ಡಾ. ಸುಧಾಕರ್ ಪರ ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಭರ್ಜರಿ ಪ್ರಚಾರ..!
ಮತದಾನದ ದಿನಾಂಕ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಮುಖ ಪಕ್ಷಗಳು ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿವೆ. ಇದೀಗ ಗಡಿ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಡಾ. ಕೆ ಸುಧಾಕರ್ ಅವರ ಪರ ತೆಲುಗು ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರು ಭರ್ಜರಿ ಪ್ರಚಾರ ನಡೆಸಿದರು.
ಚಿಕ್ಕಬಳ್ಳಾಪುರ : ರಾಜ್ಯ ರಾಜಕೀಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಮತದಾನ ದಿನಾಂಕ ಹತ್ತಿರ ಬರುತ್ತಿದ್ದಂತೆ ಮೂರು ಪಕ್ಷದ ಅಭ್ಯರ್ಥಿಗಳು ಸ್ಟಾರ್ ಪ್ರಚಾರಕ ಮೊರೆ ಹೋಗಿದ್ದಾರೆ. ಇದೀಗ ಗಡಿ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್ ಅವರ ಪರ ತೆಲುಗು ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರು ಭರ್ಜರಿ ಪ್ರಚಾರ ನಡೆಸಿದರು. ನಟನನ್ನು ನೋಡಲು ಜನ ಅಪಾರ ಸಂಖ್ಯೆಯಲ್ಲಿ ಸೇರಿತ್ತು.
ಹೌದು.. ಈಗಾಗಲೇ ಎಲ್ಲಾ ಪ್ರಮುಖ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ. ಎಲ್ಲ ಪ್ರಮುಖ ಪಕ್ಷಗಳೂ ಸಿನಿಮಾ ನಟರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ. ನಟ ಸುದೀಪ್ ಈಗಾಗಲೇ ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಶಿವರಾಜ ಕುಮಾರ್, ರಮ್ಯಾ ಸೇರಿದಂತೆ ಹಲವು ನಟ ನಟಿಯರು ಕಾಂಗ್ರೆಸ್ ಪರ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಇದೀಗ ತೆಲುಗು ರಾಜ್ಯಗಳ ಪ್ರಚಾರ ಕಾರ್ಯದಲ್ಲಿ ಇಂದೂ ಕಾಣಿಸಿಕೊಳ್ಳದ ನಟ ಬ್ರಹ್ಮಾನಂದಂ ಅವರು ಸುಧಾಕರ್ ಪರ ಪ್ರಚಾರ ಕೈಗೊಂಡಿದ್ದು, ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Jailer : ಶಿವಣ್ಣ - ರಜಿನಿ ಫ್ಯಾನ್ಸ್‌ಗೆ ಗುಡ್ ನ್ಯೂಸ್..! ʼಜೈಲರ್ʼ ರಿಲೀಸ್‌ಗೆ ಡೇಟ್ ಫಿಕ್ಸ್
ಕರ್ನಾಟಕದ ತೆಲುಗು ರಾಜ್ಯಗಳ ಗಡಿ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸುಧಾಕರ್ ಅವರು ಅಖಾಡಕ್ಕೆ ಇಳಿದಿದ್ದಾರೆ. ಅವರನ್ನು ಬೆಂಬಲಿಸಿ ಬ್ರಹ್ಮಾನಂದಂ ಚಿಕ್ಕಬಳ್ಳಾಪುರಕ್ಕೆ ಬಂದು ಪ್ರಚಾರ ನಡೆಸಿದರು. ಡಾ.ಸುಧಾಕರ್ ಅವರನ್ನು ಗೆಲ್ಲಿಸುವಂತೆ ಮತಯಾಚನೆ ಮಾಡಿದರು. ತೆಲುಗಿನಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿರುವ ಸುಧಾಕರ್ ಅವರನ್ನು ಗೆಲ್ಲಿಸುವಂತೆ ಕೋರಿದರು. ಒಳಿತನ್ನು, ಸೇವೆಯನ್ನು ಕಂಡ ನಮ್ಮಂತಹ ಎಲ್ಲರೂ ಬಂದು ಅವರನ್ನು ಬೆಂಬಲಿಸಿ, ಅವರ ಗೆಲುವಿಗೆ ಸಹಕರಿಸಿ, ಮತ ನೀಡಿ ಗೆಲ್ಲಿಸಲು ಸಹಕರಿಸಿ ಎಂದು ಜನರಲ್ಲಿ ವಿನಂತಿಸಿದರು.
ತಮ್ಮದೇ ಹಾಸ್ಯ ಮಾತಿನ ದಾಟಿಯ ಮೂಲಕ ಬ್ರಹ್ಮಾನಂದಂ ಚುನಾವಣೆ ಪ್ರಚಾರ ಆರಂಭಿಸಿದರು. ಇಂದು ಮುಂಜಾನೆಯೇ ಪ್ರಚಾರ ಆರಂಭಿಸಿರುವ ಬ್ರಹ್ಮಾನಂದಂ ರಾತ್ರಿ 10ರವರೆಗೆ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದಾರೆ. ಬ್ರಹ್ಮಾನಂದರನ್ನು ನೋಡಿದ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಇನ್ನು ತೆಲುಗು ರಾಜ್ಯಗಳಲ್ಲಿ ಯಾವುದೇ ಪಕ್ಷದ ಪರ ಅಥವಾ ವ್ಯಕ್ತಿಯ ಪರ ಪ್ರಚಾರ ಮಾಡದ ಬ್ರಹ್ಮಾನಂದಂ ಈಗ ಕರ್ನಾಟಕಕ್ಕೆ ತೆರಳಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದು ತೆಲುಗು ರಾಜ್ಯಗಳಲ್ಲಿ ಹಾಟ್ ಟಾಪಿಕ್ ಆಗಿದೆ.
ಇದನ್ನೂ ಓದಿ: DBoss : ನಮ್ಮನ್ನ ಕೆಆರ್‌ಎಸ್‌ಗೆ ತಳ್ಳಿ ನನ್ನ ತಾಯಿ ಸಾಯಲು ನಿರ್ಧರಿಸಿದ್ದರು..! ಆಗ..
ಆದರೆ ಬ್ರಹ್ಮಾನಂದಂ ಅವರು 2019ರಲ್ಲೂ ಡಾ.ಸುಧಾಕರ್ ಪರ ಪ್ರಚಾರ ಮಾತಿ ಮತಯಾಚನೆ ಮಾಡಿದ್ದರು. 2019ರ ಚುನಾವಣೆಗೂ ಮುನ್ನವೇ ತೆಲುಗು ರಾಜ್ಯಗಳಲ್ಲಿ ಬ್ರಹ್ಮಾನಂದಂ ಬಿಜೆಪಿ ಸೇರಬಹುದು ಎಂಬ ದೊಡ್ಡ ಪ್ರಚಾರ ನಡೆದಿತ್ತು. ತೆಲುಗು ರಾಜ್ಯಗಳಲ್ಲಿ ಬಿಜೆಪಿ ಬಲವರ್ಧನೆ ಯತ್ನ ನಡೆಸುತ್ತಿರುವ ಹಿನ್ನಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ತಾರೆಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತಿದೆ ಎಂಬ ಪ್ರಚಾರವೂ ನಡೆದಿತ್ತು. ಆದರೆ ವಾಸ್ತವವಾಗಿ ಯಾವುದೂ ನಿಜವಾಗಿರಲಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.