ಸತ್ಯ ಕಥೆ ಆಧರಿಸಿದ ʼಕ್ರಿಸ್ಟಿʼ ಸಿನಿಮಾ ಟ್ರೈಲರ್
Christy trailer: ಮಳಿಯಾಲಂನ ಕ್ರಿಸ್ಟಿ ಸಿನಿಮಾವು ಸತ್ಯ ಘಟನೆಗಳನ್ನು ಆಧರಿಸಿದ ಕಥೆಯಾಗಿದೆ. ಬಿಡುಗಡೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
Christy trailer: ಮಳಿಯಾಲಂನ ಕ್ರಿಸ್ಟಿ ಸಿನಿಮಾವು ಸತ್ಯ ಘಟನೆಗಳನ್ನು ಆಧರಿಸಿದ ಕಥೆಯಾಗಿದೆ. ಬಿಡುಗಡೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಆಲ್ವಿನ್ ಹೆನ್ರಿ ನಿರ್ದೇಶನದ ಈ ಸಿನಿಮಾದಲ್ಲಿ ಮ್ಯಾಥ್ಯೂ ಥಾಮಸ್ ಮತ್ತು ಮಾಳವಿಕಾ ಮೋಹನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಟೀಸರ್ ಜೊತೆಗೆ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಫೆಬ್ರವರಿ 17 ರಂದು ಚಿತ್ರ ದೊಡ್ಡ ಪರದೆಯ ಮೇಲೆ ಮೂಡಲಿದೆ. ಬೆಂಜಮಿನ್ ಮತ್ತು ಜಿಆರ್ ಇಂದು ಗೋಪನ್ ಅವರು ಸ್ವಂತ ಕಥೆಯನ್ನು ಚಿತ್ರಕಥೆ ಯಾಗಿ ಮಾಡಿದ್ದಾರೆ.ಕ್ರಿಸ್ಟಿಯ ಕಥೆಯು ತನಗಿಂತ ಹಿರಿಯ ಮಹಿಳೆಯನ್ನು ಪ್ರೀತಿಸುವ ಯುವಕನ ಕಥೆಯಾಗಿದೆ.ಜಾಯ್ ಮ್ಯಾಥ್ಯೂ, ವಿನೀತ್ ವಿಶ್ವಂ, ರಾಜೇಶ್ ಮಾಧವನ್, ಮುತ್ತುಮಣಿ, ಜಯ ಎಸ್. ಕುರುಪ್, ವೀಣಾ ನಾಯರ್, ಸ್ಮಿನು ಸಿಜೋ ಮತ್ತು ಮಂಜು ಪಾತ್ರೋಸ್ ಚಿತ್ರದ ಇತರ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಕುತೂಹಲ ಹೊತ್ತ ‘ಮೇರಿ’ ಟ್ರೇಲರ್ ರಿಲೀಸ್ : ಫೆಬ್ರವರಿ 24ಕ್ಕೆ ತೆರೆಗೆ ಬರಲಿದೆ ಸಿನಿಮಾ
ರಾಕಿ ಮೌಂಟೇನ್ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ಸಜಯ್ ಸೆಬಾಸ್ಟಿಯನ್ ಮತ್ತು ಕಣ್ಣನ್ ಸತೀಶನ್ ನಿರ್ಮಿಸಿರುವ ಚಿತ್ರವು ರೋಮ್ಯಾಂಟಿಕ್ ಫೀಲ್-ಗುಡ್ ಚಿತ್ರ ಎಂಬುದು ಟ್ರೇಲರ್‌ನಿಂದ ಸ್ಪಷ್ಟವಾಗಿದೆ. ಮಾಲ್ಡೀವ್ಸ್ ಮತ್ತು ತಿರುವನಂತಪುರಂನ ಪೂವರ್ ಸುತ್ತಾ ಮುತ್ತಲಿನ ಪ್ರದೇಶಗಳನ್ನು ಸಿನಿಮಾಕ್ಕಾಗಿ ಬಳಸಲಾಗಿದೆ. ಮಾಲ್ಡೀವ್ಸ್ ಮತ್ತು ತಿರುವನಂತಪುರಂನ ಪೂವರ್ ಮುಖ್ಯ ಸ್ಥಳಗಳಾಗಿವೆ.ಮನು ಆಂಟೋನಿ ಅವರ ಛಾಯಾಗ್ರಹಣ. ವಿನಾಯಕ್ ಶಶಿಕುಮಾರ್ ಮತ್ತು ಅನ್ವರ್ ಅಲಿ ಅವರ ಸಾಹಿತ್ಯದೊಂದಿಗೆ ಗೋವಿಂದ್ ವಸಂತ ಸಂಗೀತ ಸಂಯೋಜಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.