ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್‌ ಎಂದರೆ ಕನ್ನಡಿಗರಿಗೆ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನದೇ ಆದ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಡಾ. ರವಿಚಂದ್ರನ್‌ 1968ರಲ್ಲಿ 'ಧೂಮಕೇತು' ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು.  


COMMERCIAL BREAK
SCROLL TO CONTINUE READING

ಅವರು ಬಾಲಕನಾಗಿ ನಟಿಸಿದ್ದು ಅಷ್ಟಾಗಿ ನೆನಪಿನಲ್ಲಿ ಉಳಿಯದೇ ಇರಬಹುದು. ಆದರೆ  ಕಥೆಯ ನಾಯಕನಾಗಿ ನಟಿಸಿರುವುದು ಮಾತ್ರ ಮತ್ತೆ ಸ್ಯಾಂಡಲ್ವುಡ್‌ನಲ್ಲಿ ಯಾರು ರೀ ಕ್ರೀಯೆಟ್‌ ಮಾಡೊಕೆ ಸಾಧ್ಯನೇ ಇಲ್ಲ. ಶೃಂಗಾರಸವನ್ನು ವಿಭಿನ್ನವಾಗಿ ತೋರಿಸಿದವರಲ್ಲಿ ಇವರೇ ಮೊದಲಿಗರು. 


ಇದನ್ನೂ ಓದಿ: Ragini Dwivedis: ರಾಗಿಣಿ ಹೊಸ ಫೋಟೋಶೂಟ್, ಯಾರವ್ವ ಇವಳು ಚೆಲುವೆ ಚೆಲುವೆ ನನ್ನಾ ಕಣ್ಣೇ ಬಿತ್ತು ಎಂದ ಫ್ಯಾನ್ಸ್!


ಆ ಯುಗದಲ್ಲಿ ಸಹ ಪ್ರೀತಿ ಪ್ರೇಮ ಕಥೆಗಳು ಜೋರೆ ನಡೆಯುತ್ತಿತ್ತು. ಆದರೆ ಎಲ್ಲೂ ಸಹ ಬೆಳಕಿಗೆ ಬರುತ್ತಿರಲಿಲ್ಲ. ತಮಗೆ ಹೇಗೆ ಸರಿ ಎನಿಸುತ್ತದೋ ಹಾಗೆ ಪ್ರೀತಿ ವ್ಯಕ್ತ ಪಡಿಸುತ್ತಿದ್ದರು. ಆದರೆ ಕ್ರೇಜಿಸ್ಟಾರ್‌ ಸಿನಿಮಾ ಬಂದ ಬಳಿಕ ಅದೆನು ಆಯಿತೋ ಗೊತ್ತಿಲ್ಲ ಪ್ರೀತಿ ಪ್ರೇಮ ಪುರಾಣಗಳು ಜೋರಾಗಿಯೇ ಸದ್ದು ಮಾಡಲು ಆರಂಭವಾದವು.


ಅವರ ಯಾವುದೇ ಸಿನಿಮಾದಲ್ಲಿ  ಗುಲಾಬಿ, ಗಿಟರ್‌, ನಟಿಯರು ಇಲ್ಲದಿರಲು ಸಾಧ್ಯವೇ ಇಲ್ಲ. ರವಿ ಚಂದ್ರನ್‌ ಎಂದರೆ ಪಡ್ಡೆಹುಡುಗರಿಗೆ ಮಾತ್ರವಲ್ಲದೇ , ವಯಸ್ಸದವರಿಗೆ, ವೃದ್ದರಿಗೂ ಪ್ರೀತಿಯೇ ಅಷ್ಟರ ಮಟ್ಟಿಗೆ ಎಲ್ಲರ ಮನದಲ್ಲಿ ಅಚ್ಚುಳಿದಿದ್ದಾರೆ. 


ಇದನ್ನೂ ಓದಿ: Ambareesh Birth Anniversary: ಮಾತು ಒರಟು-ಮನಸು ಮೃದು: ರೆಬಲ್ ಸ್ಟಾರ್ ಅಂಬಿ ಗುಣಗಳಿವು...!


ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಆಣ್ಣಯ್ಯ, ಗಡಿಬಿಡಿ ಗಂಡ, ರಸಿಕ, ಕಲಾವಿದ, ಸಿಪಾಯಿ, ಪುಟ್ನಂಜ, ಕನಸುಗಾರ, ಮಾಂಗಲ್ಯಂ ತಂತುನಾನೇನ, ಪ್ರೀತ್ಸೋದ್ ತಪ್ಪಾ, ಯಾರೇ ನೀನು ಚೆಲುವೆ, ನಾನು ನನ್ನ ಹೆಂಡ್ತೀರು, ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ರಾಮಕೃಷ್ಣ, ಕೋದಂಡರಾಮ, ಅಹಂ ಪ್ರೇಮಾಸ್ಮಿ, ಸಾಹುಕಾರ, ಹಠವಾದಿ, ಹೂ, ಅಪೂರ್ವ, ಹೀಗೆ ಅನೇಕ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಪ್ರೀತಿ ಪ್ರೇಮದ ರಸದೌತನ ಬಡಿಸಿದ್ದಾರೆ.


ಆದರೆ ಕೆಲವು ವರ್ಷಗಳಿಂದ ಈ ರೀತಿಯ ಸಿನಿಮಾಗಳು ಬರುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ಯಾವುದೇ ಸೋಷಿಯಲ್‌ ಮೀಡಿಯಾ ಓಪನ್‌ ಮಾಡಿದರೂ ಅಲ್ಲೊಂದು  ರವಿ ಮಾಮನ ಸಾಂಗ್‌ ಬಂದಾಗ , ಈಗಲೂ ಇದೇ ರೀತಿ ಸಿನಿಮಾ, ಹಾಗೂ ರೋಮ್ಯಾಂಟ್‌ ಸಾಂಗ್‌ ಕೊಡಿ ಎನ್ನುವುದೊಂದೇ   ರವಿಚಂದ್ರನ್‌ ಅಭಿಮಾನಿಗಳ ಕೋರಿಕೆಯಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ