ನವದೆಹಲಿ: ಇತ್ತೀಚೆಗೆ ಭಾರತದ ತಂಡದ ಮತ್ತೊಬ್ಬ ಆಟಗಾರ ಹಾರ್ದಿಕ್ ಪಾಂಡ್ಯ ತಂದೆಯಾದರು ಮತ್ತು ಈಗ ಅದು ಕ್ಯಾಪ್ಟನ್ ಕೊಹ್ಲಿಯ ಸರದಿ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂದು ವಿರಾಟ್ ಕೊಹ್ಲಿ ಅವರ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಪ್ರಕಟಿಸಿದ್ದಾರೆ. ವಿರಾಟ್ ಟ್ವಿಟ್ಟರ್ ನಲ್ಲಿ, 'ನಾವು ಮೂರು ಆಗಲಿದ್ದೇವೆ, ಜನವರಿ 2021 ರಲ್ಲಿ ಈ ಗಳಿಗೆ ಕೂಡಿಬರಲಿದೆ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಟೋದೊಂದಿಗೆ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಅನುಷ್ಕಾರವರ ಹೊಟ್ಟೆ ಮುಂದೆ ಬಂದಿರುವುದು ಕಂಡುಬರುತ್ತದೆ.



COMMERCIAL BREAK
SCROLL TO CONTINUE READING

ವಿಶೇಷವೆಂದರೆ, ಈ ದಂಪತಿಗಳು 2017ರಲ್ಲಿ ಇಟಲಿಯ ಫ್ಲಾರೆನ್ಸ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಈಗ 3 ವರ್ಷಗಳ ನಂತರ ಅವರ ಮನೆಗೆ ಸಂತೋಷದ ಸುದ್ದಿಯೊಂದು ಬರುತ್ತಿದೆ. ಅನುಷ್ಕಾ ಅವರ ಗರ್ಭಧಾರಣೆಯ ಸುದ್ದಿ ಬರುತ್ತಿದ್ದಂತೆ ಅವರ ಅಭಿಮಾನಿಗಳು ಮತ್ತು ಆಪ್ತರು 'ವಿರುಷ್ಕಾ'ಗೆ ಅಭಿನಂದನೆ ಹೇಳುತ್ತಿದ್ದಾರೆ.


ಟೀಮ್ ಇಂಡಿಯಾದ ಗಬ್ಬರ್ ಶಿಖರ್ ಧವನ್ ವಿರಾಟ್-ಅನುಷ್ಕಾ ಅವರನ್ನು ಅಭಿನಂದಿಸಿದ್ದಾರೆ.



ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರನ್ನು ಟ್ವಿಟ್ಟರ್ ಮೂಲಕ ಅಭಿನಂದಿಸಿದೆ.