ಸಿದ್ದಗಂಗಾ ಶ್ರೀಗಳು (Siddaganga Swamiji) ಮಾಡಿದ ಸಾಮಾಜಿಕ ಕೆಲಸಗಳು ಚಿರ ಸ್ಮರಣೀಯವಾಗಿವೆ. ಅವರ ಕುರಿತು ಮಿನಿ ಸಿನಿ ಸೀರಿಸ್ (Mini Series) ಸಿದ್ಧವಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Sarojini Naidu ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸೋನಾಲ್ ಮಾಂಟೆರೊ ಹಾಗೂ ಶಾಂತಿಪ್ರಿಯ


ಈ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್ (Amitab Bacchan) ಅವರು ನಟಿಸಬೇಕು ಎಂಬುದು ಚಿತ್ರತಂಡದ ಆಶಯ. ಈ ಕಾರಣಕ್ಕೆ ಅವರ ಕಾಲ್​ಶೀಟ್​ಅನ್ನು ಕೇಳಲಾಗಿದೆ ಎಂದು ಹೇಲಲಾಗ್ತಿದೆ. ಈ ಮೊದಲು ‘ಅಮೃತಧಾರೆ’ (Amrutadhare) ಸಿನಿಮಾದಲ್ಲಿ ಅಮಿತಾಬ್‌​ ಅತಿಥಿ ಪಾತ್ರ ಮಾಡಿದ್ದರು. ಇದಾದ ಬಳಿಕ ಅವರು ಕನ್ನಡಕ್ಕೆ ಮರಳಿಲ್ಲ. ಅದೊಂದು ವೇಳೆ ಅಮಿತಾಬ್‌ ಈ ಸಿನಿಮಾ ಒಪ್ಪಿಕೊಂಡರೆ ಅವರು ಪೂರ್ಣ ಪ್ರಮಾಣದಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದಂತೆ ಆಗಲಿದೆ.


ಸಿದ್ದಗಂಗಾ ಶ್ರೀಗಳ ಜೀವನ ಚರಿತ್ರೆಯ ಈ ಸಿನಿ ಸಿರೀಸ್‌ ಡಾ.ಹಂಸಲೇಖ ಅವರ ಸಾರಥ್ಯದಲ್ಲಿ ಮೂಡಿಬರಲಿದೆ. ಒಟ್ಟು 52 ಎಪಿಸೋಡ್​​ಗಳನ್ನು ಒಳಗೊಂಡ ಮಿನಿ ಸಿರೀಸ್​​ಗಳನ್ನು  (Cine Series) ಮಾಡಲಾಗುತ್ತಿದೆಯಂತೆ. ದೊಡ್ಡ ಮೊತ್ತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್​ ಹಾಗೂ ಸಂಸ್ಕೃತ  ಭಾಷೆಗಳಲ್ಲಿ ಈ ಸೀರಿಸ್ ಸಿದ್ಧವಾಗುತ್ತಿದೆ. ಏಳಕ್ಕೂ ಹೆಚ್ಚು ತಂಡಗಳಲ್ಲಿ, 300 ಅಧಿಕ ತಂತ್ರಜ್ಞರು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ:KGF Chapter 2: ಕೆಜಿಎಫ್‌2 ಸಿನಿಮಾಗೆ ಯಶ್‌ ಪಡೆದ ಸಂಭಾವನೆ ಎಷ್ಟು ಗೊತ್ತಾ?


ಸಿದ್ಧಗಂಗಾ ಶ್ರೀಗಳ ಜೀವನದ ಕತೆ ಹೇಳುವ ಈ ಸಿನಿ ಸೀರೀಸ್‌ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Sha) ಅವರ ಏಪ್ರಿಲ್ 1ರಂದು ತುಮಕೂರಿನ  ಸಿದ್ದಗಂಗಾ ಮಠದಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಂಸಲೇಖ ಅವರ ಸಾರಥ್ಯದಲ್ಲಿ 115 ಜನ ಗಾಯಕರು 6 ಹಾಡುಗಳನ್ನ ಹಾಡಲಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಡಾ. ಸೋಮಶೇಖರ್, ಎ.ಪಿ ರೇಣುಕಾಚಾರ್ಯ, ನಿರ್ಮಾಪಕ ಎಮ್.ರುದ್ರೇಶ್, ದೀಪಕ್, ಸದಾ ಶಿವಯ್ಯ ಸಹ ಭಾಗಿಯಾಗಲಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.