Dare Devil Mustafa streaming on OTT : ಮೇ 19ರಂದು ಭರ್ಜರಿಯಾಗಿ ರಿಲೀಸ್‌ ಆಗಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ಸಿನಿಮಾ ಡೇರ್‌ ಡೆವಿಲ್‌ ಮುಸ್ತಾಫಾ. ಈ ಸಿನಿಮಾ ಮೇಕಿಂಗ್‌ ಮತ್ತು ಕಂಟೆಟ್‌ ಮೂಲಕವೇ ಎಲ್ಲರ ಮನಗೆದ್ದಿದೆ. ಕರ್ನಾಟಕ ಮಾತ್ರವಲ್ಲದೇ, ವಿದೇಶಗಳಲ್ಲೂ ಈ ಚಿತ್ರ ಹೆಸರು ಮಾಡಿದೆ. 
 
ಸಿನಿಮಾಗೆ ಎಲ್ಲ ಕಡೆಯಿಂದ ಸಿಕ್ಕ ಪ್ರತಿಕ್ರಿಯೆಯಿಂದ ಚಿತ್ರತಂಡ ಸಂಭ್ರಮದಲ್ಲಿತ್ತು. 25 ದಿನಗಳನ್ನು ಪೊರೈಸಿದ ಈ ಡೇರ್‌ ಡೆವಿಲ್‌ ಮುಸ್ತಫಾ ಸಿನಿಮಾ ಇದೀಗ ಒಟಿಟಿಗೆ ಪಾದಾರ್ಪಣೆ ಮಾಡಿದೆ. ಶಶಾಂಕ್‌ ಸೋಗಲ್‌ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ತನ್ನ ಹೊಸತನದ ಮೂಲಕವೇ ಎಲ್ಲರಿಗೂ ಹತ್ತಿರವಾಗಿತ್ತು. ಈ ಸಿನಿಮಾವನ್ನು ವಿಕ್ಷೀಸಿದ ಡಾಲಿ ಧನಂಜಯ್‌ ಸಹ ಈ ಚಿತ್ರಕ್ಕೆ ಸಾತ್‌ ನೀಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಪಸಂದಾಗಿದೆ "ಗರಡಿ" ಚಿತ್ರದ ಮೊದಲ ಹಾಡು


ಇದೀಗ ಡೇರ್‌ ಡೆವಿಲ್‌ ಮುಸ್ತಾಫಾ ಸಿನಿಮಾ ಅಮೆಜಾನ್‌ ಪ್ರೈಂ ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಈ ವಿಚಾರವನ್ನು ಸಿನಿಮಾ ತಂಡ ರಿವೀಲ್‌ ಮಾಡಿತ್ತು. ಈ ಕುರಿತು ಪ್ರೈಂ ಇಂಡಿಯಾ ಕೂಡಾ ತನ್ನ ಸೋಷಿಯಲ್‌ ಮಿಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಸಿನಿಮಾ ಮಾತ್ರವಲ್ಲದೇ ಇನ್ನೂ ಹಲವು ಸಿನಿಮಾಗಳ ಒಟಿಟಿ ಬಿಡುಗಡೆಯ ಬಗ್ಗೆ ತಿಳಿಸಿದೆ. 


ಹುಟ್ಟು ಹಬ್ಬದ ಸಂಭ್ರಮದಲ್ಲಿ ಪರಮಾತ್ಮನ ಬೆಡಗಿ; ಚಿತ್ರರಂಗಕ್ಕೆ ಕಮ್‌ ಬ್ಯಾಕ್‌ ಮಾಡ್ತಾರಾ ಜಾನು.? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ