Chetan Ahimsa on Pathaan : ಬಾಲಿವುಡ್‌ ನಟ ಶಾರುಖ್‌ ಖಾನ್‌ ನಟನೆಯ ಪಠಾಣ್‌ ಚಿತ್ರದ ಬೇಷರಂ ರಂಗ್‌ ಸಾಂಗ್‌ ವಿವಾದಕ್ಕೆ ಕಾರಣವಾಗಿದ್ದು ಎಲ್ಲರಿಗೂ ತಿಳಿದ ವಿಚಾರ. ಇದೀಗ ದಿಪೀಕಾ ಕೇಸರಿ ಬಿಕಿನಿ ವಿಚಾರವಾಗಿ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಅವರು ಪ್ರತಿಕ್ರಿಯೇ ನೀಡುವ ಮೂಲಕ ಪಠಾಣ್‌ ಪರ ಬ್ಯಾಟ್‌ ಬೀಸಿದ್ದಾರೆ. ಅಲ್ಲದೆ, ಕೇಸರಿ ಹಿಂದುತ್ವದ ಬಣ್ಣ ಅಲ್ಲದೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ನೇರ ಮಾತುಗಳಿಂದ ವಿವಾದಗಳಿಗೆ ಚೇತನ್‌ ಅಹಿಂಸಾ ಗುರಿಯಾಗುತ್ತಿದ್ದಾರೆ. ಕಾಂತಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿ ಟ್ರೋಲ್‌ಗೆ ಒಳಲಾಗಿದ್ದರು. ಇದೀಗ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ದೀಪಿಕಾ ಕೇಸರಿ ಬಿಕಿನಿ ಬಗ್ಗೆ ಮಾತನಾಡಿದ್ದಾರೆ. ಬಟ್ಟೆ ವಿಚಾರದಲ್ಲಿ ವಿವಾದ ಸೃಷ್ಟಿಸುವುದು ಹಾಸ್ಯಾಸ್ಪದ. ಕೇಸರಿ ಬಣ್ಣ ಒಂದು ಸಿದ್ದಾಂತಕ್ಕೆ ಸಿಮೀತವಾಗಿಲ್ಲ, ಅದು ಹಿಂದುತ್ವದ ಬಣ್ಣವೂ ಅಲ್ಲ ಎಂದಿದ್ದಾರೆ.


ಇದನ್ನೂ ಓದಿ: ಶೂಟಿಂಗ್‌ ವೇಳೆ ಭಾರೀ ಅಪಘಾತ : ತಮಿಳು ನಟ ವಿಜಯ್‌ ಸ್ಥಿತಿ ಗಂಭೀರ..!


ಅಲ್ಲದೆ, ಕೇಸರಿ ತ್ಯಾಗದ ಸಂಕೇತವಾಗಿದೆ. ಬುದ್ಧ, ಬಸವಣ್ಣ ಸೇರಿದಂತೆ ಬಹಳಷ್ಟು ಮಹನೀಯರು ಕೇಸರಿ ಬಟ್ಟೆಯನ್ನು ಧರಿಸುತ್ತಿದ್ದರು. ಇಂತಹ ಬಣ್ಣವನ್ನು ಯಾವುದೇ ಕಾರಣಕ್ಕೂ ಒಂದು ಸಿದ್ದಾಂತಕ್ಕೆ ಸೀಮಿತವಾಗಬಾರು. ಕೇಸರಿ ಬಣ್ಣವನ್ನು ಹೈಜಾಕ್ ಮಾಡುವುದು ಸರಿಯಲ್ಲ. ನಮ್ಮ ದೇಶದ ತ್ರಿವರ್ಣ ಧ್ವಜದಲ್ಲೂ ಕೇಸರಿ ಬಣ್ಣ ಇದೆ. ಹೀಗಾಗಿ ಇದು ಹಿಂದುತ್ವದ ಬಣ್ಣ ಆಗಲಾರದು ಎಂದರು.


ಮಾತು ಮುಂದುವರೆಸಿದ ಚೇತನ್‌, ಹಸಿರು ಬಣ್ಣ ಕೂಡ ಯಾವುದೇ ಧರ್ಮದ ಬಣ್ಣವಲ್ಲ, ಬದಲಿಗೆ ಅದು ರೈತರು ಮತ್ತು ಪರಿಸರದ ಸಂಕೇತ. ಪಠಾಣ್​​ ಸಿನಿಮಾದ ಕೇಸರಿ ಬಿಕಿನಿ ವಿರುದ್ಧ ಹೋರಾಟ ಸರಿಯಲ್ಲ. ಎಲ್ಲದರಲ್ಲೂ ತಪ್ಪು ಹುಡುಕುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರ ಎಂದರು ಚೇತನ್​​ ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.