pic.twitter.com/oCNByhvNOT
— Kangana Ranaut (@KanganaTeam) September 13, 2020
ಇನ್ನೊಂಡೆಗೆ ಮಹಾರಾಷ್ಟ್ರ ರಾಜ್ಯಪಾಲರು ಸಿಎಂ ಸಲಹೆಗಾರರನ್ನು ಭೇಟಿ ಮಾಡಿ ಮುಂಬೈ ಬಿಎಂಸಿ ಕ್ರಮದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ.
ಕಳೆದ ವಾರ ಅವರು ಬಾಂಬೆ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ ನಂತರ ಮುಂಬೈನ ಐಷಾರಾಮಿ ಪಾಲಿ ಹಿಲ್ಸ್ ನೆರೆಹೊರೆಯ ರನೌತ್ ಅವರ ಕಚೇರಿಯನ್ನು ನೆಲಸಮ ಮಾಡುವುದನ್ನು ನಿಲ್ಲಿಸಲಾಯಿತು.ಆಕೆಗೆ ಸಿಕ್ಕ ದೊಡ್ಡ ಗೆಲುವು ಎಂದು ಪರಿಗಣಿಸಲಾಗಿದ್ದ ನ್ಯಾಯಾಲಯವು ಪ್ರಕರಣವನ್ನು ಸೆಪ್ಟೆಂಬರ್ 22 ರವರೆಗೆ ಮುಂದೂಡಿದೆ.
ಹೈಕೋರ್ಟ್ ಆದೇಶದ ಹಿಂದಿನ ದಿನ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ಕಂಗನಾ ರನೌತ್ ಅವರ ಕಚೇರಿಯನ್ನು ನೆಲಸಮ ಮಾಡಲು ಪ್ರಾರಂಭಿಸಿದ್ದರು.