ಬೆಂಗಳೂರು: ಬಾಲನಟನಾಗಿ ಗುರುತಿಸಿಕೊಂಡಿದ್ದ, ಚೆಲುವಿನ ಚಿತ್ತಾರ ಖ್ಯಾತಿಯ ರಾಕೇಶ್ ಸೋಮವಾರ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ರಾಕೇಶ್ ಅವರು ನಟಿ ಆಶಾರಾಣಿ ಮತ್ತು ನಾಗೇಶ್ ದಂಪತಿಯ ಎರಡನೇ ಪುತ್ರ. 


COMMERCIAL BREAK
SCROLL TO CONTINUE READING

ಕಳೆದ ಎರಡು ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ, ಅಲ್ಲದೆ ಆಗಾಗ ಮೂಗಲ್ಲಿ, ಕಣ್ಣಲ್ಲಿ ರಕ್ತ ಬರುತ್ತಿತ್ತು. ರಾಕೇಶ್ ಅವರು ಎರಡು ತಿಂಗಳ ಹಿಂದೆಯಷ್ಟೇ ಚಿಕಿತ್ಸೆಗಾಗಿ ತೆರಳಿದ್ದರು ಆಗಲೇ ಅವರಿಗೆ ಮಾರಕ ಕಾಯಿಲೆಯಿಂದ ಬಳಲುತ್ತಿದ್ದಾರೆಂದು ತಿಳಿಯಿತು. ರಾಕೇಶ್ ಇವೋನ್ ಸಿಂಡ್ರೋಮ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. 


ರಾಕೇಶ್ ಹೊಟ್ಟೆಯಲ್ಲಿ ಕಾಣಿಸಿಕೊಂಡ ಈ ಕಾಯಿಲೆ ಆತನ ದೇಹದಲ್ಲಿದ್ದ ವೈಟ್ ಪೆಟಲ್ಸ್ ಗಳನ್ನು ನಾಶ ಮಾದುತ್ತಿತ್ತಂತೆ, ಹಂತ ಹಂತವಾಗಿ ದೊಡ್ಡದಾದ ಕಾಯಿಲೆ ಈಗ ರಾಕೇಶ್ ನನ್ನೇ ಬಲಿತೆಗೆದುಕೊಂಡಿದೆ. ಇದಲ್ಲದೆ ಗ್ಯಾಂಗ್ ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ರಾಕೇಶ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ತಿಂಗಳಲ್ಲಿ ಏಳು ಬಾರಿ ಶಸ್ತ್ರ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ 07:15 ರ ಸಮಯದಲ್ಲಿ ಸಾವನ್ನಪ್ಪಿದ್ದಾರೆ.


ತಾಯಿ ಆಶಾರಾಣಿ ಮೊದಲಿನಿಂದಲೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರಿಂದ ರಾಕೇಶ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದ... 2007ರಲ್ಲಿ ತೆರೆಕಂಡ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟರಾಗಿ ಅಭಿನಯಿಸಿದ್ದ ಚೆಲುವಿನ ಚಿತ್ತಾರ ಚಿತ್ರದಲ್ಲಿ ತನ್ನದೇ ಆದ ನಟನೆ ಬಾಲ ನಟನೆಯ ಮೂಲಕ ಪಾದಾರ್ಪಣೆ ಮಾಡಿದ. 'ಬುಲ್ಲಿ ಪಪ್ಪುಸಿ' ಎಂದೇ ಖ್ಯಾತಿ ಪಡೆದಿದ್ದ ಅದ್ಭುತ ನಟ ರಾಕೇಶ್.


 ರಾಕೇಶ್ ಅನೇಕ ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದ.. ಗೋಲ್ಡನ್ ಸ್ಟಾರ್ ಗಣೇಶ್ - (ಚೆಲಿವಿನ ಚಿತ್ತಾರ), ಶಿವಣ್ಣ (ಭಜರಂಗಿ, ಬಂಧು - ಬಳಗ), ಪುನೀತ್ (ಹುಡುಗರು), ದರ್ಶನ್ (ಅರ್ಜುನ್, ಅಭಯ್, ಬಾಸ್), ಯಶ್ (ಮೊದಲಾ ಸಲ), ದುನಿಯಾ ವಿಜಯ್ - (ಚಂಡ, ಅವ್ವ, ಜಾನಿ ಮೇರಾ ನಾಮ್), ಅಜಯ್ ರಾವ್ (ಅಕ್ಕ - ತಂಗಿ , ಪ್ರೇಮ್ ಕಹಾನಿ , ಕೃಷ್ಣನ್ ಲವ್ ಸ್ಟೋರಿ , ಜಿಂಕೆ ಮರಿ , ದೂದ್ ಸಾಗರ್) ಮುಂತಾದ 45 ಸಿನೆಮಾಗಳಿಗೂ ಹೆಚ್ಚು ಸಿನೆಮಾಗಳಲ್ಲಿ ಮೃತ ಬಾಲನಟ ರಾಕೇಶ್ ಅಭಿನಯಿಸಿದ್ದಾರೆ.


ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ಅವಕಾಶ ಪಡೆದಿದ್ದ ರಾಕೇಶ್ "ಧೂಮಪಾನ" ಚಿತ್ರದಲ್ಲಿ ನಾಯಕನಟನಾಗಿ ಅವಕಾಶ ಪಡೆದಿದ್ದರು.  ಚಿತ್ರದ ಮುಹೂರ್ತ ಕೂಡ ಮುಗಿದಿತ್ತು. ಈ ರೀತಿ ನಟನೆಯಲ್ಲಿ ತನ್ನದೇ ಆದ ಛಾಪು ಮೂಡಿದಿಕೊಂಡು ಬೆಳೆಯುತ್ತಿದ್ದ ರಾಕೇಶ್ ಇಂದು ನಮ್ಮೊಂದಿಗಿಲ್ಲ. 
ಚಿತ್ರರಂಗದಲ್ಲಿ ನಾಯಕನಟನಾಗಿ ಬೆಳೆಯುವ ಕನಸುಕಂಡಿದ್ದ ರಾಕೇಶ್ ನ ಕನಸು ನನಸಾಗುವ ಮುನ್ನವೇ ಸಾವನ್ನಪ್ಪಿದ್ದು ದುರ್ದೈವದ ಸಂಗತಿ.