ಬೆಂಗಳೂರು : ನಟ ರಾಕ್ಷಸನಾದ ಡಾಲಿ ಧನಂಜಯ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕಲಕಲಾವಲ್ಲಭ ಅಂತಾನೇ ಪ್ರಖ್ಯಾತಿ. ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಸಿನಿಮಾತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದು, ಸದ್ಯ ಪ್ರೇಕ್ಷಕರ ಹಾಗೂ ಪಡ್ಡೆ ಹುಡುಗರ ಹಾರ್ಡ್ ಬೀಟ್ ಹೆಚ್ಚು ಮಾಡೋ ಹೊಸ ಸಾಂಗ್ ರಿಲೀಸ್ ಮಾಡಿದೆ.


COMMERCIAL BREAK
SCROLL TO CONTINUE READING

ಹೆಡ್ ಬುಷ್ ಚಿತ್ರದ ಪಾಯಲ್ ರಜಪೂತ್ ಹೆಜ್ಜೆ ಹಾಕಿರೋ ಹಬೀಬಿ ಸಾಂಗ್ ರಿಲೀಸ್ ಆಗಿದೆ. ಪಂಜಾಬಿ ಬೆಡಗಿ ಪಾಯಲ್ ಮೈಮಾಟಕ್ಕೆ ಹುಡುಗರು ಪಾಗಲ್ ಆಗೋದು ಗ್ಯಾರೆಂಟಿ. ಟಾಲಿವುಡ್‌ನಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಪಾಯಲ್ ಈಗ ಸ್ಯಾಂಡಲ್ ವುಡ್‌ಗೆ ಹೆಜ್ಜೆ ಇಟ್ಟಿದ್ದು ಜೈರಾಜ್ ಜೊತೆ ಮಸ್ ಆಗಿ ಹೆಜ್ಜೆ ಹಾಕಿದ್ದಾರೆ. ಇಷ್ಟು ದಿನ ಅಭಿನಯದ ಮೂಲಕವೇ ಪ್ರೇಕ್ಷಕರನ್ನ ರಂಜಿಸಿ ನಟ ರಾಕ್ಷಸ ಎಂದು ಹೆಸರು ಪಡೆದುಕೊಂಡಿದ್ದ ಧನಂಜಯ್ ಈ ಹಾಡಿನ ಮೂಲಕ ಅಭಿಮಾನಿಗಳಿಂದ ಪದ ರಾಕ್ಷಸ ಎಂದುಕರೆಸಿಕೊಳ್ತಿದ್ದಾರೆ. ಯೆಸ್ ಸದ್ಯ ಬಿಡುಗಡೆ ಆಗಿರೋ ಹೆಡ್ ಬುಷ್ ಸಿನಿಮಾದ ಹಬೀಬಿ ಹಾಡನ್ನ ಖುದ್ದು ಡಾಲಿ ಧನಂಜಯ್ ಅವ್ರೇ ಬರೆದಿರೋದು ಸ್ಪೆಷಲ್.


ಇದನ್ನೂ ಓದಿ: ಪ್ರಿಯಾಂಕ ʼಕೈಮರʼ ಸಿನಿಮಾಗೆ ಮೂಹೂರ್ತ : ಇಂಟ್ರಸ್ಟಿಂಗ್‌ ಆಗಿದೆ ಚಿತ್ರದ ಟೈಟಲ್‌..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.