Dare Devil Mustafa Trailer : ಅಂದಹಾಗೇ ಡೇರ್ ಡೆವಿಲ್ ಮುಸ್ತಫಾ ಸಿನಿಮಾಗೆ ಶಶಾಂಕ್ ಸೋಗಾಲ್ ಸಾರಥಿ. ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಫಟಿಂಗ ಎಂಬ ಜನಪ್ರಿಯ ಕಿರುಚಿತ್ರ ನಿರ್ದೇಶಿಸಿದ್ದ ಶಶಾಂಕ್ ಸೋಗಾಲ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಆರಂಭದಲ್ಲಿ ನಾನಾ ಬಗೆಯಲ್ಲಿ ಸಿನಿರಸಿಕರನ್ನು ಗಮನಸೆಳೆಯುತ್ತಿರುವ ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ನಿನ್ನಂಥೋರ್ ಯಾರೂ ಇಲ್ವಲ್ಲೋ ಎಂಬ ಹಾಡು ಸೂಪರ್ ಹಿಟ್ ಲಿಸ್ಟ್ ಸೇರಿದೆ. ಅಣ್ಣಾವ್ರ ಅನಿಮೇಷನ್ ಮೂಲಕ ಗಮನಸೆಳೆದಿರುವ ಈ ಗಾನಲಹರಿಗೆ ವಾಸುಕಿ ವೈಭವ್ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಧ್ವನಿಯಾಗಿದ್ದಾರೆ. ವಿಭಿನ್ನವಾಗಿ ಮೂಡಿಬಂದಿರುವ ನಿನ್ನಂಥೋರ್ ಯಾರೂ ಇಲ್ವಲ್ಲೋ ಹಾಡು ಸಿನಿಮಾದಲ್ಲಿ ಹೇಗಿರಲಿ ಎಂಬ ನಿರೀಕ್ಷೆ ಹೆಚ್ಚಿಸಿದೆ. 


ಇದನ್ನೂ ಓದಿ-ಶಿವಣ್ಣ ನಿಮ್ಮ ಈ ನಡೆಯನ್ನು ಸ್ವರ್ಗದಲ್ಲಿರುವ ಡಾಕ್ಟರ್ ರಾಜ್, ಅಪ್ಪು ಅವರ ಆತ್ಮಗಳು ಕ್ಷಮಿಸುವುದಿಲ್ಲ!


ಆನಿಮೇಷನ್‌ ಹಾಡಿನ ಮೂಲಕ ಗಮನಸೆಳೆದಿರುವ ಡೇರ್ ಡೆವಿಲ್ ಮುಸ್ತಫಾ ಟ್ರೇಲರ್ ಬಿಡುಗಡೆಯಾಗಿದೆ. ಯೂಟ್ಯೂಬ್ ಸೆನ್ಸೇಷನ್ ಸ್ಟಾರ್ ಡಾ.ಬ್ರೋ ವಾಯ್ಸ್ ನಿಂದ ಪೂಚಂತೇ ಪ್ರಪಂಚ ಪರಿಚಯ ಮಾಡಿಕೊಡಲಾಗುತ್ತದೆ. ಬಾಲ್ಯದ ಆಟ ಪಾಠ ತುಂಟಾಟದ ಡೇರ್ ಡೆವಿಲ್ ಮುಸ್ತಫಾ ಮೊದಲ ನೋಟ ನೋಡುಗರಿಗೆ ಇಂಪ್ರೆಸ್ ಮಾಡುತ್ತಿದೆ.


ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳಿಂದಲೇ ತಯಾರಾಗಿರುವ ಸಿನಿಮಾಗೆ ನಟರಾಕ್ಷಸ ಡಾಲಿ ಧನಂಜಯ್ ಬೆಂಬಲವಾಗಿ ನಿಂತಿದ್ದಾರೆ. ಹೇಳಿಕೇಳಿ ಸಾಹಿತ್ಯ ಪ್ರೇಮಿಯಾಗಿರುವ ಧನಂಜಯ್ ಈ ಚಿತ್ರವನ್ನು ಪ್ರೆಸೆಂಟ್  ಮಾಡುತ್ತಿದ್ದು, ಕೆ ಆರ್ ಜಿ ಸ್ಟುಡಿಯೊಸ್  ರಾಜ್ಯದೆಲ್ಲೆಡೆ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. 


ಇದನ್ನೂ ಓದಿ-ಸೀರೆಯುಟ್ಟ ಮಾಸ್ತಾರು ಮಾಸ್ತಾರು ಬೆಡಗಿ, ಪೋಟೋಸ್‌ ನೋಡಿ


ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. 


ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಫಾ ನಿರ್ಮಾಣವಾಗಿದೆ. ಕನ್ನಡ ಚಿತ್ರರಸಿಕರನ್ನು ಪೂಚಂತೇ ಪ್ರಪಂಚಕ್ಕೆ ಕರೆದುಕೊಂಡು ಹೋಗಲು ಹೊಸ ಉತ್ಸಾಹಿ ಯುವಕರೇ ಕೂಡಿರುವ ಇಡೀ ಚಿತ್ರ ತಂಡ ಅತ್ಯಂತ ಫ್ಯಾಷನೆಟೇಡ್ ಆಗಿ ಕೆಲಸ ಮಾಡಿದೆ. ಇದು ದೊಡ್ಡ ಪರದೆಯಲ್ಲಿ ಅದ್ಭುತ ಅನುಭವ ಅಂತಾರೆ ನಿರ್ದೇಶಕ ಶಶಾಂಕ್ ಸೋಗಾಲ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.