ನವದೆಹಲಿ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನನ್ನು (Salman Khan) ಅಭಿಮಾನಿಗಳು 'ದಬಾಂಗ್ ಖಾನ್' ಎಂದೇ ಕರೆಯುತ್ತಾರೆ. ಸಲ್ಮಾನ್ ಖಾನ್ ಅವರನ್ನು ಬಾಲಿವುಡ್‌ನ ಅತ್ಯಂತ ಅಗ್ರೆಸಿವ್ ಸೂಪರ್‌ಸ್ಟಾರ್ . ನಿಜ ಜೀವನದಲ್ಲೂ ಸಲ್ಮಾನ್ ಖಾನ್ ಬಹಳ ಬೇಗನೇ ಕೋಪಗೊಳ್ಳುತ್ತಾರೆ. ಕೋಪ ಬಂದಾಗ ಅದೆಷ್ಟೋ ಸಲ ಸಲ್ಮಾನ್ ತನ್ನ ನಿಯಂತ್ರಣ ಕಳೆದುಕೊಂಡಿದ್ದಿದೆ.


COMMERCIAL BREAK
SCROLL TO CONTINUE READING

ಸಲ್ಮಾನ್ ನನ್ನು ತಡೆದು ನಿಲ್ಲಿಸಿದ ಸಿಆರ್‌ಪಿಎಫ್ ಯೋಧ : 
ಸಲ್ಮಾನ್ ಖಾನ್ (Salman Khan) ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಿದೆ. ಇದು ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ. ಈ ವಿಡಿಯೋದಲ್ಲಿ ಸಲ್ಮಾನ್ ಖಾನ್  ತನ್ನ ಐಷಾರಾಮಿ ಕಾರಿನಿಂದ ಕೆಳಗಿಳಿದು ಬರುತ್ತಿರುವುದು ಕಾಣುತ್ತದೆ. ಅಭಿಮಾನಿಗಳು ಮಾಮೂಲಿಯಂತೆ ಫೋಟೋ ತೆಗೆಸಿಕೊಳ್ಳುತ್ತಿರುವುದು ಕೂಡಾ ಕಂಡು ಬರುತ್ತದೆ. ಆದರೆ , ಸಲ್ಮಾನ್ ವಿಮಾನ ನಿಲ್ದಾಣದ (Airport) ಗೇಟ್ ಬಳಿ ಬರುತ್ತಿರದ್ದಂತೆಯೇ ಸಿಆರ್‌ಪಿಎಫ್  ಯೋಧ ನಟನನ್ನು ತಡೆದು ನಿಲ್ಲಿಸುತ್ತಾರೆ. ತಪಾಸಣೆ ನಡೆಸಿ ಒಳಪ್ರವೇಶಿಸುವಂತೆ ಸೂಚಿಸುತ್ತಾರೆ.



 


ಇದನ್ನೂ ಓದಿ : ನೀರಜ್ ಚೋಪ್ರಾ 'ನ್ಯಾಷನಲ್ ಕ್ರಷ್' ಎಂದ ಬಾಲಿವುಡ್ ನಟಿ ಕಿರಾ ಅದ್ವಾನಿ


ಸಂಪೂರ್ಣ ಸಹಕಾರ ನೀಡಿದ ಸಲ್ಮಾನ್ : 
ಇದು ಭದ್ರತಾ ತಪಾಸಣೆ ಎನ್ನುವುದನ್ನು ಅರಿತ ನಟ ಸಲ್ಮಾನ್ ಖಾನ್ ತಮ್ಮ ಮಾಸ್ಕ್ (Mask) ತೆಗೆದು ಸಹಕಾರ ನೀಡುತ್ತಾರೆ. ಇಲ್ಲಿ ಸಿಆರ್ ಪಿಎಫ್ (CRPF) ಯೋಧನ ಕರ್ತವ್ಯ ನಿಷ್ಟೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸೂಪರ್ ಸ್ಟಾರ್ ಎಂದು ಯಾವುದೇ ತಾರತಮ್ಯ ತೋರದೆ ಸಲ್ಮಾನ್ ಜೊತೆ ಭದ್ರತಾ ಸಿಬ್ಬಂದಿ ನಡೆದುಕೊಂಡ ರೀತಿಗೆ ಶ್ಲಾಘನೆ ವ್ಯಕ್ತವಾಗಿದೆ.


ಟೈಗರ್ 3 ರಲ್ಲಿ ಕಾಣಿಸಿಕೊಳ್ಳಲಿರುವ ಸಲ್ಮಾನ್  :
ಸಲ್ಮಾನ್ ಖಾನ್ ಶೀಘ್ರದಲ್ಲೇ ಟೈಗರ್ -3' (Tiger-3) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ಮೆಗಾ ಚಿತ್ರದ ಚಿತ್ರೀಕರಣಕ್ಕೆ ಹೊರಟಿದ್ದ ವೇಳೆಯೇ ಏರ್ ಪೋರ್ಟ್ ನಲ್ಲಿ ಈ ಘಟನೆ ನಡೆದಿದೆ. 


ಇದನ್ನೂ ಓದಿ : ಲಾರ್ಡ್ಸ್ ಗೆಲುವಿನ ಬಳಿಕ Jolly ಮೂಡ್ ನಲ್ಲಿ ವಿರುಷ್ಕಾ ಜೋಡಿ...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ