Actress Prema marriage : ಎರಡನೇ ಮದುವೆ ಆಗೋಕೆ ನಟಿ ಪ್ರೇಮಾ ತುಳುನಾಡ ದೈವ ಕೊರಗಜ್ಜನ ಮೊರೆ ಹೊಗಿದ್ದಾರೆ ಅನ್ನೋ ಸುದ್ದಿ ಕಳೆದ ವಾರದಿಂದ ಸಖತ್ ಸದ್ದು ಮಾಡ್ತಿದೆ. ಇನ್ನು ಎರಡನೇ ಮದುವೆ ವಿಚಾರದ ಅಂತೆ ಕಂತೆಗಳಿಗೆ ಮೊದಲ ಭಾರಿಗೆ ಪ್ರೇಮ ಮೌನ ಮುರಿದು ಮಾತನಾಡಿ, ತಮ್ಮ ಮದ್ವೆ ವಿಚಾರವಾಗಿ ಗಾಸಿಪ್ ಹಬ್ಬಿಸಿದವರಿಗೆ ಖಡಕ್ ವಾರ್ನಿಂಗ್ ನೀಡದ್ದಾರೆ. ಜೊತೆಗೆ ಸೆಕೆಂಡ್ ಮದುವೆ ಬಗ್ಗೆಯೂ ಮಾತನಾಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಪ್ರೇಮಾ ಕಳೆದ ಆರು ವರ್ಷಗಳಿಂದ ಏಕಾಂಗಿ ಜೀವನ ನಡೆಸ್ತಿದ್ದಾರೆ. 2006ರಲ್ಲಿ ಕೊಡಗಿನ ಮೂಲದ ಜೀವನ್ ಅಪ್ಪಚ್ಚು ಎಂಬುವರ ಜೊತೆ ಸಪ್ತಪದಿ ತುಳಿದಿದ್ರು. ಅಲ್ಲದೆ ಈ ಜೋಡಿಯ ಸಂಸಾರ 10 ವರ್ಷ ಆನಂದವಾಗಿಯೇ ಇತ್ತು. ಅದ್ರೆ ಪ್ರೇಮ ಸಂಸಾರದ ಮೇಲೆ ಅದ್ಯಾವ ಮಸಣಿ ಕಣ್ಣು ಬಿತ್ತೋ ಗೊತ್ತಿಲ್ಲ. 2016 ರಲ್ಲಿ ಪ್ರೇಮ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿತು. ಅಲ್ಲದೆ, ವಿಚ್ಛೇದನ ಪಡೆದು ಗಂಡನಿಂದ ದೂರವಾಗಿದ್ದರು.
ಇದನ್ನೂ ಓದಿ: ಹನಿಮೂನ್ ಪ್ಲಾನ್ ಕ್ಯಾನ್ಸಲ್ ಮಾಡಿದ ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ .! ಕಾರಣ ಇದೇ ನೋಡಿ
ಇನ್ನು ಪ್ರೇಮಾ ತಮ್ಮ ಗಂಡನಿಗೆ ವಿಚ್ಛೇದನ ನೀಡಿ ಆರು ವರ್ಷಗಳು ಕಳೆದಿವೆ. ಈಗ ಪ್ರೇಮ ಎರಡನೇ ಮದ್ವೆ ಆಗ್ತಾರಂತೆ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಸಡನ್ ಆಗಿ ಪ್ರೇಮ ಎರಡನೇ ವಿವಾಹ ಸೌಂಡ್ ಮಾಡಿದ್ದೆ ಅಚ್ಚರಿ. ಇನ್ನು ಈ ವಿಚಾರ ವೈರಲ್ ಆಗ್ತಿದಂತೆ 44ನೇ ವಯಸ್ಸಿನ ಪ್ರೇಮಾಗೆ ಎರಡನೇ ಮದ್ವೆ ಬೇಕಾ ಅಂತ ನೆಟ್ಟಿಗರು ಚರ್ಚೆ ಮಾಡಲು ಶುರು ಮಾಡಿದ್ದರು. ಅದರೆ ಎರಡನೇ ಮದುವೆ ಬಗ್ಗೆ ನಟಿ ಪ್ರೇಮ ಆಗಲಿ ಅವರ ಕುಟುಂಬದವರಾಗಲಿ ಕ್ಲಾರಿಟಿ ಕೊಟ್ಟಿರಲಿಲ್ಲ.
ಯಾವಾಗ ತಮ್ಮ ಮದುವೆ ವಿಚಾರ ವೈರಲ್ ಆಯ್ತೋ ಸೈಲೆಂಟ್ ಆಗಿದ್ದ ಪ್ರೇಮಾ ಈ ಕುರಿತು ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ತಮ್ಮ ಮದುವೆ ಬಗ್ಗೆ ಅಪ ಪ್ರಚಾರ ಮಾಡಿದವರ ವಿರುದ್ದ ಗರಂ ಆಗಿದ್ದಾರೆ. ಮಾಧ್ಯಮ ಅಕಾಡೆಮಿಯ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಬಂದಿದ್ದ ವೇಳೆ ತಮ್ಮ ಎರಡನೇ ಮದ್ವೆ ವಿಚಾರದಲ್ಲಿ ಮೌನ ಮುರಿದ ಪ್ರೇಮ ಕೊಂಚ ಕೋಪದಲ್ಲೇ ಮಾತನಾಡಿ ನಾನು ಓಡೋಗಿ ಮದ್ವೆ ಆಗೋದಿಲ್ಲ. ಅಂತಹ ತಪ್ಪನ್ನು ನಾನು ಮಾಡಿಲ್ಲ. ನಾನು ಮದ್ವೆ ಆದ್ರೆ ಹೇಳ್ಬಬಿಟ್ಟೇ ಆಗ್ತೀನಿ ಅಂತ ಗರಂ ಆದ್ರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.