Ram Charan: ತಮ್ಮ  ಮಗು ಅಮೆರಿಕದಲ್ಲಿ ಜನಿಸಲಿದೆ ಎಂಬ ವದಂತಿಗಳಿಗೆ ತೆರೆ ಎಳೆದ  ರಾಮ್ ಚರಣ್ ಪತ್ನಿ

Ram Charan: ಡಿಸೆಂಬರ್ 2022 ರಲ್ಲಿ, ಉಪಾಸನಾ ಗರ್ಭಿಣಿ ಎಂಬ ಸುದ್ದಿ ಮುನ್ನೆಲೆಗೆ ಬಂದಿತು. ಈ ಸಂತಸದ ಸುದ್ದಿಯನ್ನು ದಂಪತಿಯೇ ನೀಡಿದ್ದಾರೆ. 

Written by - Zee Kannada News Desk | Last Updated : Feb 28, 2023, 05:18 PM IST
  • ಮೊದಲ ಮಗು ಭಾರತದಲ್ಲಿ ಜನಿಸಲಿದೆ ಎಂದು ಸ್ಟಷ್ಟನೆ ನೀಡಿದ ಉಪಾಸನಾ
  • 'ಗುಡ್ ಮಾರ್ನಿಂಗ್ ಅಮೇರಿಕಾ' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರಾಮ್ ಚರಣ್
  • ಅಪೊಲೊ ಆಸ್ಪತ್ರೆಯ ಡಾ. ಸುಮನಾ ಮನೋಹರ್ ಉಪಾಸನಾ ಹೆರಿಗೆ ನೆರವೆರಿಸಲಿದ್ದಾರೆ
Ram Charan: ತಮ್ಮ  ಮಗು ಅಮೆರಿಕದಲ್ಲಿ ಜನಿಸಲಿದೆ ಎಂಬ ವದಂತಿಗಳಿಗೆ ತೆರೆ ಎಳೆದ  ರಾಮ್ ಚರಣ್ ಪತ್ನಿ title=

Ram Charan: ದಕ್ಷಿಣ ಭಾರತದ ನಟ ರಾಮ್ ಚರಣ್ ಮತ್ತು ಅವರ ಉದ್ಯಮಿ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ರವರ   ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ.

ಜನಪ್ರಿಯ ಸುದ್ದಿ ಕಾರ್ಯಕ್ರಮ 'ಗುಡ್ ಮಾರ್ನಿಂಗ್ ಅಮೇರಿಕಾ' ದಲ್ಲಿ ರಾಮ್ ಚರಣ್ ಕಾಣಿಸಿಕೊಂಡಾಗಿನಿಂದ,ದಂಪತಿಗಳು ತಮ್ಮ ಮೊದಲ ಮಗುವನ್ನು ಅಮೆರಿಕಾದಲ್ಲಿ ಸ್ವಾಗತಿಸಲು ಯೋಜಿಸುತ್ತಿದ್ದಾರೆ ಎಂಬ ಊಹಾಪೋಹಗಳು ಪ್ರಾರಂಭವಾಗಿದ್ದವು.

ಇದನ್ನೂ ಓದಿ: Pathaan: ʼಮೌನವೇ ಪಠಾಣ್‌ ವಿವಾದವನ್ನು ಗೆಲ್ಲುವಂತೆ ಮಾಡಿತುʼ - ದೀಪಿಕಾ ಪಡುಕೋಣೆ

 ನನ್ನ ದೇಶ ಭಾರತದಲ್ಲಿ ನಮ್ಮ  ಮೊದಲ ಮಗುವಿಗೆ ಜನ್ಮ ನೀಡಲು ಉತ್ಸುಕಳಾಗಿದ್ದೇನೆ ಉಪಾಸನಾ ಟ್ವೀಟ್‌ ರ್‌ ನಲ್ಲಿ ಬರೆದುಕೊಂಡಿದ್ದಾರೆ.ಡಿಸೆಂಬರ್ 2022 ರಲ್ಲಿ, ಉಪಾಸನಾ ಗರ್ಭಿಣಿ ಎಂಬ ಸುದ್ದಿ ಮುನ್ನೆಲೆಗೆ ಬಂದಿತು. ಈ ಸಂತಸದ ಸುದ್ದಿಯನ್ನು ದಂಪತಿಯೇ ನೀಡಿದ್ದಾರೆ.

ಇದನ್ನೂ ಓದಿ: "ಆಗ ನನಗೆ 19 ವರ್ಷ.. ಆ ನಿರ್ಮಾಪಕ ಬಾತ್‌ರೂಮ್‌ಗೆ ಹಿಂಬಾಲಿಸಿದ್ರು.." ಮುಂದೆ?

ಅಪೋಲೋ ಆಸ್ಪತ್ರೆಗಳ CSR ನ ಉಪಾಧ್ಯಕ್ಷರಾದ ಉಪಾಸನಾ ಅವರು ತಮ್ಮ ದೇಶದಲ್ಲಿ ತಮ್ಮ ಮಗುವನ್ನು ಹೆರಿಗೆ ಮಾಡಲು ಉತ್ಸಾಹದಲ್ಲಿದ್ದಾರೆ. ಡಾ. ಸುಮನಾ ಮನೋಹರ್ ಮತ್ತು ಡಾ. ರುಮಾ ಸಿನ್ಹಾ ಅವರನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ, ಡಾ. ಜೆನ್ನಿಫರ್ ಆಶ್ಟನ್, ಬೋರ್ಡ್ ಒಬ್-ಜಿನ್, ಯುಎಸ್‌ನ ಲೇಖಕ ಮತ್ತು ಟಿವಿ ವೈದ್ಯಕೀಯ ವರದಿಗಾರರೂ  ಹೆರಿಗೆ ಸಮಯದಲ್ಲಿ   ಭಾಗಿಯಾಗಲಿದ್ದಾರೆ ಎಂದು ಸ್ಟಷ್ಟನೆ ನೀಡಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News