ʼಗೋಮಾಂಸ ತಿನ್ನಲು ಇಷ್ಟʼ ಎಂದಿದ್ದ ರಣಬೀರ್‌ ಕಪೂರ್‌ಗೆ ಮಹಾಕಾಲ್ ದೇಗುಲ ಪ್ರವೇಶ ನಿರಾಕರಣೆ

ಬಾಲಿವುಡ್‌ ಸ್ಟಾರ್‌ ದಂಪತಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ಗೆ ಪ್ರಸಿದ್ಧ ಮಹಾಕಾಲ್‌ ದೇಗುಲ ಪ್ರವೇಶ ನಿರಾಕರಿಸಲಾಗಿದೆ.

Written by - Krishna N K | Last Updated : Sep 7, 2022, 02:17 PM IST
  • ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ಗೆ ಪ್ರಸಿದ್ಧ ಮಹಾಕಾಲ್‌ ದೇಗುಲ ಪ್ರವೇಶ ನಿರಾಕರಣೆ
  • ಗೋಮಾಂಸ ತಿನ್ನಲು ಇಷ್ಟ ಎಂದು ಹೇಳಿದ್ದ ರಣಬೀರ್‌
  • ಬಜರಂಗದಳ ಕಾರ್ಯಕರ್ತರಿಂದ ಸ್ಟಾರ್‌ ದಂಪತಿಗೆ ದೇಗುಲ ಪ್ರವೇಶಕ್ಕೆ ತಡೆ
ʼಗೋಮಾಂಸ ತಿನ್ನಲು ಇಷ್ಟʼ ಎಂದಿದ್ದ ರಣಬೀರ್‌ ಕಪೂರ್‌ಗೆ ಮಹಾಕಾಲ್ ದೇಗುಲ ಪ್ರವೇಶ ನಿರಾಕರಣೆ title=

ಉಜ್ಜೈನಿ: ಬಾಲಿವುಡ್‌ ಸ್ಟಾರ್‌ ದಂಪತಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ಗೆ ಪ್ರಸಿದ್ಧ ಮಹಾಕಾಲ್‌ ದೇಗುಲ ಪ್ರವೇಶ ನಿರಾಕರಿಸಲಾಗಿದೆ.

ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಮಧ್ಯ ಪ್ರದೇಶದ ಉಜ್ಜೈನಿಯಲ್ಲಿರುವ ಪ್ರಸಿದ್ಧ ಮಹಾಕಾಲ್ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಲು ನಿರ್ಧರಿಸಿದ್ದರು. ಆದ್ರೆ, ಸಂದರ್ಶನವೊಂದರಲ್ಲಿ ಗೋಮಾಂಸ ತಿನ್ನಲು ಇಷ್ಟ ಎಂದು ರಣಬೀರ್‌ ಹೇಳಿಕೆ ನೀಡಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಅರೋಪಿಸಿ ಬಜರಂಗದಳ ಕಾರ್ಯಕರ್ತರು ದೇಗುಲ ಪ್ರವೇಶಕ್ಕೆ ದಂಪತಿಗೆ ತಡೆ ಒಡ್ಡಿದ್ದಾರೆ. ಹಾಗೂ ರಣಬೀರ್ ಮತ್ತು ಆಲಿಯಾ ಸ್ಥಳಕ್ಕೆ ಬರುತ್ತಿದ್ದಂತೆ ‘ಜೈ ಶ್ರೀರಾಮ್‘ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Actress Tabu : ಮಗು ಬೇಕಂದ್ರೆ ಮದುವೆ ಆಗ್ಬೇಕು ಅಂತೇನಿಲ್ಲ - ನಟಿ ತಬು

ಇದರಿಂದಾಗಿ ರಣಬೀರ್‌ ಕಪೂರ್‌ ಜೊತೆ ಬಂದಿದ್ದ ಅಯಾನ್ ಮುಖರ್ಜಿ ಒಬ್ಬರೆ ದೇವರ ದರ್ಶನ ಪಡೆಯುವಂತಾಯಿತು. ಸದ್ಯ ಅಯಾನ್ ಮುಖರ್ಜಿ ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Ayan Mukerji (@ayan_mukerji)

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ‘ಬ್ರಹಾಸ್ತ್ರ’ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಸೆಪ್ಟೆಂಬರ್ 9ರಂದು ಚಿತ್ರ ಬಿಡುಗಡೆ ಆಗಲಿದೆ. ಹಿಂದಿ ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಅಮಿತಾಭ್​ ಬಚ್ಚನ್​, ನಾಗಾರ್ಜುನ ಸೇರಿದಂತೆ ಸ್ಟಾರ್‌ ಕಲಾವಿದರು ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News