Jailer : ಶಿವಣ್ಣ - ರಜಿನಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌..! ʼಜೈಲರ್‌ʼ ರಿಲೀಸ್‌ಗೆ ಡೇಟ್‌ ಫಿಕ್ಸ್‌

Jailer release date : ಬಹುನಿರೀಕ್ಷಿತ ʼಜೈಲರ್‌ʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಸೂಪರ್‌ ಸ್ಟಾರ್‌ ರಜನಿಕಾಂತ್‌ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶ ಇಬ್ಬರು ಅಭಿಮಾನಿಗಳಿಗೆ ಲಭಿಸಿದೆ. 

Written by - Krishna N K | Last Updated : May 4, 2023, 07:13 PM IST
  • ಬಹುನಿರೀಕ್ಷಿತ ʼಜೈಲರ್‌ʼ ಸಿನಿಮಾ ರಿಲೀಸ್‌ಗೆ ಡೇಟ್‌ ಫಿಕ್ಸ್‌.
  • ರಜಿನಿಕಾಂತ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಜೈಲರ್‌ ಚಿತ್ರ.
  • ಈ ಚಿತ್ರದಲ್ಲಿ ಡಾ. ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Jailer : ಶಿವಣ್ಣ - ರಜಿನಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌..! ʼಜೈಲರ್‌ʼ ರಿಲೀಸ್‌ಗೆ ಡೇಟ್‌ ಫಿಕ್ಸ್‌ title=

Jailer Movie : ಸೂಪರ್‌ ಸ್ಟಾರ್‌ ರಜನಿಕಾಂತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನೆಲ್ಸನ್ ನಿರ್ದೇಶನದ ಜೈಲರ್ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ. ಚಿತ್ರವು ಆಗಸ್ಟ್ 10 ರಂದು ಥಿಯೇಟರ್‌ಗೆ ಬರಲಿದೆ ಎಂದು ತಿಳಿಸಲಾಗಿದೆ. ಈ ಕುರಿತು ಚಿತ್ರತಂಡ 48 ಸೆಕೆಂಡುಗಳ ಸುದೀರ್ಘ ಟೀಸರ್ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ರಜನಿಕಾಂತ್, ಶಿವರಾಜ್‌ಕುಮಾರ್‌, ಮೋಹನ್ ಲಾಲ್, ತಮನ್ನಾ ಮತ್ತು ಇತರ ಅನೇಕ ತಾರೆಯರು ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು.. ಈ ಚಿತ್ರದಲ್ಲಿ ಡಾ. ಶಿವರಾಜ್‌ಕುಮಾರ್‌ ನಟಿಸುತ್ತಿದ್ದಾರೆ ಎಂಬ ಸುದ್ದಿ ಕನ್ನಡಿಗರಿಗೆ ಬಹಳ ಖುಷಿ ನೀಡಿತ್ತು. ಅಲ್ಲದೆ, ಶಿವಣ್ಣ ಮೊದಲ ಬಾರಿಗೆ ಅನ್ಯ ಭಾಷೆಯಲ್ಲಿ ನಟಿಸುತ್ತಿರುವುದು ವಿಶೇಷವಾಗಿತ್ತು. ಅದರಲ್ಲಿ ಸೂಪರ್‌ ಸ್ಟಾರ್‌ ರಜಿನಿ ಜೊತೆ ಅಂದ್ರೆ ಹೇಳ್ಬೇಕಾ.. ಅಲ್ಲದೆ, ಬಹು ತಾರಾಗಣ ಹೊಂದಿರುವ ಈ ಸಿನಿಮಾ ಪೋಸ್ಟರ್‌ ಮೂಲಕವೇ ನಿರೀಕ್ಷೆ ಹುಟ್ಟಿಸಿತ್ತು. ಇದೀಗ ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ಚಿತ್ರತದಂದ ಟೀಸರ್‌ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

 

ಇದನ್ನೂ ಓದಿ: DBoss : ನಮ್ಮನ್ನ ಕೆಆರ್‌ಎಸ್‌ಗೆ ತಳ್ಳಿ ನನ್ನ ತಾಯಿ ಸಾಯಲು ನಿರ್ಧರಿಸಿದ್ದರು..! ಆಗ.. 

ಶಿವಣ್ಣ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದಾಗ ಕನ್ನಡಿಗರಿಗೆ ಸಖತ್‌ ಖುಷಿ ಉಂಟಾಗಿತ್ತು. ಅದು ಅಲ್ಲದೆ, ಸೂಪರ್‌ಸ್ಟಾರ್ ಜೊತೆ ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಒಟ್ಟಿಗೆ ನೋಡುವ ಅದೃಷ್ಟ ಶಿವರಾಜ್‌ಕುಮಾರ್‌ ಪ್ಯಾನ್ಸ್‌ಗೆ ಲಭಸಿದೆ. ಅಲ್ಲದೆ, ಈ ಚಿತ್ರದಲ್ಲಿ ಶಿವಣ್ಣ ಜೊತೆಗೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಜೈಲರ್‌ ಚಿತ್ರಕ್ಕೆ ನೆಲ್ಸನ್ ಅವರೇ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪಡಯಪ್ಪ ಚಿತ್ರದ ನಂತರ ʼಜೈಲರ್ʼ ಮೂಲಕ ರಜನಿಕಾಂತ್ ಮತ್ತು ರಮ್ಯಾ ಮತ್ತೆ ಒಂದಾಗಿರುವುದು ಮತ್ತೊಂದು ವಿಶೇಷ. ಜೈಲರ್ ರಜನಿಕಾಂತ್ ಅವರ 169ನೇ ಚಿತ್ರ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರದ ಸಂಗೀತ ನಿರ್ದೇಶಕರು. ಚಿತ್ರಕ್ಕೆ ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News