Renukaswamy case update : ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶದ ಗಮನಸೆಳೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟ ದರ್ಶನ್‌ ಮತ್ತು ಪವಿತ್ರಗೌಡ ಸೇರಿದಂತೆ 17 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇದರ ಬೆನ್ನಲ್ಲೆ, ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳ ಮತ್ತು ದರ್ಶನ್‌ ಖೈದಿ ಸಂಖ್ಯೆಯನ್ನು ಸಿನಿಮಾ ಟೈಟಲ್‌ ಮಾಡಿಕೊಳ್ಳಲು ನಿರ್ದೇಶಕರು ಮುಗಿಬಿದ್ದಿದ್ದಾರೆ..


COMMERCIAL BREAK
SCROLL TO CONTINUE READING

ಹೌದು.. ರೇಣುಕಾಸ್ವಾಮಿ ಕೊಲೆ ಘಟನೆಯ ಕುರಿತು ಸಿನಿಮಾ ಟೈಟಲ್ ಗಳಿಗಾಗಿ ಪೈಪೋಟಿ ಶುರುವಾಗಿದೆ. ‘ಡಿ ಗ್ಯಾಂಗ್ ’ಹಾಗೂ ’ಪಟ್ಟಣಗೆರೆ ಶೆಡ್ ’ಎನ್ನುವ ಟೈಟಲ್‌ಗಾಗಿ ಫುಲ್ ಡಿಮ್ಯಾಂಡ್ ಕ್ರಿಯೇಟ್‌ ಆಗಿದೆ.. ಮೆಜೆಸ್ಟಿಕ್ ಟು ಕಾಮಾಕ್ಷಿ ಪಾಳ್ಯ ಟೈಟಲ್ ಬೇಕೆಂದು ಕೂಡಾ ಫಿಲ್ಮ್ ಚೇಂಬರ್‌ಗೆ ಮೊರೆ ಹೋಗಲಾಗಿದೆ.


ಇದನ್ನೂ ಓದಿ:ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೆಸೇಜ್..!  Instagram ಗೆ ಪೋಲಿಸ್‌ ಪತ್ರ 


ಆದರೆ ಫಿಲ್ಮ್ ಚೇಂಬರ್ ಯಾವುದೇ ಟೈಟಲ್ ಕೊಟ್ಟಿಲ್ಲ. ಎರಡು ವರ್ಷಗಳ ಹಿಂದೆಯೇ ಡಿ ಗ್ಯಾಂಗ್ ಎನ್ನುವ ಕಥೆ ಮಾಡಲಾಗಿದೆ, ಕಥೆಗೂ ಈ ಘಟನೆಗೂ ಸಂಬಂಧ ಇಲ್ಲ ಎಂದು ನಿರ್ದೇಶಕರೊಬ್ಬರು ಹೇಳಿದ್ದಾರೆ. ಅಲ್ಲದೆ, ಡಿಗ್ಯಾಂಗ್ ಎನ್ನುವ ಕಥೆ 2 ವರ್ಷ ಮೊದಲೇ ಆಗಿದ್ದು ಘಟನೆಗೆ ಇದಕ್ಕೂ ಸಂಬಂಧ ಇಲ್ಲ ನಿರ್ದೇಶ ರಾಖಿ ಸೋಮ್ಲಿ ಎನ್ನುವರು ಹೇಳಿದ್ದಾರೆ. 


ಮೆಜೆಸ್ಟಿಕ್ ಟು ಕಾಮಾಕ್ಷಿಪಾಳ್ಯ ಟೈಟಲ್ ಗೂ ಡಿಮ್ಯಾಂಡ್ ಜೋರಾಗಿದೆ. ಕ್ಯಾಚಿ ಟೈಟಲ್ ಹಿಂದೆ ಬಿದ್ದಿರುವ ಸಿನಿಮಾ ಮಂದಿ ಈಗ ಫಿಲ್ಮ್ ಚೇಂಬರ್ ಮೊರೆ ಹೋಗುತ್ತಿದ್ದಾರೆ. ಡಿಗ್ಯಾಂಗ್ ಟೈಟಲ್ ಗಾಗಿ ಫಿಲ್ಮ್ ಚೇಂಬರ್ ಗೆ ಹೋಗಿದ್ದರೂ ಕೂಡಾ ಇದನ್ನು ರಿಜೆಕ್ಟ್ ಮಾಡಲಾಗಿದೆ. 


ಇದನ್ನೂ ಓದಿ:ದಶಕದಿಂದ ಸಿನಿರಂಗದಿಂದ ದೂರವಿದ್ದು ಐಷಾರಾಮಿ ಜೀವನ ನಡೆಸುತ್ತಿರುವ ನಟಿ ರೇಖಾ ಆದಾಯದ ಮೂಲವೇನು?


ದರ್ಶನ್ ಜೈಲುಪಾಲು ಘಟನೆಗೆ ಸಂಬಂಧಪಟ್ಟ ಟೈಟಲ್‌ಗಳಿಗೆ ಫಿಲ್ಮ್ ಚೇಂಬರ್‌ನಲ್ಲಿ ಡಿಮ್ಯಾಂಡ್ ಹೆಚ್ಚಿದೆ. ಮೊನ್ನಯಷ್ಟೇ 'ಡಿ ಗ್ಯಾಂಗ್' ಟೈಟಲ್ ರಿಜಿಸ್ಟ್ರೆಷನ್ ಮಾಡಿಸಲು ನಿರ್ದೇಶಕ ರಾಕಿ ಸೋಮ್ಲಿ ಬಂದಿದ್ದರು. ಇದೀಗ ಖೈದಿ ನಂಬರ್ 6106 ಎಂಬ ಟೈಟಲ್ ರಿಜಿಸ್ಟರ್ ಮಾಡಿಸಲು ಭದ್ರಾವತಿ ಕುಮಾರ್ ಮುಂದಾಗಿದ್ದಾರೆ. ಆದರೆ ಫಿಲ್ಮ್ ಚೇಂಬರ್ ಕೇಸ್ ಕೋರ್ಟ್ ನಲ್ಲಿರೋ ಕಾರಣ ಟೈಟಲ್ ನೀಡದೆ ಇರಲು ತೀರ್ಮಾನ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.