Dhruva Sarja: "ಮಾರ್ಟಿನ್" ಗಾಗಿ ಧ್ರುವ ಮಾಡಿದ ಸಾಹಸದ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!!

Dhruva stunt for the Martin : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ... ಮಾಸ್ ಅಭಿಮಾನಿ ಬಳಗ ಹೊಂದಿರುವ ಯೂತ್ ಐಕಾನ್ ಅಂದ್ರೆ ತಪ್ಪಲ್ಲ..ಸಿನಿಮಾ ಯಾವ್ದೆ ಇರ್ಲಿ ಪಾತ್ರಕ್ಕೆ ತಕ್ಕಂತೆ ದೇಹ ದಂಡಿಸೋದ್ರಲ್ಲಿ ಧ್ರುವ ನಂ1..ಈ ಮಾಸ್ ಮಹಾರಾಜ ಈಗ ಮಾರ್ಟಿನ್ ಚಿತ್ರಕ್ಕಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಿಂದೆ ಯಾರು ಮಾಡದ ದೊಡ್ಡ ಸಾಹಸವನ್ನೆ ಮಾಡಿದ್ದಾರೆ.

Written by - YASHODHA POOJARI | Last Updated : Feb 28, 2023, 04:37 PM IST
  • ಮಾಸ್ ಅಭಿಮಾನಿ ಬಳಗ ಹೊಂದಿರುವ ಯೂತ್ ಐಕಾನ್
  • ಹಿಂದೆ ಯಾರು ಮಾಡದ ದೊಡ್ಡ ಸಾಹಸವನ್ನೆ ಮಾಡಿದ್ದಾರೆ
  • ಮಾರ್ಟಿನ್" ಗಾಗಿ ಧ್ರುವ ಮಾಡಿದ ಸಾಹಸ ಕೇಳಿದ್ರೆ ಶಾಕ್ ಆಗ್ತೀರಾ
Dhruva Sarja: "ಮಾರ್ಟಿನ್" ಗಾಗಿ ಧ್ರುವ ಮಾಡಿದ ಸಾಹಸದ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!!  title=
Dhruva Sarja

Dhruva stunt for the Martin : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ... ಮಾಸ್ ಅಭಿಮಾನಿ ಬಳಗ ಹೊಂದಿರುವ ಯೂತ್ ಐಕಾನ್ ಅಂದ್ರೆ ತಪ್ಪಲ್ಲ..ಸಿನಿಮಾ ಯಾವ್ದೆ ಇರ್ಲಿ ಪಾತ್ರಕ್ಕೆ ತಕ್ಕಂತೆ ದೇಹ ದಂಡಿಸೋದ್ರಲ್ಲಿ ಧ್ರುವ ನಂ1..ಈ ಮಾಸ್ ಮಹಾರಾಜ ಈಗ ಮಾರ್ಟಿನ್ ಚಿತ್ರಕ್ಕಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಿಂದೆ ಯಾರುಮಾಡದ ದೊಡ್ಡ ಸಾಹಸವನ್ನೆ ಮಾಡಿದ್ದಾರೆ..ಜೊತೆಗೆ ಸೈ ಅನಿಸಿ ಕೊಂಡಿದ್ದಾರೆ..ಅಷ್ಟಕ್ಕೂ ಮಾರ್ಟಿನ್ ಗಾಗಿ ಧ್ರುವ ಮಾಡಿದ ಸಾಹಸವೇನು ಅಂತೀರ ಮುಂದೆ ಓದಿ 

ಧ್ರುವ ಸರ್ಜಾ...ಅದ್ದೂರಿ ಚಿತ್ರದ ಮೂಲಕ ನಮ್ಮ ಚಂದನವನಕ್ಕೆ ಭರ್ಜರಿಯಾಗಿ ಎಂಟ್ರಿಕೊಟ್ಟು. ಬಹದ್ದೂರ್ ಗಂಡಾಗಿ ಪೊಗರು ತೋರಿಸಿ ಯಾರು ಊಹಿಸಲಾಗದ ಅಭಿಮಾನಿ ಬಳಗ ಹೊಂದಿದ್ದಾರೆ ಈ ಮಾರ್ಟಿನ್.2012 ರಲ್ಲಿ ಬಣ್ಣದ ಲೋಕಕ್ಕೆ ಬಲಗಾಲಿಟ್ಟ ಧ್ರುವ ಇಲ್ಲಿವರೆಗೂ 6 ಚಿತ್ರಗಳಲ್ಲಿ ಹೀರೋ ಆಗಿ ಕಂಗೋಳಿಸಿದ್ದಾರೆ. ಪ್ರತಿಚಿತ್ರದಲ್ಲೂ ನಿರ್ದೇಶಕನ ನಟ ನಾಗಿ ಪಾತ್ರಕ್ಕ ತಕ್ಕಂತೆ ತನ್ನನ್ನು ಸಂಪೂರ್ಣ ಅರ್ಪಿಸಿ ಕೊಂಡಿರುವ ಧ್ರುವ ಬಗ್ಗೆ ಇಡೀ ಇಂಡಸ್ಟ್ರಿಯಲ್ಲಿ ಮೆಚ್ಚುಗೆ ಮಾತುಗಳಿವೆ..ಅದರಲ್ಲೂ ಧ್ರುವ ಪಾತ್ರಕ್ಕಾಗಿ ತೆಗೆದು ಕೊಳ್ಳುವ ರಿಸ್ಕ್ ಸಿನಿಮಾ ದಿಗ್ಗಜರು ಅಬ್ಬಬ್ಬ ಅನ್ನುವಂತೆ ಮಾಡಿದೆ..

ಇದನ್ನೂ ಓದಿ : Ranu Mandal : ಲತಾ ಮಂಗೇಶ್ಕರ್‌ ಬಗ್ಗೆ ರಾನು ಮಂಡಲ್ ಸೊಕ್ಕಿನ ಮಾತು, ಕೆಂಡಾಮಂಡಲರಾದ ಫ್ಯಾನ್ಸ್‌

ಧ್ರುವ ಅದ್ದೂರಿ ಚಿತ್ರದಲ್ಲೂ ಭರ್ಜರಿಯಾದ  ಆ್ಯಕ್ಷನ್, ಯಾರು ನಿರೀಕ್ಷೆ ಮಾಡಲಾಗದ ಡ್ಯಾನ್ಸ್ ಮೂಲಕ‌ ಇಂದು ಧ್ರುವ ಆ್ಯಕ್ಷನ್ ಪ್ರಿನ್ಸ್ ಆಗಿ ಅಭಿಮಾನಿಗಳ ಹೃದಯದಲ್ಲಿ ದರ್ಬಾರ್ ಮಾಡ್ತಿದ್ದಾರೆ. ಪೊಗರು ಚಿತ್ರದಲ್ಲಿ  40 ಕೆಜಿ ತೂಕ ಇಳಿಸಿ ಯೋಗ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಧ್ರುವ ಈಗ ಮಾರ್ಟಿನ್ ಚಿತ್ರದಲ್ಲೂ ಪಾತ್ರಕ್ಕಾಗಿ ಸಖತ್ ಎಫರ್ಟ್ ಹಾಕಿದ್ದಾರೆ.. ಮಾರ್ಟಿನ್ ಚಿತ್ರದಲ್ಲಿ ಧ್ರುವ ಈ ಹಿಂದೆ ಕಾಣಿಸದ ರಗಡ್ ಮಾಸ್ ಲುಕ್ ನಲ್ಲಿ ಮಿಂಚಿದ್ದು, ಮಾರ್ಟಿನ್ ಟೀಸರ್ ನೋಡಿದ ಮಂದಿ ಧೈತ್ಯಾಕಾರದ ಧ್ರುವನ ಕಂಡು ಶಾಕ್ ಆಗಿದ್ದಾರೆ...

ಧ್ರುವ ಸರ್ಜಾ ಮಾರ್ಟಿನ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚೊಕೆ ಕನಸು ಕಂಡಿದ್ದಾರೆ. ಅದ್ರೆ ಈ ಕನಸು ಅಷ್ಟು ಸುಲಭವನ್ನ ಕಲ್ಲು ಮುಳ್ಳುಗಳ ಈ ಹಾದಿಯಲ್ಲಿ ಗೋಲ್ ರೀಚ್ ಆಗಬೇಕಾದ್ರೆ ಯಾರು ಮಾಡದ ಸಾಹಸ ಮಾಡಲೇ ಬೇಕು ಎಂಬುದ ಚೆನ್ನಾಗಿ ಅರಿತಿರೋ ಧ್ರುವ..ಮಾರ್ಟಿನ್ ಚಿತ್ರಕ್ಕಾಗಿ ಚಿತ್ರಕ್ಕಾಗಿ ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಯಾರು ಮಾಡದಂತ ಸಾಹಸ ಮಾಡಿದ್ದಾರೆ..ಮಾರ್ಟಿನ್ ಚಿತ್ರಶುರುವಿನಲ್ಲೇ ನಿರ್ದೇಶಕ ಅರ್ಜುನ್ ಚಿತ್ರದಲ್ಲಿ ಧ್ರುವ ಖಡಕ್ ಆಗಿ ಕಾಣಿಸ್ತಾರೆ ಅಂತ ಹೇಳಿದ್ರು..ಅದೇ ರೀತಿ ಧ್ರುವ ಮಾರ್ಟಿನ್ ಚಿತ್ರಕ್ಕಾಗಿ ಬರೋಬರಿ120 ಕೆಜಿಗೆ ದೇಹದ ತೂಕ ಹೆಚ್ಚಿಸಿಕೊಂಡು,ಜಿಮ್ ನಲ್ಲಿ ದೇಹ ದಂಡಿಸಿ ದೈತ್ಯಾಕಾರದಲ್ಲಿ ಕಾಣಿಸುವ ಮೂಲಕ ಧ್ರುವ ಕನ್ನಡದ
ಅರ್ನಾಲ್ಡ್ ಆಗಿ ಕಂಗೊಂಳಿಸಿದ್ದಾರೆ...

ಇದನ್ನೂ ಓದಿ : Pathaan:ʼ ಮೌನವೇ ಪಠಾಣ್‌ ವಿವಾದವನ್ನು ಗೆಲ್ಲುವಂತೆ ಮಾಡಿತುʼ - ದೀಪಿಕಾ ಪಡುಕೋಣೆ

ಇದಲ್ಲದೆ ಧ್ರುವ ಮಾರ್ಟಿನ್ ಚಿತ್ರದಲ್ಲಿ ಸಖತ್ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದಾರೆ‌. ಮಾರ್ಟಿನ್ ಟೀಸರ್ ನಲ್ಲಿ ಬರುವ ಗನ್  ಸೀನ್ ಅಭಿಮಾನಿಗಳ ಕಿಕ್ ಹೆಚ್ಚಿಸಿದೆ..ಅದ್ರೆ ಆ ಒಂದು ಸೀನ್ ಗೆ ಧ್ರುವ ಹಾಕಿರುವ ಎಫರ್ಟ್ ಗೆ ಎಷ್ಟು ಹ್ಯಾಟ್ಸಾಪ್ ಹೇಳಿದ್ರು ಕಮ್ಮಿನೇ ಅನ್ನ ಬಹುದು.. ಮಾರ್ಟಿನ್ ಟೀಸರ್ ನಲ್ಲಿ ಧ್ರುವ KM 232 ಮಿಷನ್ ಗನ್ ಬಳಸಿ ಎದುರಾಳಿಯ ಎದೆ ಸೀಳಿದ್ದಾರೆ..ವಿಚಾರ ಅಂದ್ರೆ ಈ ಬರೋಬರಿ 45 ಕೆಜಿ ಇದ್ದು ಯಾರ ಸಪೋರ್ಟ್ ಇಲ್ಲದೆ ಧ್ರುವ ಈ ಗನ್ ಅನ್ನು ಕೈಯಲ್ಲಿ ಹಿಡಿದು ಶೂಟಿಂಗ್ ನಲ್ಲಿ ತನ್ನ ತಾಖತ್ ತೋರಿದ್ದಾರೆ..ಒಂದು ಶಾಟ್ ಕಂಪೀಟ್ ಆಗೋಕೆ ಒಂದು ಎರಡು ನಿಮಿಷ ಸಮಯ ಬೇಕಿತ್ತು..ಅದ್ರು ಧ್ರುವ ಎಫರ್ಟ್ ಹಾಕಿ ಗನ್ ಹಿಡಿದು ಅಬ್ಬರಿಸಿದ್ದಾರೆ..

ಇನ್ನು ಧ್ರುವ ಡೆಡಿಕೇಶನ್ ಬಗ್ಗೆ ನಿರ್ದೇಶಕ ಎಪಿ ಅರ್ಜುನ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ..ಒಂದಲ್ಲ ಅಂತ ಮೂರ್ನಾಲ್ಕು ಟೇಕ್ ಅದಾಗಲೂ ಕೂಡ ಧ್ರುವ ಎನರ್ಜಿ ಎಲ್ಲೂ ಡ್ರಾಪ್ ಆಗದೆ ಪ್ರತಿ ಶಾಟ್ ನಲ್ಲೂ ಧ್ರುವ ಸಖತ್ ಎನರ್ಜಿಯಿಂದ ಗನ್ ಹಿಡಿದು ಆಕ್ಟ್ ಮಾಡಿದ್ದಾರೆ ಎಂದು ಧ್ರುವ ಡೆಡಿಕೇಶ್ ಬಗ್ಗೆ ಅರ್ಜುನ್ ಫುಲ್ ಖುಷ್ ಆಗಿದ್ದಾರೆ..ಇನ್ನು  ಧ್ರುವ. ಅವರ ಈ ಸಾಹಸಕ್ಕೆ  ಭಾರತೀಯ ಚಿತ್ರರಂಗ ಫಿದಾ ಆಗಿದೆ.. ಅಲ್ಲದೆ ಧ್ರುವ ಮೊದಲ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್ ಟೀಸರ್ 70 ಮಿಲಿಯನ್ ವೀಕ್ಷಣೆ ಕಂಡು ಇಡೀ ಭಾರತೀಯ ಚಿತ್ರರಂಗದ ದಿಗ್ಗಜರು Who is ಮಾರ್ಟಿನ್ ಅನ್ನೋತರ ಮಾಡಿದೆ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News