ಬೆಂಗಳೂರು: ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಮತ್ತು ಟಾಲಿವುಡ್‌ನಲ್ಲಿ ಸೌಂಡ್‌ ಕ್ರೀಯೆಟ್‌ ಮಾಡುತ್ತಿರುವ ನಟ ಡಾಲಿ ಧನಂಜಯ್‌ ಅವರ 25ನೇ ಸಿನಿಮಾ ʼಹೊಯ್ಸಳʼ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.


COMMERCIAL BREAK
SCROLL TO CONTINUE READING

ಬೆಳಗಾವಿಯಲ್ಲಿ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ನಡೆದ ಘಟನೆಯನ್ನು ಆಧರಿಸಿ ಈ ಕಥೆ ಹೆಣೆಯಲಾಗಿದ್ದು, ಸಿನಿಮಾದಲ್ಲಿ ಗುರುದೇವನಾಗಿ ನಟರಾಕ್ಷಸ ಡಾಲಿ ಮಿಂಚಿದ್ದಾರೆ. ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಿರುವ ಚಿತ್ರತಂಡ 2023ರ ಮಾರ್ಚ್‌ 30ರಂದು ಸಿನಿಮಾ ತೆರೆಗೆ ಬರಲಿದೆ ಎಂದು ತಿಳಿಸಿದೆ.


ಇದನ್ನೂ ಓದಿ: ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ನಟಿ ಉರ್ವಶಿ ರೌಟೇಲಾ..!


ಸಿನಿಮಾದ ಪೋಸ್ಟರ್‌ನಲ್ಲಿ ಮುಖಕ್ಕೆ ಗ್ಯಾಸ್‌ ಮಾಸ್‌ ಹಾಕ್ಕೊಂಡಿರುವ ಡಾಲಿ ಖಡಕ್‌ ಪೊಲೀಸ್‌ ಅಧಿಕಾರಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೈಟಲ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಹೊಯ್ಸಳ ಶೀರ್ಷಿಕೆ ಕಳಗೆ ʼಆರಕ್ಷಕ ರಾಕ್ಷನಾದಾಗʼ  ಎಂಬ ಅಡಿ ಬರಹ ಬರೆಯಲಾಗಿದ್ದು, ಸಿನಿಮಾದ ಮೇಲೆ ಇಂಟರೆಸ್ಟಿಂಗ್ ಹೆಚ್ಚಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.