Actor Darshan Cricket: ಕಿಚ್ಚ ಸುದೀಪ್ ಅವರ ಎರಡು ದಿನಗಳ ಟೂರ್ನಮೆಂಟ್, ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಇತ್ತೀಚೆಗೆಯಷ್ಟೇ ಕೊನೆಗೊಂಡಿದೆ. ಆದರೆ ಈ ಟೂರ್ನಿಯಲ್ಲಿ ನಟ ಯಶ್ ಹಾಗೂ ದರ್ಶನ್ ಭಾಗಿಯಾಗಿರಲಿಲ್ಲ. ಇದಕ್ಕೆ ಸುದೀಪ್ ಜೊತೆಗೆ ಹೊಂದಾಣಿಕೆ ಇಲ್ಲದಿರರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಇವೆಲ್ಲದರ ಮಧ್ಯೆ ದಾಸ ತನ್ನ ಅಭಿಮಾನಿಗಳಿಗಾಗಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Dhruva Sarja: "ಮಾರ್ಟಿನ್" ಗಾಗಿ ಧ್ರುವ ಮಾಡಿದ ಸಾಹಸದ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!!


ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಕೆಸಿಸಿ ಸ್ಥಗಿತಗೊಂಡಿತ್ತು. ಈ ಬಾರಿ ಕಿಚ್ಚ ಸುದೀಪ್ ಪಂದ್ಯಾವಳಿ ಇದೆ ಎಂದು ಘೋಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು, ಕನ್ನಡ ಇಂಡಸ್ಟ್ರಿಯ ಎಲ್ಲರನ್ನೂ ಈ ಪಂದ್ಯಾವಳಿಯ ಭಾಗವಾಗಲು ಆಹ್ವಾನಿಸುತ್ತೀರಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ, “ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕೇ, ಬೇಡವೇ ಎಂಬುದು ಅವರವರ ಇಚ್ಛೆಗೆ ಬಿಟ್ಟಿದ್ದು” ಎಂದು ಹೇಳಿದ್ದರು.


ಈ ಟೂರ್ನಿಯನ್ನು ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಗೌರವಾರ್ಥವಾಗಿ ನಡೆಸಲಾಗಿದೆ. ಅಷ್ಟೇ ಅಲ್ಲದೆ, ಪ್ರತಿಯೊಂದು ತಂಡಗಳ ಜೆರ್ಸಿಯಲ್ಲಿ ಅಪ್ಪು ಅವರ ಫೋಟೋವನ್ನು ಮುದ್ರಿಸಲಾಗಿತ್ತು.


ಇದನ್ನೂ ಓದಿ: Ram Charan: ತಮ್ಮ  ಮಗು ಅಮೆರಿಕದಲ್ಲಿ ಜನಿಸಲಿದೆ ಎಂಬ ವದಂತಿಗಳಿಗೆ ತೆರೆ ಎಳೆದ  ರಾಮ್ ಚರಣ್ ಪತ್ನಿ


ಒಂದೆಡೆ ಕೆಸಿಸಿ ಪಂದ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ದರ್ಶನ್ ಮಡಿಕೇರಿಯಲ್ಲಿ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿರುವ ವಿಡಿಯೋವೊಂದು ಸದ್ದು ಮಾಡತೊಡಗಿತು. ದಾಸ ಮೋಜಿನ ಕ್ಷಣಗಳನ್ನು ಕಳೆಯುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿತ್ತು. ಫೆಬ್ರವರಿ 25 ರಂದು ಶೇರ್ ಆದ ವಿಡಿಯೋವನ್ನು ದಚ್ಚು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.