Sandalwood: ‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರದ ಟ್ರೈಲರ್ ಬಿಡುಗಡೆ
ತಿಥಿ ಖ್ಯಾತಿಯ ಪೂಜಾ, ಬಾಲ ರಾಜವಾಡಿ, ಶೀಭಾ ಮೂರ್ತಿ, ಅರುಣ್ ಮೂರ್ತಿ, ಸ್ಪಂದನ, ಪ್ರಶಾಂತ್ ರಾವ್ ವರ್ಕು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಬೆಂಗಳೂರು: ದೇಶ-ವಿದೇಶದ ನಾನಾಭಾಗಗಳ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ 150ಕ್ಕೂ ಅಧಿಕ ಪ್ರಶಸ್ತಿ ಪಡೆದುಕೊಂಡಿರುವ ‘ದಾರಿ ಯಾವುದಯ್ಯ ವೈಕುಂಠಕೆ’(Daari Yavudayya Vaikuntake) ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಹಲವು ವಿವಿಧ ಕ್ಷೇತ್ರದ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ಸಿದ್ದು ಪೂರ್ಣಚಂದ್ರ(Siddu Poornachandra) ಮಾತನಾಡಿ, ‘ನನ್ನ ಮೊದಲ ಚಿತ್ರ ‘ಕೃಷ್ಣ ಗಾರ್ಮೆಂಟ್ಸ್’ಗೆ ನಿರೀಕ್ಷಿತ ಗೆಲುವು ಸಿಗಲಿಲ್ಲ. 2ನೇ ಚಿತ್ರ ‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರ ಬಿಡುಗಡೆಗೆ ಮುಂಚೆಯೇ ಜನಪ್ರಿಯವಾಗಿದೆ. 150ಕ್ಕೂ ಅಧಿಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇಂತಹ ನನ್ನ ಕನಸಿಗೆ ಆಸರೆ ನೀಡಿದ್ದ ನಿರ್ಮಾಪಕರಿಗೆ ಧನ್ಯವಾದ. ನನ್ನ ಚಿತ್ರತಂಡಕ್ಕೆ ವಿಶೇಷ ಧನ್ಯವಾದ. ಈ ಚಿತ್ರದ ಹೆಚ್ಚಿನ ಚಿತ್ರೀಕರಣವು ರಾಮನಗರದ ಸ್ಮಶಾನದಲ್ಲಿ ನಡೆದಿದೆ. ಅಲ್ಲಿ ಹೋಗಿ ಹಿರಿಯರ ಆಶೀರ್ವಾದ ಪಡೆದುಕೊಂಡು ಬಂದಿರುವುದಾಗಿ’ ಹೇಳಿದರು.
ಇದನ್ನೂ ಓದಿ: Love Mocktail 2: ಈ ದಿನದಂದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ ‘ಲವ್ ಮಾಕ್ಟೇಲ್ 2’
ಈ ಚಿತ್ರದ ಕಥೆ ಕೇಳಿದ ದಿನವೇ ನಿರ್ಮಾಣ ಮಾಡಬೇಕೆಂದು ಮನಸು ಮಾಡಿದ್ದೆ. ನನ್ನ ಸ್ನೇಹಿತ ಪ್ರಶಾಂತ್ ವರ್ಕು ಅವರ ಮೂಲಕ ನಿರ್ದೇಶಕ ಸಿದ್ದು ಪೂರ್ಣಚಂದ್ರ ಪರಿಚಿತರಾದರು. ಉತ್ತಮ ಚಿತ್ರ ಮಾಡಿಕೊಟ್ಟಿದ್ದಕ್ಕೆ ಸಿದ್ದು ಅವರಿಗೆ ವಂದನೆ.. ನಮ್ಮ ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಧನ್ಯವಾದ. ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ನಿರ್ಮಾಪಕ ಶರಣಪ್ಪ ಎಂ ಕೊಟಗಿ(Sharanappa M Kotagi) ತಿಳಿಸಿದರು.
KGF 2: ತೂಫಾನ್ ಬಳಿಕ ಮತ್ತೊಂದು ಲಿರಿಕಲ್ ಸಾಂಗ್ ರಿಲೀಸ್ ಮಾಡಿದ ಕೆಜಿಎಫ್2 ತಂಡ
ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಗಮಿಸಿದ್ದ ಗಣ್ಯರು ಚಿತ್ರದ ಬಗ್ಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ದಿಲೀಪ್ ಅವರ ಸಾರಥ್ಯದ ಮ್ಯೂಸಿಕ್ ಬಾಕ್ಸ್ ಎಂಬ ಆಡಿಯೋ ಕಂಪನಿಯನ್ನು ಹಿರಿಯ ಛಾಯಾಗ್ರಾಹಕ ಜೆ.ಜಿ.ಕೃಷ್ಣ, ಪಿಆರ್‍ಓ ಸುಧೀಂದ್ರ ವೆಂಕಟೇಶ್ ಹಾಗೂ ಗಾಯಕ ಶಶಿಧರ್ ಕೋಟೆ ಬಿಡುಗಡೆ ಮಾಡಿದರು. ಬರಿ ಕನ್ನಡದಲ್ಲಿ ಮಾತ್ರವಿದ್ದ ಮ್ಯೂಸಿಕ್ ಬಾಕ್ಸ್ ಈಗ 11 ಭಾಷೆಗಳಲ್ಲಿ ಆರಂಭವಾಗಿರುವುದಾಗಿ ದಿಲೀಪ್ ತಿಳಿಸಿದರು.
ತಿಥಿ ಖ್ಯಾತಿಯ ಪೂಜಾ, ಬಾಲ ರಾಜವಾಡಿ(Bala Rajwadi), ಶೀಭಾ ಮೂರ್ತಿ, ಅರುಣ್ ಮೂರ್ತಿ, ಸ್ಪಂದನ, ಪ್ರಶಾಂತ್ ರಾವ್ ವರ್ಕು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.