Rajamartanda: ಶೀಘ್ರವೇ ಚಿರಂಜೀವಿ ಸರ್ಜಾ ಅಭಿನಯದ ‘ರಾಜಮಾರ್ತಾಂಡ’ ಚಿತ್ರ ಬಿಡುಗಡೆ

ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ‘ರಾಜಮಾರ್ತಾಂಡ’ ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ಶೀಘ್ರವೇ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ಸಿನಿಮಾತಂಡ ಹೇಳಿಕೊಂಡಿದೆ.

Written by - YASHODHA POOJARI | Edited by - Puttaraj K Alur | Last Updated : Apr 5, 2022, 08:28 PM IST
  • ಚಿರಂಜೀವಿ ಸರ್ಜಾ ಅಭಿನಯದ ಕೊನೆ ಚಿತ್ರ ‘ರಾಜಮಾರ್ತಾಂಡ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ
  • ಶೀಘ್ರವೇ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸುವಾಗಿ ಸಿನಿಮಾತಂಡ ಹೇಳಿಕೊಂಡಿದೆ
  • ಧ್ರುವ ಸರ್ಜಾ ಅವರು ಚಿರಂಜೀವಿ ಸರ್ಜಾರ ಪಾತ್ರಕ್ಕೆ ಡಬ್ಬಿಂಗ್ ಮಾಡಲಿದ್ದಾರೆ
Rajamartanda: ಶೀಘ್ರವೇ ಚಿರಂಜೀವಿ ಸರ್ಜಾ ಅಭಿನಯದ ‘ರಾಜಮಾರ್ತಾಂಡ’ ಚಿತ್ರ ಬಿಡುಗಡೆ  title=
ಶೀಘ್ರವೇ ‘ರಾಜಮಾರ್ತಾಂಡ’ ಸಿನಿಮಾ ತೆರೆಗೆ

ಬೆಂಗಳೂರು: ಬಹುಬೇಗನೇ ನಮ್ಮನೆಲ್ಲಾ ಅಗಲಿದ ನಟ ಚಿರಂಜೀವಿ ಸರ್ಜಾ(Chiranjeevi Sarja) ಅಭಿನಯದ ‘ರಾಜಮಾರ್ತಾಂಡ’ ಚಿತ್ರ(Rajamartanda) ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲಿಯೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

ಯುಗಾದಿ ಹಬ್ಬದ ಶುಭದಿನದಂದು ಈ ಚಿತ್ರದ ಪೋಸ್ಟರ್(Film Poster) ಅನ್ನು ಅರ್ಜುನ್ ಗುರೂಜಿ ಮೈಸೂರಿನ DRCಯಲ್ಲಿ ಬಿಡುಗಡೆ ಮಾಡಿದರು. ಡಿಸಿಪಿ ಪ್ರಕಾಶ್ ಗೌಡ್ರು ಹಾಗೂ DRCಯ ಎಂ.ಡಿ.ಶ್ಯಾಮಲಾ ಅವರು ಈ ಸಂದರ್ಭದಲ್ಲಿ ‌ಉಪಸ್ಥಿತರಿದ್ದರು. 

ಇದನ್ನೂ ಓದಿ: Ramya:ಫ್ಯಾನ್ಸ್‌ಗೆ ನಟಿ ರಮ್ಯಾ ಕೇಳಿದ್ರು ಈ ಪ್ರಶ್ನೆ! ಏನಂದ್ರು ಅಭಿಮಾನಿಗಳು?

ಚಿರಂಜೀವಿ ಸರ್ಜಾ(Chiranjeevi Sarja) ಅವರ ಸಾವಿನ ಮುಂಚೆಯೇ ಚಿತ್ರೀಕರಣ ಪೂರ್ತಿಯಾಗಿತ್ತು. ಹೀಗಾಗಿ ಅವರು ಚಿತ್ರೀಕರಣ ಮುಗಿಸಿರುವ ಕೊನೆಯ ಚಿತ್ರ ಅನ್ನಬಹುದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಧ್ವನಿ ನೀಡಿರುವುದು ಕೂಡ ಈ ಚಿತ್ರದ ವಿಶೇಷವಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಅವರು ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡಲಿದ್ದಾರೆ.

ಗೀತ ರಚನೆಕಾರರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್(K Ramanarayan) ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: Akatakata: ನಾಗರಾಜ್ ಸೋಮಯಾಜಿ ‘ಅಕಟಕಟ’ ಚಿತ್ರಕ್ಕೆ ಇವರೇ ನಾಯಕಿ!

ಈ ಚಿತ್ರಕ್ಕೆ ಅರ್ಜುನ್ ಜನ್ಯ(Arjun Janya) ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚತ್ರಕ್ಕಿದೆ.

ಚಿರಂಜೀವಿ ಸರ್ಜಾ(Chiranjeevi Sarja) ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News