ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಎಲ್ಲ ಸೆಲೆಬ್ರಿಟಿಗಳು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ತಮ್ಮ ಸಿನಿಮಾಗಳ ಶೂಟಿಂಗ್​ ಮುಗಿಸಿಕೊಂಡು  ಕೊಂಚ ರಿಲ್ಯಾಕ್ಸ್​ ಆಗಲು ಪ್ರವಾಸಕ್ಕೆ ಹೋಗುತ್ತಿದ್ದಾರೆ. ಬಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು  ತಮ್ಮಿಷ್ಟದ ಟೂರಿಸ್ಟ್​ ಸ್ಪಾಟ್​ಗಳಿಗೆ ಹೋಗಿ ಎಂಜಾಯ್​ ಮಾಡುತ್ತಿದ್ದಾರೆ. ಇದಕ್ಕೆ ದರ್ಶನ್​ ಸಹ ಹೊರತಾಗಿಲ್ಲ. 'ರಾಬರ್ಟ್'​  ಹಾಗೂ  'ರಾಜ ವೀರ ಮದಕರಿ ನಾಯಕ' ಸಿನಿಮಾದ  ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಡಿಬಾಸ್​ ಈಗ ರಿಲ್ಯಾಕ್ಸ್​ ಆಗಲು ಬೈಕ್​ ಟ್ರಿಪ್ ಹೊರಟಿದ್ದಾರೆ.


COMMERCIAL BREAK
SCROLL TO CONTINUE READING

https://www.instagram.com/p/CHrru6InuUm/?utm_source=ig_web_copy_link


ಲಾಕ್​ಡೌನ್​ ಸಡಿಲಗೊಂಡ ನಂತರ ಸಿನಿಮಾ ಚಿತ್ರೀಕರಣ ಮುಗಿಸಿರುವ ದರ್ಶನ್(Darshan)​ ಈಗ ಬೈಕ್​ ಟ್ರಿಪ್​ನಲ್ಲಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ದರ್ಶನ್​ ಬೈಕ್​ ರೈಡ್​ ಹೊರಟಿದ್ದಾರೆ. ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ತಮ್ಮ ಮನೆಯಿಂದ ಸ್ನೇಹಿತರೊಂದಿಗೆ ಬೈಕ್​ ಟ್ರಿಪ್​ಗೆ ಹೋಗಿದ್ದಾರಂತೆ. ಅವರ ಬೈಕ್​ ರೈಡ್​ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ನನ್ನ ಮಗ ಭಾರತದಲ್ಲಿ ಹಿನ್ನೆಲೆ ಗಾಯಕನಾಗಬೇಕೆಂದು ನಾನು ಬಯಸುವುದಿಲ್ಲ: Sonu Nigam


ದರ್ಶನ್​ ಅವರೊಂದಿಗೆ ಅವರ ಸ್ನೇಹಿತರಾದ ಪ್ರಜ್ವಲ್​ ದೇವರಾಜ್​, ನಿರಂಜನ್​, ಪ್ರದೇಶ್​, ರಾಬರ್ಟ್​ ಸಿನಿಮಾದ ನಿರ್ಮಾಪಕ ಉಮಾಪತಿ ಸೇರಿದಂಥೆ ಇತರರು ಇದ್ದಾರೆ. ಈ ಬೈಕ್​ ಪ್ರವಾಸ 2-3 ದಿನಗಳದ್ದಾಗಿದ್ದು, ರಾಜ್ಯದಲ್ಲೇ ದರ್ಶನ್​ ಸುತ್ತಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.


ದೀಪಾವಳಿಯಂದೆ ಅಭಿಮಾನಿಗಳಿಗೆ 'ಭರ್ಜರಿ ಗುಡ್‌ ನ್ಯೂಸ್' ಮಯೂರಿ


ದರ್ಶನ್​ ಅವರು ಆಗಾಗ ಬೈಕ್​ ಟ್ರಿಪ್​ಗೆ ಹೋಗುತ್ತಿರುತ್ತಾರೆ. ಈ ಹಿಂದೆ ಸಹ ಮೈಸೂರಿನಲ್ಲಿರುವ ಅವರ ಸ್ನೇಹಿತರೊಂದಿಗೆ ಬೈಕ್​ ರೈಡ್​ಗೆ ಹೋಗಿದ್ದರು. ಈಗಲೂ ಸಹ ತಮ್ಮ ಬಳಿ ಇರುವ ನೀಲಿ ಬಣ್ಣದ ಹಾರ್ಲಿ ಡೇವಿಡ್​ಸನ್​ ಬೈಕ್​ನಲ್ಲಿ ಪ್ರವಾಸ ಪ್ಲಾನ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮೊದಲಿಗೆ ಇರುವುದು ದರ್ಶನ್​ ಅವರು.