ಬೆಂಗಳೂರು : ಹಣ ವರ್ಗಾವಣೆ ವಿಚಾರ ಕುರಿತಂತೆ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ನಿನ್ನೆಯಷ್ಟೇ ಮಾಧ್ಯಮಗಳ ಎದುರು ಬಂದು  ಹಣ ವರ್ಗಾವಣೆ ಕುರಿತಂತೆ ಸ್ಪಷ್ಟೀಕರಣ ನೀಡಿದ್ದರು. 


COMMERCIAL BREAK
SCROLL TO CONTINUE READING

ತಮ್ಮ ಖಾತೆಗೆ ಹಣವರ್ಗಾವಣೆ ಕುರಿತಂತೆ ನಟಿ  ರಾಧಿಕಾ ಕುಮಾರಸ್ವಾಮಿಗೆ (Radhika Kumaraswamy) ಸಿಸಿಬಿ ನೊಟೀಸ್ ಜಾರಿ ಮಾಡಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ  ನೊಟೀಸ್ ನಲ್ಲಿ ಸೂಚಿಸಲಾಗಿದೆ.  ರಾಧಿಕಾ ಕುಮಾರ ಸ್ವಾಮಿ ಬ್ಯಾಂಕ್ ಖಾತೆಗೆ ಸುಮಾರು  1.25 ಕೋಟಿಯಷ್ಟು ಹಣವರ್ಗಾವಣೆಯಾಗಿದೆ ಎಂಬ  ಆರೋಪದ ಮೇಲೆ ರಾಧಿಕಾಗೆ ಸಿಸಿಬಿ  (CCB) ನೊಟೀಸ್  ಜಾರಿ ಮಾಡಲಾಗಿದೆ. 


ಇದನ್ನೂ ಓದಿ : ಮಗಳು ಶಮಿಕಾ ಜೊತೆ ರಾಧಿಕಾ ಕುಮಾರಸ್ವಾಮಿ!
 
ಉದ್ಯಮಿಗಳಿಗೆ ವಂಚಿಸಿರುವ ಆರೋಪದ ಮೇಲೆ  ಯುವರಾಜ್ (Yuvaraj) ಎಂಬಾತನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಲೆ ಯುವರಾಜ್, ರಾಧಿಕಾ ಕುಮಾರಸ್ವಾಮಿ ಮತ್ತು ಅವರ ಸಹೋದರ ರವಿರಾಜ್ (Raviraj) ಬ್ಯಾಂಕ್ ಖಾತೆಗೆ 1.25 ಕೋಟಿಯಷ್ಟು ಹಣ ವರ್ಗಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.


ಈ ಬಗ್ಗೆ ನಿನ್ನೆ ಸುದ್ದಿಗೋಷ್ಟಿ ನಡೆಸಿದ್ದ ರಾಧಿಕಾ ಸ್ಪಷ್ಟನೆ ನೀಡಿದ್ದರು.  ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದರು. ಬಂಧಿತ ಯುವರಾಜ್ ತಮ್ಮ ಕುಟುಂಬಕ್ಕೆ 17 ವರ್ಷದಿಂದ ಪರಿಚಿತ ಎಂದು ಹೇಳಿದ್ದರು. ಅಲ್ಲದೆ ಚಿತ್ರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ತಮ್ಮ  ಖಾತೆಗೆ 15 ಲಕ್ಷ ರೂ ವರ್ಗಾಯಿಸಿದ್ದರು. ಅಲ್ಲದೆ, ನಿರ್ಮಾಪಕರೊಬ್ಬರಿಂದ (Producer) 60ಲಕ್ಷರೂಗಳನ್ನು ವರ್ಗಾಯಿಸಿದ್ದರು. ಈ  ವ್ಯವಹಾರ ನಡೆದಿರುವುದು ಸಿನೆಮಾ (Cinema) ನಿರ್ಮಾಣಕ್ಕೆ  ಸಂಬಂಧಪಟ್ಟಂತೆ. ಇದು ಬಿಟ್ಟು ಬೇರೆ ಯಾವ ವ್ಯವಹಾರವೂ ಯುವರಾಜ್ ಜೊತೆ ನಡೆಸಿಲ್ಲ ಎಂದು ರಾಧಿಕಾ ಸ್ಪಷ್ಟಪಡಿಸಿದ್ದರು.


ರಾಧಿಕಾ ಕುಮಾರಸ್ವಾಮಿ, ಸಹೋದರ ರವಿರಾಜ್ ಈಗಾಗಲೇ  ಸಿಸಿಬಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.