ಅಪ್ಪು ಅಗಲಿಕೆಯ ನಂತರ ಅವರ ಸಿನಿಮಾ ಸಂಸ್ಥೆಯ ಜವಾಬ್ಧಾರಿ ಹೊತ್ತವರು ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್.. ಅಷ್ಟೇ ಅಲ್ಲ ಕನ್ನಡ ಸಿನಿ ಮಂದಿಯ ಪಾಲಿಗೆ ಅವರು ಅದೃಷ್ಟ,, ಅದೇ ಅದೃಷ್ಟದ ಕೈಗಳು ಈಗ ಹೊಸಬರ ಕೈ ಹಿಡಿದಿದ್ದಾವೆ. ಹೌದು, ಹೊಸಬರ ಜ್ಯೂಲಿಯೆಟ್ 2 ಟೀಸರ್ ಲಾಂಚ್ ಮಾಡಿ ಶುಭ ಹಾರೈಯಿಸಿದ್ದಾರೆ.. 


COMMERCIAL BREAK
SCROLL TO CONTINUE READING

ದೊಡ್ಮನೆ ಕುಡಿ, ಕರುನಾಡಿನ ರಾಜಕುಮಾರ್ ಅಪ್ಪು ಇಲ್ಲ ಅನ್ನುವ ನೋವು ಇಂದಿಗೂ ಕಾಡ್ತಿದೆ. ಅವರ ನೆನೆದು ಪ್ರತೀದಿನ ನೂರಾರು ಮಂದಿ ಅವರ ಸಮಾಧಿ ಬಳಿ ನಮಿಸಿ ಬರ್ತಿದ್ದಾರೆ. ದೇವರ ರೀತಿಯಲ್ಲಿ ಪೂಜಿಸುತ್ತಿದ್ದಾರೆ. ಅಷ್ಟೇ ಅಲ್ಲಾ ಅಪ್ಪು ಅವರನ್ನ ಅವರ ಪತ್ನಿಯಲ್ಲಿ ಕಾಣ್ತಿದ್ದಾರೆ ಸಿನಿ ಮಂದಿ.. ಅಪ್ಪು ಅವರಿದ್ದಾಗ ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ಕೊಟ್ಟಂತವರು.. ಅವರ ಬ್ಯಾನರ್‌ನಲ್ಲಿ  ಹೊಸಬರ ಚಿತ್ರಗಳನ್ನ ನಿರ್ಮಾಣ ಮಾಡಿದವರು.. ಈಗ ಅದೇ ಸಂಸ್ಕೃತಿಯನ್ನ ಅವರ ಪತ್ನಿ ಕೂಡ ಮುಂದು ವರೆಸಿಕೊಂಡು ಬರ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ, ಹೊಸಬರ ನಟನೆಯ ಜ್ಯೂಲಿಯೆಟ್ ೨ ಚಿತ್ರದ ಟೀಸರ್ ಲಾಂಚ್ ಮಾಡಿ ಶುಭ ಕೋರಿದ್ದಾರೆ.


ಇದನ್ನೂ ಓದಿ- ಕರುನಾಡಿನ ದೇವರು ಅಪ್ಪು ಹುಟ್ಟುಹಬ್ಬ ಮಾರ್ಚ್ 17ರಂದು "ಕಬ್ಜ" ಸಿನಿಮಾ ರಿಲೀಸ್..!


ಅಫ್‌ಕೋರ್ಸ್ ಈಗಂತು ವಿಶ್ವಮಟ್ಟದಲ್ಲಿ ಕನ್ನಡ ಚಿತ್ರಗಳು ಸಾಕಷ್ಟು ಸೌಂಡ್ ಮಾಡ್ತಿವೆ.. ಕಥೆ ಹಾಗು ಮೇಕಿಂಗ್ ವಿಚಾರದಲ್ಲಿ ಕನ್ನಡ ಚಿತ್ರಗಳದ್ದೇ ಮೇಲುಗೈ.. ಈಗ ಅಂತದ್ದೇ ಮತ್ತೊಂದು ಕನ್ನಡ ಸಿನಿಮಾಸ್ಯಾಂಡಲ್ವುಡ್ ನಲ್ಲಿ ಸೌಂಡ್ ಮಾಡ್ತಿದೆ.. ಎಸ್ ಅದೇ ಜ್ಯೂಲಿಯೇಟ್ ಟೂ.. ಪ್ರೇಮಂ ಪೂಜ್ಯಂ ಚಿತ್ರದ ನಾಯಕಿ ಬೃಂದಾ ಆಚಾರ್ಯ ನಟಿಸಿರೋ ವಿಭಿನ್ನ ಸಿನಿಮಾ ಇದು.. ಜ್ಯೂಲಿಯೆಟ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬೃಂದಾ ಆಚಾರ್ಯ ಅವರ ನಟನೆಗೆ ಸ್ಯಾಂಡಲ್‌ವುಡ್‌ ನಲ್ಲಿ ಸಾಲು ಸಾಲು ಹಿಟ್‌ ಸಿನಿಮಾಗಳು ಕೈ ಬೀಸಿ ಕರೆಯುತ್ತಿವೆ. ಜೂಲಿಯೆಟ್ ಚಿತ್ರದ ಹೆಸ್ರೇ ಹೇಳುವಂತೆ ಚಿತ್ರ ಸಂಪೂರ್ಣವಾಗಿ ಬೃಂದಾ ಅವರ ಪಾತ್ರದ ಸುತ್ತ ಗಿರಕಿ ಹೊಡೆಯುತ್ತೆ. ನಗರವಾಸಿಯಾದ ಮಗಳು ತಂದೆಯ ಕೊನೆಯ ಆಸೆ ಈಡೇರಿಸಲು ಹಳ್ಳಿಗೆ ಹೋಗಿ ನೆಲೆಸುತ್ತಾಳೆ.ಅಲ್ಲಿ ನಡೆಯುವ ಘಟನೆಯಿಂದ ಶಾಂತರೂಪಿಯಾದ ನಾಯಕಿ ತನಗೆ ತೊಂದರೆ ಆದಾಗ ದುರ್ಗೆಯು ಆಗುತ್ತಾಳೆ ಎನ್ನುವುದು ಈ ಚಿತ್ರದ ಒನ್ ಲೈನ್ ಸ್ಟೋರಿ..


ಇದನ್ನೂ ಓದಿ- ನಾನು ಓಡೋಗಿ ಮದ್ವೆ ಆಗೋದಿಲ್ಲ.. ಅಂತಹ ತಪ್ಪನ್ನು ನಾನು ಮಾಡಿಲ್ಲ..!


ಚಿತ್ರದ ಟೀಸರ್ ನೋಡ್ತಿದ್ರೆ ಬೆಚ್ಚಿಬೀಳೋದು ಗ್ಯಾರೆಂಟಿ.. ಪ್ರೀತಿ ಪ್ರೇಮ ನಿಮ್ಮನ್ನ ಹಿಡಿದಿಡುತ್ತೆ.. ಇದೋಂದು ಕ್ರೈಮ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ಪಿ. ಎಲ್‌ ಪ್ರೋಡಕ್ಷನ್‌ ಲಾಂಛನದಡಿಯಲ್ಲಿ ನಿರ್ಮಾಣವಾಗಿದ್ದು, ವಿರಾಟ್ ಬಿ ಗೌಡ ನಿರ್ದೇಶಿಸಿ ಕಥೆ ಚಿತ್ರಕಥೆ ನೀಡಿ ಅಕ್ಷನ್ ಕಟ್‌ ಹೇಳೀದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.