Shobitha Shivanna: ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿಟ್ಲರ್ ಕಲ್ಯಾಣ ನಟಿ ಮಿಲ್ಕಿ ಬ್ಯೂಟಿ!

Shobitha Shivanna Wedding: ಇತ್ತೀಚೇಗೆ ಸ್ಯಾಂಡಲ್ವುಡ್‌ ತಾರೆಯರು ಸಾಲು ಸಾಲಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದೇ ಸಾಲಿನಲ್ಲಿ ಇದೀಗ ಬ್ರಹ್ಮಗಂಟು' ನಟಿ ಸೇರಿದ್ದಾರೆ. ಇದೀಗ ನಟಿ ಶೋಭಿತಾ ಶಿವಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

Written by - Zee Kannada News Desk | Last Updated : May 28, 2023, 12:41 PM IST
  • ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿಟ್ಲರ್ ಕಲ್ಯಾಣ ನಟಿ ಶೋಭಿತ ಶಿವಣ್ಣ
  • ಸಾಲು ಸಾಲಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸ್ಯಾಂಡಲ್ವುಡ್‌ ತಾರೆಯರು
  • ಶೋಭಿತ ಶಿವಣ್ಣ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲೂ ಮಿಂಚುತ್ತಿರುವ ನಟಿ
Shobitha Shivanna: ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿಟ್ಲರ್ ಕಲ್ಯಾಣ ನಟಿ ಮಿಲ್ಕಿ ಬ್ಯೂಟಿ! title=

ಬೆಂಗಳೂರು: ಇತ್ತೀಚೇಗೆ ಸ್ಯಾಂಡಲ್ವುಡ್‌ ತಾರೆಯರು ಸಾಲು ಸಾಲಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದೇ ಸಾಲಿನಲ್ಲಿ ಇದೀಗ ಬ್ರಹ್ಮಗಂಟು' ನಟಿ ಸೇರಿದ್ದಾರೆ. ಇದೀಗ ನಟಿ ಶೋಭಿತಾ ಶಿವಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಬ್ರಹ್ಮಗಂಟು ಧಾರವಾಹಿಯಲ್ಲಿ ಪಿಂಕಿ ಎಂಬ ವಿಲನ್‌ ಪಾತ್ರಧಾರಿಯಾಗಿ ಕನ್ನಡಿಗರ ಮನಗೆದ್ದಿದ್ದರು.ಬ್ರಹ್ಮಗಂಟು ನಟಿ ಶೋಭಿತಾ ಶಿವಣ್ಣ ಮೂಲತಃ ಸಕಲೇಶಪುರದವರು. ತಮ್ಮ ನಟನೆಯಿಂದಲೇ ಮನ ಗೆದ್ದಿರುವ ನಟಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸದ್ಯ ವಿವಾಹದ ಪೋಟೊಗಳಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ವರನ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ.

ಇದನ್ನೂ ಓದಿ: 'Asura' 2 : ʼಅಸುರʼ 2 ಅಬ್ಬರ ಇನ್ನು ಮುಂದೆ ಡಿಜಿಟಲ್ ವೇದಿಕೆಯಲ್ಲಿ!

ಇನ್ನು ಇವರ ಮದುವೆಗೆ ನಟಿ ಶೋಭಿತಾ ಮದುವೆಗೆ ಪ್ರಿಯಾಂಕಾ ಚಿಂಚೋಳಿ, ಸ್ವಾತಿ, ನಟಿ ವೀಣಾ ರಾವ್, ದಮಯಂತಿ ನಾಗರಾಜ್ ಸೇರಿದಂತೆ ಹಲವರು ಭಾಗಿಯಾಗಿ ನವ ದಂಪತಿಗಳಿಗೆ ಶುಭ ಕೋರಿದ್ದಾರೆ. ಬ್ರ

ಶೋಭಿತಾ ಶಿವಣ್ಣ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಗೂ ಪಾದರ್ಪಾಣೆ ಮಾಡಿದ್ದಾರೆ. 'ವಂದನಾ', 'ಅಟೆಂಪ್ಟ್‌ ಟು ಮರ್ಡರ್‌', 'ಜಾಕ್‌ಪಾಟ್' ಅಂತಹ ಸಿನಿಮಾಗಳಲ್ಲಿ ಶೋಭಿತಾ ನಟಿಸಿದ್ದಾರೆ. ಸದ್ಯ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಕೂಡ ವಿಲನ್ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Sonali Raut Hot Photos: ಟ್ಯಾಟೂ ತೋರಿಸಲು ಬಿಕಿನಿ ಧರಿಸಿ ಹಾಟ್‌ ಪೋಸ್‌ ನೀಡಿದ ಬಿಗ್ ಬಾಸ್ ಬೆಡಗಿ!

ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೊ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ನವ ದಂಪತಿಯ ಫೋಟೋವನ್ನು ಶೇರ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ಧಾರಾವಾಹಿಯಲ್ಲಿ ಶೋಭಿತಾ ತನ್ನ ಪ್ರತಿಭೆಯಿಂದ ಕನ್ಮಡಿಗರ ಮನದಲ್ಲಿ ಅಚ್ಚುಳಿದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News